ಮುಲ್ಲನ್‌ಪುರ, ಜೂ.6: ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಕೆ.ಎಲ್ ರಾಹುಲ್(KL Rahul) ಅವರು ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡರು ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಲಾರಂಭಿಸಿದೆ. ಕಾಮೆಂಟ್ರಿ ಮಾಡುತ್ತಿದ್ದ ಗ್ರೇಮ್ ಸ್ವಾನ್ ಅವರು ರಾಹುಲ್ ಅಭಿನಯಕ್ಕೆ ಆಸ್ಕರ್ ಪ್ರಶಸ್ತಿ ನೀಡಬೇಕಿದೆ ಎಂದು ಹೇಳಿದರು.
ಪಂದ್ಯದ 11 ನೇ ಓವರ್‌ನಲ್ಲಿ ಜಿಯಾವುರ್ ರೆಹಮಾನ್ ಶರೀಫಿ ಬೌಲಿಂಗ್ ಮಾಡುತ್ತಿದ್ದಾಗ ಆಫ್ ಸ್ಟಂಪ್ ಹೊರಗೆ ರಾಹುಲ್ ಚೆಂಡು ಹೊಡೆಯಲು ಯತ್ನಿಸಿದಾಗ ಬ್ಯಾಟ್‌ಗೆ ಸವರಿದ ಚೆಂಡು ವಿಕೆಟ್ ಕೀಪರ್ ಕೈ ಸೇರಿತು. ಆಫ್ಘಾನ್ ಆಟಗಾರರು ಔಟ್‌ಗಾಗಿ ಅಂಪೈರ್ ಬಳಿ ಮನವಿ ಮಾಡಿದರು. ಆದರೆ ಅಂಪೈರ್ ಔಟ್ ನೀಡಲಿಲ್ಲ. ರಿವ್ಯೂ ಪಡೆಯುವ ಅವಕಾಶವಿದ್ದರೂ ಆಫ್ಘಾನ್ ನಾಯಕ ಅದನ್ನು ಪಡೆಯಲಿಲ್ಲ. ಸ್ವಲ್ಪ ಸಮಯದ ಟಿವಿ ರಿವ್ಯೂ ಪರಿಶೀಲನೆ ನಡೆಸಿದಾಗ ಚೆಂಡು ಬ್ಯಾಟ್‌ಗೆ ಬಡಿದಿರುವುದು ಕಂಡು ಬಂತು. ಈ ವೇಳೆ ಆಫ್ಘಾನ್ ನಾಯಕ ರಿವ್ಯೂ ಪಡೆಯದ ತಪ್ಪಿಗೆ ಪಶ್ಚಾತ್ತಾಪ ಪಡಬೇಕಾಯಿತು.
ಚೆಂಡು ಬ್ಯಾಟ್‌ಗೆ ಬಡಿದಿದೆ ಎಂದೂ ತಿಳಿದರೂ ಕ್ರೀಸ್‌ನಲ್ಲೇ ನಿಂತ ರಾಹುಲ್ ನಡೆಗೆ ಆಕ್ರೋಶ ಹೊರಹಾಕಿದ ಸ್ವಾನ್, "ಕೆಎಲ್ ರಾಹುಲ್ ಇಲ್ಲಿಗೆ ಬನ್ನಿ, ನಿಮ್ಮ ಆಸ್ಕರ್ ಇಲ್ಲಿದೆ" ಎಂದು ಹೇಳಿದರು.
ರಾಹುಲ್ ಅವರು ಮೊದಲ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್ ಜತೆ 41 ರನ್‌ಗಳ ಜೊತೆಯಾಟವಾಡಿದರು. ರಾಹುಲ್ ತಮ್ಮ ಇನ್ನಿಂಗ್ಸ್‌ನಲ್ಲಿ 9000 ಪ್ರಥಮ ದರ್ಜೆ ರನ್‌ಗಳನ್ನು ದಾಟಿದರು. ಸಿಕ್ಕ ಜೀವದಾನದ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡ ರಾಹುಲ್ ಸದ್ಯ ಅರ್ಧಶತಕದ ಗಡಿ ದಾಟಿದ್ದಾರೆ. ಜೈಸ್ವಾಲ್ 24 ರನ್ ಗಳಿಸಿ ನಿರಾಸೆ ಮೂಡಿಸಿದರು. ಭೋಜನ ವಿರಾಮದ ಬಳಿಕ ಆಟ ಆರಂಭಿಸಿರುವ ಭಾರತ 100 ರಗಡಿ ದಾಟಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಧೋನಿ ಜತೆ ಎಲೈಟ್ ಪಟ್ಟಿ ಸೇರಿದ ರಿಷಭ್ ಪಂತ್; ಈ ಸಾಧನೆಗೈದ ಮೂರನೇ ಭಾರತೀಯ
ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶುಭಮನ್ ಗಿಲ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. 23 ವರ್ಷದ ಸುತಾರ್‌ಗೆ ಕುಲ್‌ದೀಪ್ ಯಾದವ್ ಅಂತಾರಾಷ್ಟ್ರೀಯ ಕ್ಯಾಪ್ ನೀಡಿ ತಂಡಕ್ಕೆ ಸ್ವಾಗತಿಸಿದರು. ಫೆಬ್ರವರಿ 2022 ರಲ್ಲಿ ಆಂಧ್ರಪ್ರದೇಶ ವಿರುದ್ಧದ ಪಂದ್ಯದ ಮೂಲಕ ಸುತಾರ್ ರಾಜಸ್ಥಾನ ಪರ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ಪ್ರಯಾಣವನ್ನು ಪ್ರಾರಂಭಿಸಿದರು.
ಭಾರತ (ಪ್ಲೇಯಿಂಗ್ XI): ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಶುಭಮನ್ ಗಿಲ್(ನಾಯಕ), ರಿಷಭ್ ಪಂತ್(ವಿ.ಕೀ.), ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ಮಾನವ್ ಸುತಾರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ನಾರ್ವೆ ಚೆಸ್ ಗೆದ್ದು ಇತಿಹಾಸ ನಿರ್ಮಿಸಿದ ಆರ್. ಪ್ರಜ್ಞಾನಂದ
ಅಫ್ಘಾನಿಸ್ತಾನ (ಪ್ಲೇಯಿಂಗ್ XI): ಸೇದಿಕುಲ್ಲಾ ಅಟಲ್, ರಹಮಾನುಲ್ಲಾ ಗುರ್ಬಾಜ್, ಅಬ್ದುಲ್ ಮಲಿಕ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ(ನಾಯಕ), ಅಫ್ಸರ್ ಝಜೈ(ವಿ.ಕೀ.), ಅಜ್ಮತುಲ್ಲಾ ಒಮರ್ಜಾಯ್, ಶರಫುದ್ದೀನ್ ಅಶ್ರಫ್, ನಂಗೆಯಾಲಿಯಾ ಖರೋಟೆ, ಜಿಯಾವುರ್ ರಹಮಾನ್ ಶರೀಫಿ, ಮೊಹಮ್ಮದ್ ಶರೀಫಿ.