ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

2025ರ ಮಹಿಳಾ ವಿಶ್ವಕಪ್‌ ಟೂರ್ನಿಗೆ ಶ್ರೀಲಂಕಾ ತಂಡ ಪ್ರಕಟ, ಚಮರಿ ಅಟಪಟ್ಟುಗೆ ನಾಯಕತ್ವ!

ಸೆಪ್ಟಂಬರ್‌ 30 ರಿಂದ ನವೆಂಬರ್‌ 2ರವರೆಗೆ ನಡೆಯುವ 2025ರ ಮಹಿಳಾ ವಿಶ್ವಕಪ್‌ ಟೂರ್ನಿಗೆ 15 ಸದಸ್ಯರ ಶ್ರೀಲಂಕಾ ಮಹಿಳಾ ತಂಡವನ್ನು ಪ್ರಕಟಿಸಲಾಗಿದೆ. ಚಮರಿ ಅಟಪಟ್ಟುಗೆ ನಾಯಕತ್ವವನ್ನು ನೀಡಲಾಗಿದೆ. ತಂಡದ ಅತ್ಯಂತ ಹೆಚ್ಚಿನ ಅನುಭವವನ್ನು ಹೊಂದಿರುವ ಚಮರಿ ಅಟಪಟ್ಟು 3877 ರನ್‌ ಹಾಗೂ 45 ವಿಕೆಟ್‌ಗಳನ್ನು ಕಿತ್ತಿದ್ದಾರೆ.

ಮಹಿಳಾ ವಿಶ್ವಕಪ್‌ ಶ್ರೀಲಂಕಾ ತಂಡಕ್ಕೆ ಚಮರಿ ಅಟಪಟ್ಟು.

ನವದೆಹಲಿ: ಮುಂಬರುವ 2025ರ ಮಹಿಳಾ ಏಕದಿನ ವಿಶ್ವಕಪ್‌ (Women World Cup 2025) ಟೂರ್ನಿಗೆ 15 ಸದಸ್ಯರ ಶ್ರೀಲಂಕಾ ಮಹಿಳಾ ತಂಡವನ್ನು ಪ್ರಕಟಿಸಲಾಗಿದೆ. ಈ ಮಹತ್ವದ ಟೂರ್ನಿಯಲ್ಲಿ ಶ್ರೀಲಂಕಾ ತಂಡವನ್ನು (Sri Lanka Squad) ಚಮರಿ ಅಟಪಟ್ಟು (Chamari Athapaththu) ಮುನ್ನಡೆಸಲಿದ್ದಾರೆ. ಇವರು ಶ್ರೀಲಂಕಾ ತಂಡದಲ್ಲಿ ಅತ್ಯಂತ ಅನುಭವಿ ಆಟಗಾರ್ತಿಯಾಗಿದ್ದಾರೆ. ಇವರು ಆಡಿದ 155 ಏಕದಿನ ಪಂದ್ಯಗಳಿಂದ 3877 ರನ್‌ಗಳು ಹಾಗೂ 45 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಂದ ಹಾಗೆ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯು ಸೆಪ್ಟಂಬರ್‌ 30 ರಂದು ಆರಂಭವಾಗಿ, ನವೆಂಬರ್‌ 2 ರಂದು ಫೈನಲ್‌ ಮೂಲಕ ಅಂತ್ಯವಾಗಲಿದೆ.

ಶ್ರೀಲಂಕಾ ತಂಡವು ಅನುಭವಿ ಆಟಗಾರರು ಮತ್ತು ಉದಯೋನ್ಮುಖ ಪ್ರತಿಭೆಗಳ ಒಳಗೊಂಡ ಮಿಶ್ರಣವಾಗಿದೆ. ಅಟಪಟ್ಟು ಅವರ ನಾಯಕತ್ವ ಮತ್ತು ಅನುಭವವು ತಂಡದ ಬೆನ್ನೆಲುಬಾಗಿ ಉಳಿದಿದೆ, ಆದರೆ ಇತ್ತೀಚಿನ ಫಾರ್ಮ್‌ಗಾಗಿ ಹಲವು ಯುವ ಆಟಗಾರ್ತಿಯರನ್ನು ಆಯ್ಕೆ ಮಾಡಲಾಗಿದೆ.

2025ರ ಏಷ್ರಿಲ್‌ ಮತ್ತು ಮೇ ಅವಧಿಯಲ್ಲಿ ನಡೆದಿದ್ದ ತ್ರಿಕೋನ ಏಕದಿನ ಸರಣಿಯಲ್ಲಿ ಡಿಎಮಿ ವಿಹಾಂಗ ಅವರು ತಮ್ಮ ಬೌಲಿಂಗ್‌ ಪ್ರದರ್ಶನದಿಂದ ಎಲ್ಲರ ಗಮನವನ್ನು ಸೆಳೆದಿದ್ದರು. ಅವರು ಆಡಿದ್ದ ಒಂದು ಐದು ವಿಕೆಟ್‌ ಸಾಧನೆ ಸೇರಿದಂತೆ 11 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಶ್ರೀಲಂಕಾ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ.

Asia Cup 2025 Weather Report: ಭಾರತ vs ಯುಎಇ ಪಂದ್ಯಕ್ಕೆ ಮಳೆ ಕಾಟ ಇದೆಯಾ?

ಹರ್ಷಿತಾ ಸಮರವಿಕ್ರಮ ಹಾಗೂ ವಿಷ್ಮಿ ಗುಣರತ್ನೆ ಅವರು ಕೂಡ ಶ್ರೀಲಂಕಾ ತಂಡಕ್ಕೆ ಆಯ್ಕೆಯಾಗುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. 27ರ ಪ್ರಾಯದ ಹರ್ಷಿತಾ ಅವರು 41 ಏಕದಿನ ಪಂದ್ಯಗಳಿಂದ ಒಂದು ಶತಕ ಹಾಗೂ ಹಲವು ಅರ್ಧಶತಕಗಳ ಮೂಲಕ 1,075 ರನ್‌ಗಳನ್ನು ಕಲೆ ಹಾಕಿದ್ದಾರೆ. ಭಾರತದ ವಿರುದ್ದ ಮಹಿಳಾ ಏಷ್ಯಾ ಕಪ್‌ ಟೂರ್ನಿಯ ಫೈನಲ್‌ನಲ್ಲಿ ಉತ್ತಮ ಪ್ರದರ್ಶನವನ್ನು ತೋರುವ ಮೂಲಕ ಅವರು 2024ರ ಆಗಸ್ಟ್‌ ತಿಂಗಳ ಆಟಗಾರ್ತಿ ಎಂಬ ಸಾಧನೆಗೆ ಭಾಜನರಾಗಿದ್ದರು.

ಇನ್ನು ವಿಷ್ಮಿ ಗುಣರತ್ನೆ ಅವರು 2023ರ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯ ಬಳಿಕ ಇದೇ ಮೊದಲ ಬಾರಿ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಇವರು ತಮ್ಮ 20ನೇ ವಯಸ್ಸಿನಲ್ಲಿ ಆಡಿದ 25 ಪಂದ್ಯಗಳಿಂದ 567 ರನ್‌ಗಳನ್ನು ಬಾರಿಸಿದ್ದಾರೆ. ಸೆಪ್ಟಂಬರ್‌ 30 ರಂದು ಗುವಹಾಟಿಯ ಬರ್ಸಪರ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ಆಡುವ ಮೂಲಕ ಶ್ರೀಲಂಕಾ ತಂಡ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ.

Asia Cup T20: ಟಿ20 ಮಾದರಿಯ ಏಷ್ಯಾಕಪ್‌ ದಾಖಲೆಗಳ ಪಟ್ಟಿ ಇಲ್ಲಿದೆ

2025 ಮಹಿಳಾ ವಿಶ್ವಕಪ್‌ ಟೂರ್ನಿಗೆ ಶ್ರೀಲಂಕಾ ತಂಡ

ಚಮರಿ ಅಟಪಟ್ಟು (ನಾಯಕಿ), ಹಸೀನಿ ಪೆರೆರಾ, ವಿಷ್ಮಿ ಗುಣರತ್ನೆ, ಹರ್ಷಿತಾ ಸಮರವಿಕ್ರಮ, ಕವೀಶಾ ದಿಲ್ಹಾರಾ, ನೀಲಾಂಕ್ಷಿ ಡಿ ಸಿಲ್ವಾ, ಅನುಷ್ಕಾ ಸಂಜೀವಾಣಿ, ಇಮೇಶಾ ದುಲ್ಹಾನಿ, ದೇವಾಮಿ ವಿಹಾಂಗ, ಪಿಯೂಮಾ ವಾತ್ಸಾಲ, ಇನೋಕಾ ರಣವೀರ, ಸುಗಂಧಿಕ ಕುಮಾರಿ, ಉದೇಶಿಕಾ ಪ್ರಬೋದನಿ, ಮಾಲ್ಕಿ, ಮದಾರಾ, ಅಚಿನ ಕುಲಸೂರಿಯಾ

ಪ್ರಯಣದ ಮೀಸಲು ಆಟಗಾರ್ತಿ: ಇನೋಷಿ ಫೆರ್ನಾಂಡೊ