ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Asian Games 2026: ಮಹಿಳೆಯರ ಪಿಸ್ತೂಲ್‌ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಇಶಾ ಸಿಂಗ್!

2026ರ ಏಷ್ಯನ್ ಗೇಮ್ಸ್ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ಇಶಾ ಸಿಂಗ್ ಬೆಳ್ಳಿ ಪದಕ ಗೆದ್ದಿದ್ದಾರೆ. ಫೈನಲ್‌ನಲ್ಲಿ ಚೀನಾದ ಕ್ಸಿಯಾವೊ ವಿರುದ್ಧ ತೀವ್ರ ಪೈಪೋಟಿ ನಡೆಸಿದ ಇಶಾ, ಶೂಟ್‌ಆಫ್‌ನಲ್ಲಿ ಸೋಲು ಅನುಭವಿಸುವ ಮೂಲಕ ಚಿನ್ನದ ಪದಕದಿಂದ ವಂಚಿತರಾದರು. ಅಂತಿಮ ಹಂತದವರೆಗೂ ಇಬ್ಬರ ನಡುವೆ ಸಮಬಲದ ಹೋರಾಟ ನಡೆದಿದ್ದು, ಶೂಟ್‌ಆಫ್‌ನ ಫಲಿತಾಂಶ ಪದಕದ ಬಣ್ಣವನ್ನು ನಿರ್ಧರಿಸಿತು.

ಏಷ್ಯಾ ಕ್ರೀಡಾಕೂಟದ ಶೂಟಿಂಗ್‌ ವಿಭಾಗದಲ್ಲಿ ಬೆಳ್ಳಿ ಗೆದ್ದ ಇಶಾ ಸಿಂಗ್.

ನವದೆಹಲಿ: ಜಪಾನ್‌ ಆತಿಥ್ಯದಲ್ಲಿ ಇದೀಗ ನಡಯುತ್ತಿರುವ 2026ರ ಏಷ್ಯಾ ಕ್ರೀಡಾಕೂಟದಲ್ಲಿ (Asian Games 2026) ಭಾರತದ ಶೂಟರ್ ಇಶಾ ಸಿಂಗ್ (Esha Singh) ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಚಿನ್ನದ ಪದಕಕ್ಕಾಗಿ ನಡೆದ ರೋಚಕ ಹಣಾಹಣಿಯಲ್ಲಿ ಚೀನಾದ ಕ್ಸಿಯಾವೊ ಜಿಯಾರೂಕ್ಸುವಾನ್ ವಿರುದ್ಧ ಶೂಟ್‌ಆಫ್‌ನಲ್ಲಿ ಸೋಲು ಅನುಭವಿಸಿದ ಇಶಾ, ಎರಡನೇ ಸ್ಥಾನ ಪಡೆದುಕೊಂಡರು.

ಫೈನಲ್‌ನಲ್ಲಿ ಉಭಯ ಶೂಟರ್‌ಗಳು ಸಮಬಲದ ಪ್ರದರ್ಶನ ನೀಡಿದ ಕಾರಣ ಚಿನ್ನದ ಪದಕದ ವಿಜೇತರನ್ನು ನಿರ್ಧರಿಸಲು ಶೂಟ್‌ಆಫ್ ನಡೆಸಲಾಯಿತು. ನಿರ್ಣಾಯಕ ಹಂತದಲ್ಲಿ ಚೀನಾದ ಕ್ಸಿಯಾವೊ ಮೂರು ಹಿಟ್‌ಗಳನ್ನು ದಾಖಲಿಸಿದರೆ, ಇಶಾ ಎರಡು ಹಿಟ್‌ಗಳನ್ನು ಗಳಿಸಿದರು. ಈ ಮೂಲಕ ಕ್ಸಿಯಾವೊ ಚಿನ್ನದ ಪದಕ ಗೆದ್ದರೆ, ಇಶಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

ಈ ಗೆಲುವಿನೊಂದಿಗೆ ಇಶಾ ಸಿಂಗ್ ಏಷ್ಯನ್ ಗೇಮ್ಸ್‌ನಲ್ಲಿ ಸತತ ಎರಡನೇ ಬಾರಿ ಮಹಿಳೆಯರ 25 ಮೀಟರ್ ಪಿಸ್ತೂಲ್ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. 2022ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿಯೂ ಅವರು ಇದೇ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ಏಷ್ಯನ್‌ ಗೇಮ್ಸ್‌; ಲಾಂಗ್‌ಜಂಪ್‌ನಲ್ಲಿ ಬೆಳ್ಳಿ ಗೆದ್ದ ಆನ್ಸಿ ಸೋಜನ್

ಅರ್ಹತಾ ಸುತ್ತಿನಲ್ಲಿ 580 ಅಂಕಗಳೊಂದಿಗೆ ಎಂಟನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದ್ದ ಇಶಾ, ಫೈನಲ್‌ನಲ್ಲಿ ಹಲವು ಬಾರಿ ಶೂಟ್‌ಆಫ್ ಎದುರಿಸಿ ಪದಕ ಗೆದ್ದರು. ಭಾರತದ ಮನು ಭಾಕರ್ ಮತ್ತು ರಾಹಿ ಸರ್ನೋಬತ್ ಅರ್ಹತಾ ಸುತ್ತಿನಲ್ಲೇ ಸ್ಪರ್ಧೆಯಿಂದ ಹೊರಬಿದ್ದಿದ್ದರು. ಇಶಾ ಅವರ ಬೆಳ್ಳಿ ಪದಕವು ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಶೂಟಿಂಗ್ ತಂಡದ ಪದಕ ಸಾಧನೆಗೆ ಮತ್ತೊಂದು ಸೇರ್ಪಡೆಯಾಗಿದೆ.

ಇದೇ ವೇಳೆ, ಏಷ್ಯನ್ ಗೇಮ್ಸ್‌ನ ಮಹಿಳೆಯರ 25 ಮೀಟರ್ ಪಿಸ್ತೂಲ್ ತಂಡ ವಿಭಾಗದಲ್ಲಿ ಭಾರತ ಐದನೇ ಸ್ಥಾನ ಪಡೆದಿತ್ತು. ಮನು ಭಾಕರ್, ಇಶಾ ಸಿಂಗ್ ಹಾಗೂ ರಾಹಿ ಸರ್ನೋಬತ್ ಅವರನ್ನೊಳಗೊಂಡ ಭಾರತ ತಂಡವು ಒಟ್ಟು 1,727 ಅಂಕಗಳನ್ನು ಗಳಿಸಿತ್ತು. ತಂಡ ವಿಭಾಗದಲ್ಲಿ ಪದಕ ಗೆಲ್ಲಲು ಸಾಧ್ಯವಾಗದಿದ್ದರೂ, ವೈಯಕ್ತಿಕ ವಿಭಾಗದಲ್ಲಿ ಇಶಾ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಪದಕ ಪಟ್ಟಿಗೆ ಮತ್ತೊಂದು ಪದಕ ಸೇರಿಸಿದರು.