ನವದೆಹಲಿ: 2026ರ ಏಷ್ಯನ್ ಗೇಮ್ಸ್ (Asian Games 2026) ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಅಂಕುಶ್ ಪಂಘಲ್ (Ankush Panghal) ಪುರುಷರ 80 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅವರ ಈ ಸಾಧನೆಯ ಜೊತೆಗೆ ಭಾರತೀಯ ಬಾಕ್ಸರ್‌ಗಳು ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಕಿಮ್ ಮಿನ್‌ಸಿಯಾಂಗ್ ಅವರನ್ನು ಎದುರಿಸಿದ ಅಂಕುಶ್ 4–0ರ ಸ್ಪ್ಲಿಟ್ ತೀರ್ಪಿನ ಮೂಲಕ ಗೆಲುವು ಸಾಧಿಸಿದರು. ಈ ಮೂಲಕ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ 2018ರ ಬಳಿಕ ಮೊದಲ ಚಿನ್ನದ ಪದಕ ತಂದುಕೊಟ್ಟರು.
ಅಂಕುಶ್ ಸೆಮಿಫೈನಲ್‌ನಲ್ಲಿ ಉಜ್ಬೇಕಿಸ್ತಾನದ ಹಾಲಿ 75 ಕೆಜಿವಿಶ್ವ ಚಾಂಪಿಯನ್ ಫಜ್ಲಿದ್ದೀನ್ ಎರ್ಕಿನ್‌ಬೊಯೆವ್ ಅವರನ್ನು 4–1ರ ಅಂತರದಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿದ್ದರು. ಆರಂಭಿಕ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರೂ, ನಂತರ ತಮ್ಮ ತಂತ್ರವನ್ನು ಬದಲಿಸಿಕೊಂಡು ಎಡಗೈ ನೇರ ಪಂಚ್, ಬಲಗೈ ಹುಕ್ ಹಾಗೂ ಅಪ್ಪರ್‌ಕಟ್‌ಗಳ ಮೂಲಕ ಎದುರಾಳಿಗೆ ತಿರುಗೇಟು ನೀಡಿದರು.
ಏಷ್ಯನ್ ಗೇಮ್ಸ್ ಬಾಕ್ಸಿಂಗ್; ರೋಚಕ ಹೋರಾಟ ನಡೆಸಿ ಚಿನ್ನ ಗೆದ್ದ ಪರ್ವೀನ್ ಹೂಡಾ
ಭಾರತೀಯ ಬಾಕ್ಸರ್‌ಗಳ ಚಿನ್ನದ ಸಾಧನೆ
ಅಂಕುಶ್ ಅವರ ಚಿನ್ನದ ಪದಕದೊಂದಿಗೆ ಭಾರತ ಒಂದೇ ದಿನ ಬಾಕ್ಸಿಂಗ್‌ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದ ಸಾಧನೆ ಮಾಡಿತು. ಲವ್ಲಿನಾ ಬೊರ್ಗೊಹೈನ್ ಮಹಿಳೆಯರ 75 ಕೆ.ಜಿ ವಿಭಾಗದಲ್ಲಿ ಹಾಗೂ ಪರ್ವೀನ್ ಹೂಡಾ ಮಹಿಳೆಯರ 65 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಈ ಸಾಧನೆಯಿಂದ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಬಾಕ್ಸಿಂಗ್‌ಗೆ 12 ವರ್ಷಗಳ ಬಳಿಕ ಚಿನ್ನದ ಪದಕದ ಬರವೂ ಅಂತ್ಯಗೊಂಡಿತು.
ಅಂಕುಶ್ ಅವರ ಗೆಲುವು ಭಾರತೀಯ ಬಾಕ್ಸಿಂಗ್‌ಗೆ ಮಹತ್ವದ ಸಾಧನೆಯಾಗಿದೆ. ಏಷ್ಯನ್ ಗೇಮ್ಸ್‌ನಂತಹ ಪ್ರಮುಖ ಕ್ರೀಡಾಕೂಟದಲ್ಲಿ ವಿಶ್ವ ಚಾಂಪಿಯನ್‌ರನ್ನು ಮಣಿಸಿ ಚಿನ್ನ ಗೆದ್ದಿರುವುದು ಅವರ ಟೂರ್ನಿಯ ಪ್ರದರ್ಶನದ ಪ್ರಮುಖ ಅಂಶವಾಗಿದೆ.
ಏಷ್ಯಾ ಕ್ರೀಡಾಕೂಟ 2026: ಪದಕ ಗೆದ್ದ ಭಾರತೀಯ ಬಾಕ್ಸರ್‌ಗಳು
ಲವ್ಲಿನಾ ಬೊರ್ಗೊಹೈನ್: 75 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ
ಪ್ರವೀಣ್ ಹೋಡಾ: 65 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ
ಅಂಕುಶ್ ಪಂಘಲ್: 80 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ
ಕಪಿಲ್ ಪೊಖಾರಿಯಾ: 90 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ
ನರೇಂದ್ರ ಬರ್ವಾಲ್: 90 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ
ಪ್ರಿಯಾ ಘಂಘಾಸ್: 60 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ