ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

OTD in 2007: ಯುವರಾಜ್‌ ಸಿಂಗ್‌ 6 ಸಿಕ್ಸರ್‌ಗೆ ತುಂಬಿತು 18 ವರ್ಷ

ಪಂದ್ಯದ ವೇಳೆ ಯುವರಾಜ್ ಸಿಂಗ್ ಹಾಗೂ ಇಂಗ್ಲೆಂಡ್ ಆಲ್ರೌಂಡ್ ಆ್ಯಂಡ್ರ್ಯೂ ಫ್ಲಿಂಟಾಫ್ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಸ್ಟುವರ್ಟ್ ಬ್ರಾಡ್‌ ಎಸೆದ 19ನೇ ಓವರ್‌ನಲ್ಲಿ ಯುವರಾಜ್ ಸಿಂಗ್ 6 ಎಸೆತಗಳನ್ನು ಬೌಂಡರಿಯಿಂದಾಚೆಗೆ ಅಟ್ಟಿದರು. ಇದರ ಫಲವಾಗಿ ಭಾರತ 218ರನ್‌ಗಳಿಸಿತು. ಬಳಿಕ ಇಂಗ್ಲೆಂಡ್‌ ತಂಡವನ್ನು ನಿಯಂತ್ರಿಸಿ 18 ರನ್‌ಗಳಿಂದ ಜಯ ದಾಖಲಿಸಿತು.

Yuvraj Singh: ಯುವಿ ಸಿಕ್ಸರ್‌ ಸಾಹಸಕ್ಕೆ 18 ವರ್ಷ

-

Abhilash BC Abhilash BC Sep 19, 2025 9:47 AM

ಬೆಂಗಳೂರು: ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ ಸೆ. 19, 2007(OTD in 2007) ಮರೆಯಲಾಗದ ದಿನ. ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌(Yuvraj Singh) ಒಂದೇ ಓವರ್‌ನಲ್ಲಿ 6 ಸಿಕ್ಸರ್‌ ಸಿಡಿಸಿ ವಿಶ್ವ ದಾಖಲೆ ಬರೆದ ದಿನವಾಗಿದ್ದು ಈ ಐತಿಹಾಸಿಕ ಸಿಕ್ಸರ್ ಸಾಧನೆಗೆ ಇಂದಿಗೆ 18 ವರ್ಷ. ಅಂದು ಯುವಿ 6 ಎಸೆತಗಳಿಗೆ 6 ಸಿಕ್ಸರ್‌ ಸಿಡಿಸಿರುವ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ.

ಡರ್ಬಾನ್‌ನ ಕಿಂಗ್ಸ್‌ಮೈಂಡ್ ಸ್ಟೇಡಿಯಂನಲ್ಲಿ 2007ರ ಸೆಪ್ಟೆಂಬರ್ 19 ರಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 18 ಓವರ್‌ವರೆಗೂ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಉತ್ತಮ ಮೊತ್ತದತ್ತ ದಾಪುಗಾಲಿಟ್ಟಿತ್ತು.



ಈ ವೇಳೆ ಯುವರಾಜ್ ಸಿಂಗ್ ಹಾಗೂ ಇಂಗ್ಲೆಂಡ್ ಆಲ್ರೌಂಡ್ ಆ್ಯಂಡ್ರ್ಯೂ ಫ್ಲಿಂಟಾಫ್ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಸ್ಟುವರ್ಟ್ ಬ್ರಾಡ್‌ ಎಸೆದ 19ನೇ ಓವರ್‌ನಲ್ಲಿ ಯುವರಾಜ್ ಸಿಂಗ್ 6 ಎಸೆತಗಳನ್ನು ಬೌಂಡರಿಯಿಂದಾಚೆಗೆ ಅಟ್ಟಿದರು. ಇದರ ಫಲವಾಗಿ ಭಾರತ 218ರನ್‌ಗಳಿಸಿತು. ಬಳಿಕ ಇಂಗ್ಲೆಂಡ್‌ ತಂಡವನ್ನು ನಿಯಂತ್ರಿಸಿ 18 ರನ್‌ಗಳಿಂದ ಜಯ ದಾಖಲಿಸಿತು

ಯುವರಾಜ್ ಸಿಂಗ್ ಸರಣಿ ಶ್ರೇಷ್ಠ ಆಟಗಾರನಾಗಿಯೂ ಹೊರಹೊಮ್ಮಿದರು. ಯುವಿ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಚುಟುಕು ಕ್ರಿಕೆಟ್‌ನಲ್ಲಿ ಈಗಲೂ ಅದು ಅತಿವೇಗದ ಅರ್ಧಶತಕ ಎನಿಸಿದೆ.