Olympics 2036: ಒಲಿಂಪಿಕ್ಸ್‌ಗೆ ಅಹಮದಾಬಾದ್‌ನಲ್ಲಿ 10 ಕ್ರೀಡಾಂಗಣ ನಿರ್ಮಾಣ; ಅಮಿತ್ ಶಾ
2036ರ ಒಲಿಂಪಿಕ್ಸ್ ಆಯೋಜನೆಗೆ ಭಾರತ ಕಳೆದ ಒಂದು ವರ್ಷದಿಂದ ಉತ್ಸುಕತೆ ತೋರುತ್ತಿದ್ದು, ಈಗಾಗಲೇ ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ತನಗೆ ಕೂಟ ನಡೆಸಲು ಆಸಕ್ತಿಯಿದೆ ಎಂದು ಐಒಸಿಗೆ ಅರ್ಜಿಯನ್ನು ಸಲ್ಲಿಸಿದೆ. ಆತಿಥೇಯ ದೇಶದ ಆಯ್ಕೆ ಈ ವರ್ಷ ನಡೆಯಲಿದೆ.


ನವದೆಹಲಿ: ಗುಜರಾತ್‌ನಲ್ಲಿ ಈಗಾಗಲೇ ಒಲಿಂಪಿಕ್ಸ್ ಸಿದ್ಧತೆ ಆರಂಭಿಸಿದ್ದು, ಅಹಮದಾಬಾದ್(Ahmedabad)ನಲ್ಲಿ10 ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಹೇಳಿದ್ದಾರೆ. ಹೀಗಾಗಿ 2036ರ ಒಲಿಂಪಿಕ್ಸ್(Olympics 2036) ಕ್ರೀಡಾಕೂಟವನ್ನು ಭಾರತ ಆಯೋಜಿಸುವುದು ಬಹುತೇಕ ಖಚಿತ ಎನ್ನುವಂತಿದೆ. ಪ್ಯಾರಾ ಅಥ್ಲೀಟ್ಸ್‌ಗಳಿಗೆ ಮೂಲ ಸೌಕರ್ಯ ಒದಗಿಸುವ ಅಭಿವೃದ್ಧಿ ಕಾರ್ಯಕ್ರಮವೊಂದಕ್ಕೆ ವರುವಲ್ ಚಾಲನೆ ನೀಡಿ ಮಾತನಾಡುವ ವೇಳೆ ಶಾ ಈ ವಿಚಾರ ತಿಳಿಸಿದರು.
'ಸರ್ದಾರ್ ಪಟೇಲ್ ಸಂಕೀರ್ಣದಲ್ಲಿ 2036ರ ಒಲಿಂಪಿಕ್ಸ್‌ಗೆ 10 ಕ್ರೀಡಾಂಗಣ ನಿರ್ಮಾಣವಾಗಲಿದೆ. ಇದಕ್ಕೆ ಬೇಕಾದ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿದೆ. ಗುಜರಾತ್ ಮತ್ತು ಕೇಂದ್ರ ಸರ್ಕಾರ ಕ್ರೀಡಾ ವಲಯಕ್ಕೆ ಹಲವು ಯೋಜನೆಗಳನ್ನು ಕೈಗೊಂಡಿದೆ' ಎಂದು ಶಾ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಹಲವು ಬಾರಿ ಭಾರತ 2036ರ ಒಲಿಂಪಿಕ್ಸ್ ಆಯೋಜಿಸಲು ಎಲ್ಲ ಸಿದ್ಧತೆ ನಡೆಸುತ್ತಿದೆ ಎಂದು ಹೇಳಿದ್ದರು.
ಇದನ್ನೂ ಓದಿ Olympics in 2036: ಒಲಿಂಪಿಕ್ಸ್ ಆಯೋಜನೆಗೆ ಭಾರತ ಸಿದ್ಧ: ಅಮಿತ್ ಶಾ
2036ರ ಒಲಿಂಪಿಕ್ಸ್ ಆಯೋಜನೆಗೆ ಭಾರತ ಕಳೆದ ಒಂದು ವರ್ಷದಿಂದ ಉತ್ಸುಕತೆ ತೋರುತ್ತಿದ್ದು, ಈಗಾಗಲೇ ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ತನಗೆ ಕೂಟ ನಡೆಸಲು ಆಸಕ್ತಿಯಿದೆ ಎಂದು ಐಒಸಿಗೆ ಅರ್ಜಿಯನ್ನು ಸಲ್ಲಿಸಿದೆ. ಆತಿಥೇಯ ದೇಶದ ಆಯ್ಕೆ ಈ ವರ್ಷ ನಡೆಯಲಿದೆ. ಭಾರತದೊಂದಿಗೆ ಸೌದಿ ಅರೇಬಿಯಾ ಮತ್ತು ಟರ್ಕಿ ಕೂಡ ಬಿಡ್ ಸಲ್ಲಿಸಲು ಉತ್ಸುಕವಾಗಿವೆ.
ದೇಶವು ಒಲಿಂಪಿಕ್ಸ್ ಕ್ರೀಡಾ ಕೂಟವನ್ನು ಆಯೋಜಿಸಲು ಸಿದ್ಧತೆ ನಡೆಸುತ್ತಿದೆ. 2036ರಲ್ಲಿ ನಡೆಯಲಿರುವ ಒಲಿಂಪಿಕ್ಸ್ ಭಾರತದ ನೆಲದಲ್ಲಿ ನಡೆಯಬೇಕು ಎಂಬುದು ಭಾರತೀಯರ ಕನಸಾಗಿದೆ. ಅದಕ್ಕಾಗಿ ತಯಾರಿ ಮಾಡಿಕೊಂಡು ಮುಂದೆ ಸಾಗುತ್ತಿದ್ದೇವೆ ಎಂದು ಮೋದಿ 78 ನೇ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಹೇಳಿದ್ದರು.