ನವದೆಹಲಿ: ಭಾರತ 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚು ಸೇರಿ ಒಟ್ಟು 39 ಪದಕಗಳನ್ನು ಗೆದ್ದು 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ (Commonwealth Games 2026) ತನ್ನ ಅಭಿಯಾನವನ್ನು ಯಶಸ್ವಿಯಾಗಿ ಮುಗಿಸಿದೆ. ಈ ಸಾಧನೆಯೊಂದಿಗೆ ಭಾರತ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಭಾರತದ ಪರ ಬಾಕ್ಸಿಂಗ್ ಅತ್ಯಂತ ಯಶಸ್ವಿ ವಿಭಾಗವಾಗಿ ಹೊರಹೊಮ್ಮಿದ್ದು, ಏಳು ಚಿನ್ನ ಮತ್ತು ಮೂರು ಬೆಳ್ಳಿ ಸೇರಿ ಒಟ್ಟು 10 ಪದಕಗಳನ್ನು ಗೆದ್ದಿದೆ. 14 ಸದಸ್ಯರ ಬಾಕ್ಸಿಂಗ್ ತಂಡದಲ್ಲಿ 10 ಮಂದಿ ಪದಕ ಗೆದ್ದು ಗಮನ ಸೆಳೆದಿದ್ದಾರೆ.
ವೇಟ್‌ಲಿಫ್ಟಿಂಗ್‌ನಲ್ಲಿ ಭಾರತ ಎಂಟು ಪದಕಗಳನ್ನು ತನ್ನ ಖಾತೆಗೆ ಸೇರಿಸಿಕೊಳ್ಳುವ ಮೂಲಕ ಉತ್ತಮ ಕೊಡುಗೆ ನೀಡಿತು. ಅಥ್ಲೆಟಿಕ್ಸ್ ಹಾಗೂ ಜೂಡೋ ವಿಭಾಗಗಳಲ್ಲಿಯೂ ಭಾರತೀಯ ಕ್ರೀಡಾಪಟುಗಳು ಗಮನಾರ್ಹ ಪ್ರದರ್ಶನವನ್ನು ತೋರಿದ್ದಾರೆ. ಆದರೆ ಕೊನೆಯ ದಿನ ಭಾರತಕ್ಕೆ ಯಾವುದೇ ಹೊಸ ಪದಕ ಲಭಿಸಲಿಲ್ಲ. ಜೂಡೋ ಸ್ಪರ್ಧೆಯಲ್ಲಿ ಇಶ್ರೂಪ್ ನರಂಗ್, ಅವತಾರ್ ಸಿಂಗ್ ಹಾಗೂ ಯಶ್ ಘಂಘಾಸ್ ಪದಕ ಸುತ್ತಿಗೆ ಪ್ರವೇಶಿಸಲು ವಿಫಲರಾದರು. ಟ್ರ್ಯಾಕ್ ಸೈಕ್ಲಿಂಗ್‌ನಲ್ಲಿ ರೊನಾಲ್ಡೊ ಸಿಂಗ್ ಲೈತೋಂಜಮ್ ಮತ್ತು ಲಿಶಾ ದಾಸ್ ಕೂಡ ಪದಕ ಗೆಲ್ಲುವಲ್ಲಿ ವಿಫಲರಾದ ಕಾರಣ, ಭಾರತದ ಪದಕಗಳ ಸಂಖ್ಯೆ ಹಿಂದಿನ ದಿನದಂತೆಯೇ 39ಕ್ಕೆ ಸೀಮಿತವಾಯಿತು.
ಕಾಮನ್‌ವೆಲ್ತ್ ಸಮಾರೋಪ ಸಮಾರಂಭದಲ್ಲಿ ಜೈಸ್ಮಿನ್ ಲಂಬೋರಿಯಾ ಭಾರತದ ಧ್ವಜಧಾರಿ
2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಸ್ಟ್ರೇಲಿಯಾ 70 ಚಿನ್ನ, 45 ಬೆಳ್ಳಿ ಹಾಗೂ 56 ಕಂಚು ಸೇರಿ ಒಟ್ಟು 171 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಇಂಗ್ಲೆಂಡ್ 29 ಚಿನ್ನ, 45 ಬೆಳ್ಳಿ ಮತ್ತು 36 ಕಂಚು ಸೇರಿದಂತೆ ಒಟ್ಟು 110 ಪದಕಗಳೊಂದಿಗೆ ಎರಡನೇ ಸ್ಥಾನ ಪಡೆದಿದೆ. ಕೆನಡಾ 19 ಚಿನ್ನ, 20 ಬೆಳ್ಳಿ ಹಾಗೂ 23 ಕಂಚು ಸೇರಿ 62 ಪದಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಭಾರತ 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚು ಸೇರಿ ಒಟ್ಟು 39 ಪದಕಗಳನ್ನು ಗೆದ್ದು ನಾಲ್ಕನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಆತಿಥೇಯ ಸ್ಕಾಟ್ಲೆಂಡ್ ಕೂಡ 39 ಪದಕಗಳನ್ನು (13 ಚಿನ್ನ, 9 ಬೆಳ್ಳಿ, 17 ಕಂಚು) ಗೆದ್ದಿದ್ದರೂ, ಬೆಳ್ಳಿ ಪದಕಗಳ ಸಂಖ್ಯೆಯಲ್ಲಿ ಭಾರತ ಮುನ್ನಡೆ ಸಾಧಿಸಿದ್ದರಿಂದ ಐದನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ನ್ಯೂಜಿಲೆಂಡ್ 10 ಚಿನ್ನ, 14 ಬೆಳ್ಳಿ ಹಾಗೂ 12 ಕಂಚು ಸೇರಿ ಒಟ್ಟು 36 ಪದಕಗಳೊಂದಿಗೆ ಆರನೇ ಸ್ಥಾನ ಪಡೆದಿದ್ದರೆ, ನೈಜೀರಿಯಾ 10 ಚಿನ್ನ, 7 ಬೆಳ್ಳಿ ಮತ್ತು 7 ಕಂಚು ಸೇರಿ 24 ಪದಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.
ಕಾಮನ್‌ವೆಲ್ತ್ ಗೇಮ್ಸ್ 2026 ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಪಟ್ಟಿ
ಚಿನ್ನದ ಪದಕ ವಿಜೇತರು
ಮೀರಾಬಾಯಿ ಚಾನು – ವೇಟ್‌ಲಿಫ್ಟಿಂಗ್ (ಮಹಿಳೆಯರ 48 ಕೆಜಿ)
ಶರ್ಮಿಳಾ ಧಂಕರ – ಪ್ಯಾರಾ ಅಥ್ಲೆಟಿಕ್ಸ್ (ಮಹಿಳೆಯರ ಶಾಟ್‌ಪುಟ್ F57)
ದಿಲೀಪ್ ಮಹಾದು ಗಾವಿತ್ – ಪ್ಯಾರಾ ಅಥ್ಲೆಟಿಕ್ಸ್ (ಪುರುಷರ 100 ಮೀ. T47)
ಅಸ್ಮಿತಾ ದೇಯ್ – ಜೂಡೋ (ಮಹಿಳೆಯರ 48 ಕೆಜಿ)
ಹರ್ಷ್ ಸಿಂಗ್ – ಜೂಡೋ (ಪುರುಷರ 60 ಕೆಜಿ)
ಪ್ರೀತಿ ಪವಾರ್ – ಬಾಕ್ಸಿಂಗ್ (ಮಹಿಳೆಯರ 54 ಕೆಜಿ)
ಜೈಸ್ಮಿನ್ ಲಂಬೋರಿಯಾ – ಬಾಕ್ಸಿಂಗ್ (ಮಹಿಳೆಯರ 57 ಕೆಜಿ)
ಸೋಮನ್ ರಾಣಾ – ಪ್ಯಾರಾ ಅಥ್ಲೆಟಿಕ್ಸ್ (ಪುರುಷರ ಶಾಟ್‌ಪುಟ್ F57)
ಸಾಕ್ಷಿ ಚೌಧರಿ – ಬಾಕ್ಸಿಂಗ್ (ಮಹಿಳೆಯರ 51 ಕೆಜಿ)
ಪ್ರಿಯಾ ಘಂಘಾಸ್ – ಬಾಕ್ಸಿಂಗ್ (ಮಹಿಳೆಯರ 60 ಕೆಜಿ)
ಅರುಂಧತಿ ಚೌಧರಿ – ಬಾಕ್ಸಿಂಗ್ (ಮಹಿಳೆಯರ 70 ಕೆಜಿ)
ಸಚಿನ್ – ಬಾಕ್ಸಿಂಗ್ (ಪುರುಷರ 60 ಕೆಜಿ)
ಅಂಕುಶ್ – ಬಾಕ್ಸಿಂಗ್ (ಪುರುಷರ 80 ಕೆಜಿ)
ಕಾಮನ್‌ವೆಲ್ತ್; 0.04 ಸೆಕೆಂಡ್ ಅಂತರದಲ್ಲಿ ಕಂಚು ಗೆದ್ದ ಗುಲ್ವೀರ್ ಸಿಂಗ್
ಭಾರತದ ಬೆಳ್ಳಿ ಪದಕ ವಿಜೇತರು (17)
ರಿಷಿಕಾಂತ್ ಸಿಂಗ್ – ವೇಟ್‌ಲಿಫ್ಟಿಂಗ್ (ಪುರುಷರ 60 ಕೆಜಿ)
ಮುತ್ತುಪಾಂಡಿ ರಾಜಾ – ವೇಟ್‌ಲಿಫ್ಟಿಂಗ್ (ಪುರುಷರ 65 ಕೆಜಿ)
ಜ್ಞಾನೇಶ್ವರಿ ಯಾದವ್ – ವೇಟ್‌ಲಿಫ್ಟಿಂಗ್ (ಮಹಿಳೆಯರ 53 ಕೆಜಿ)
ವಲ್ಲೂರಿ ಅಜಯ ಬಾಬು – ವೇಟ್‌ಲಿಫ್ಟಿಂಗ್ (ಪುರುಷರ 79 ಕೆಜಿ)
ಸರ್ವೇಶ್ ಕುಶಾರೆ – ಅಥ್ಲೆಟಿಕ್ಸ್ (ಪುರುಷರ ಹೈಜಂಪ್)
ಹರ್ಜಿಂದರ್ ಕೌರ್ – ವೇಟ್‌ಲಿಫ್ಟಿಂಗ್ (ಮಹಿಳೆಯರ 69 ಕೆಜಿ)
ಗುಲ್ವೀರ್ ಸಿಂಗ್ – ಅಥ್ಲೆಟಿಕ್ಸ್ (ಪುರುಷರ 10,000 ಮೀ.)
ಮುರಳಿ ಶ್ರೀಶಂಕರ್ – ಅಥ್ಲೆಟಿಕ್ಸ್ (ಪುರುಷರ ಲಾಂಗ್ ಜಂಪ್)
ಮೊಹಮ್ಮದ್ ಬಾಸಿಲ್ – ಪ್ಯಾರಾ ಅಥ್ಲೆಟಿಕ್ಸ್ (ಪುರುಷರ 100 ಮೀ. T47)
ಲವ್‌ಪ್ರೀತ್ ಸಿಂಗ್ – ವೇಟ್‌ಲಿಫ್ಟಿಂಗ್ (ಪುರುಷರ 110+ ಕೆಜಿ)
ಯಾಮಿನಿ ಮೌರ್ಯ – ಜೂಡೋ (ಮಹಿಳೆಯರ 57 ಕೆಜಿ)
ನೀರಜ್ ಚೋಪ್ರಾ – ಅಥ್ಲೆಟಿಕ್ಸ್ (ಪುರುಷರ ಜಾವೆಲಿನ್ ಥ್ರೋ)
ಪ್ರವೀಣ್ ಚಿತ್ರವೇಲ್ – ಅಥ್ಲೆಟಿಕ್ಸ್ (ಪುರುಷರ ಟ್ರಿಪಲ್ ಜಂಪ್)
ಜೌದ್ಮಣಿ ಸಿಂಗ್ – ಬಾಕ್ಸಿಂಗ್ (ಪುರುಷರ 55 ಕೆಜಿ)
ಶುಭಂ ಜುಯಾಲ್ – ಪ್ಯಾರಾ ಅಥ್ಲೆಟಿಕ್ಸ್ (ಪುರುಷರ ಶಾಟ್‌ಪುಟ್ F57)
ಲವ್ಲಿನಾ ಬೊರ್ಗೊಹೈನ್ – ಬಾಕ್ಸಿಂಗ್ (ಮಹಿಳೆಯರ 75 ಕೆಜಿ)
ನರೇಂದರ್ – ಬಾಕ್ಸಿಂಗ್ (ಪುರುಷರ 90+ ಕೆಜಿ)
Commonwealth Games 2026: ಸಚಿನ್ ಸಿವಾಚ್, ಅಂಕುಶ್ ಪಂಗಲ್‌ಗೆ ಚಿನ್ನದ ಪದಕ!
ಭಾರತದ ಕಂಚಿನ ಪದಕ ವಿಜೇತರು (17)
ಝಂಡು ಕುಮಾರ್ – ಪ್ಯಾರಾ ಪವರ್‌ಲಿಫ್ಟಿಂಗ್ (ಪುರುಷರ ಹೆವಿವೇಟ್)
ಬಿಂದ್ಯಾರಾಣಿ ದೇವಿ – ವೇಟ್‌ಲಿಫ್ಟಿಂಗ್ (ಮಹಿಳೆಯರ 58 ಕೆಜಿ)
ಶಿಲ್ಪಾ ಶೈಲಾ – ಪ್ಯಾರಾ ಅಥ್ಲೆಟಿಕ್ಸ್ (ಮಹಿಳೆಯರ ಶಾಟ್‌ಪುಟ್ F57)
ಸೀಮಾ ಕಾಲಿರಾಮ್ನಾ – ಅಥ್ಲೆಟಿಕ್ಸ್ (ಮಹಿಳೆಯರ ಡಿಸ್ಕಸ್ ಥ್ರೋ)
ಯಶ್ವೀರ್ ಸಿಂಗ್ – ಅಥ್ಲೆಟಿಕ್ಸ್ (ಪುರುಷರ ಜಾವೆಲಿನ್ ಥ್ರೋ)
ತೇಜಸ್ವಿನ್ ಶಂಕರ್ – ಅಥ್ಲೆಟಿಕ್ಸ್ (ಡೆಕಾಥ್ಲಾನ್)
ಸೆಲ್ವ ಪ್ರಭು ತಿರುಮಾರನ್ – ಅಥ್ಲೆಟಿಕ್ಸ್ (ಪುರುಷರ ಟ್ರಿಪಲ್ ಜಂಪ್)
ಉನ್ನತಿ ಶರ್ಮಾ – ಜೂಡೋ (ಮಹಿಳೆಯರ 63 ಕೆಜಿ)
ಗುಲ್ವೀರ್ ಸಿಂಗ್ – ಅಥ್ಲೆಟಿಕ್ಸ್ (ಪುರುಷರ 5,000 ಮೀ.)
ಕಾಮನ್‌ವೆಲ್ತ್ ಗೇಮ್ಸ್ 2026: ಅತಿ ಹೆಚ್ಚು ಪದಕ ಗೆದ್ದ ಟಾಪ್ 10 ದೇಶಗಳು
| ಸ್ಥಾನ | ದೇಶ | ಚಿನ್ನ | ಬೆಳ್ಳಿ | ಕಂಚು | ಒಟ್ಟು |
|---|---|---|---|---|---|
| 1 | ಆಸ್ಟ್ರೇಲಿಯಾ | 70 | 45 | 56 | 171 |
| 2 | ಇಂಗ್ಲೆಂಡ್ | 29 | 45 | 36 | 110 |
| 3 | ಕೆನಡಾ | 19 | 20 | 23 | 62 |
| 4 | ಭಾರತ | 13 | 17 | 9 | 39 |
| 5 | ಸ್ಕಾಟ್ಲೆಂಡ್ | 13 | 9 | 17 | 39 |
| 6 | ನ್ಯೂಜಿಲೆಂಡ್ | 10 | 14 | 12 | 36 |
| 7 | ನೈಜೀರಿಯಾ | 10 | 7 | 7 | 24 |
| 8 | ಜಮೈಕಾ | 10 | 4 | 5 | 19 |
| 9 | ವೇಲ್ಸ್ | 9 | 10 | 12 | 31 |
| 10 | ಮಲೇಷ್ಯಾ | 8 | 3 | 5 | 16 |