ಆರ್ಲಿಂಗ್ಟನ್: ವಿಶ್ವದ ಸೂಪರ್ ಸ್ಟಾರ್ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಅವರ ಫಿಫಾ ವಿಶ್ವಕಪ್ ಗೆಲ್ಲುವ ಕನಸು ಭಗ್ನವಾಯಿತು. ಸ್ಪೇನ್ ವಿರುದ್ಧದ 2026ರ ಫಿಫಾ ವಿಶ್ವಕಪ್ ಟೂರ್ನಿಯ ಅಂತಿಮ 16ರ ಸುತ್ತಿನ ಪಂದ್ಯದಲ್ಲಿ (POR vs SPA) ಪೋರ್ಚುಗಲ್ ತಂಡ ಸೋಲು ಅನುಭವಿಸಿತು. ಡಲ್ಲಾಸ್ ಕ್ರೀಡಾಂಗಣದಲ್ಲಿ ನಡೆದಿದ್ದ ಪ್ರಿ-ಕ್ವಾರ್ಟರ್ ಪಂದ್ಯದಲ್ಲಿ ಮೈಕಲ್ ಮೆರಿನೊ ಅವರ ಏಕೈಕ ಗೋಲಿನ ನೆರವಿನಿಂದ ಸ್ಪೇನ್ ತಂಡ 1–0 ಅಂತರದಲ್ಲಿ ಪೋರ್ಚುಗೀಸ್ ತಂಡದ ಎದುರು ಗೆದ್ದು ಬೀಗಿತು. ಆ ಮೂಲಕ 16 ವರ್ಷಗಳ ನಂತರ ಸ್ಪೇನ್ ತಂಡ ಕ್ವಾರ್ಟರ್ ಫೈನಲ್ಸ್‌ಗೆ ಅರ್ಹತೆ ಪಡೆದಂತಾಯಿತು. ಈ ಸೋಲಿನ ಮೂಲಕ ಪೋರ್ಚುಗಲ್ ತಂಡ ವಿಶ್ವಕಪ್ ಗೆಲ್ಲುವ ಕನಸು ಕಣ್ಣೀರಿನೊಂದಿಗೆ ಅಂತ್ಯವಾಯಿತು.
ಮೆಕಲ್ ಮೆರಿನೊ ಸ್ಪೇನ್ ಪರ ಪಂದ್ಯದಲ್ಲಿ ಏಕೈಕ ಗೋಲು ದಾಖಲಿಸಿದರು. ಅದರಲ್ಲಿಯೂ ವಿಶೇಷವಾಗಿ ಗಾಯದ ಸಮಯದಲ್ಲಿ (90+1 ನಿಮಿಷ) ಗೋಲು ಬಂದಿತು. ಅಲ್ಲದೆ ಮೈಕಲ್ ಮೆರಿನೊ ಬದಲಿ ಆಟಗಾರನಾಗಿ ಮೈದಾನಕ್ಕೆ ಪ್ರವೇಶಿಸಿ ಸ್ಪೇನ್‌ಗೆ ಮ್ಯಾಂಚ್ ವಿನ್ನಿಂಗ್ ಗೋಲು ತಂದುಕೊಟ್ಟರು. ಅವರು ಫೆರಾನ್ ಟೊರೆಸ್ ಅವರಿಂದ ಪಾಸ್ ಪಡೆದು ಗೋಲ್‌ಕೀಪರ್ ಡಿಯೊಗೊ ಕೋಸ್ಟಾ ಅವರನ್ನು ವಂಚಿಸಿ, ಅವರ ಬಲಭಾಗದಲ್ಲಿ ಚೆಂಡನ್ನು ಗೋಲು ಪಟ್ಟಿಗೆ ಸೇರಿುಸುವಲ್ಲಿ ಯಶಸ್ವಿಯಾದರು. ಈ ಗೋಲಿನ ನೆರವಿನಿಂದ ಸ್ಪೇನ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿತು. ಈ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಇಲ್ಲಿಯವರೆಗೆ ಯಾವುದೇ ತಂಡ ಸ್ಪೇನ್ ವಿರುದ್ಧ ಗೋಲು ಗಳಿಸುವಲ್ಲಿ ಯಶಸ್ವಿಯಾಗಿಲ್ಲ.
'ಇದೇ ನನ್ನ ಕೊನೆಯ ವಿಶ್ವಕಪ್': ಸ್ಪೇನ್ ಪಂದ್ಯಕ್ಕೂ ಮುನ್ನ ರೊನಾಲ್ಡೊ ವಿದಾಯ ಘೋಷಣೆ
16 ವರ್ಷಗಳ ನಂತರ ಕ್ವಾರ್ಟರ್ ಫೈನಲ್‌ಗೆ ಸ್ಪೇನ್
ಸ್ಪೇನ್ 2010ರಲ್ಲಿ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು. ಅಂದಿನಿಂದ ಆಡಿದ ಮೂರು ಟೂರ್ನಿಗಳಲ್ಲಿ ಈ ತಂಡ, ಕ್ವಾರ್ಟರ್ ಫೈನಲ್ ತಲುಪಲು ವಿಫಲವಾಗಿತ್ತು. ಚಾಂಪಿಯನ್ ಆದ ಹದಿನಾರು ವರ್ಷಗಳ ನಂತರ, ಸ್ಪ್ಯಾನಿಷ್ ತಂಡವು ಫಿಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ ತಲುಪಿದೆ. ಸ್ಪೇನ್ ತಂಡ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶುಕ್ರವಾರ ಬೆಲ್ಜಿಯಂ ತಂಡವನ್ನು ಎದುರಿಸಲಿದೆ. ಸೋಮವಾರ ತಡರಾತ್ರಿ (ಭಾರತೀಯ ಕಾಲಮಾನ) ಕ್ಯಾಲಿಫೋರ್ನಿಯಾದ ಇಂಗಲ್‌ವುಡ್‌ನಲ್ಲಿ ನಡೆದ ಪಂದ್ಯದಲ್ಲಿ ಯುಎಸ್‌ಎ ಎದುರು ಬೆಲ್ಜಿಯಂ 4-1 ಅಂತರದಲ್ಲಿ ಗೆದ್ದು ಬೀಗಿತು.
ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವಕಪ್ ಕನಸು ಭಗ್ನ
41ರ ವಯಸ್ಸಿನ ಕ್ರಿಸ್ಟಿಯಾನೊ ರೊನಾಲ್ಡೊಗೆ ಇದು ಕೊನೆಯ ವಿಶ್ವಕಪ್ ಎಂದು ನಂಬಲಾಗಿದೆ. ಈ ಟೂರ್ನಿಯಲ್ಲಿ ಅವರು ನಿರೀಕ್ಷೆಗಳನ್ನು ಪೂರೈಸಲು ವಿಫಲರಾದರು. ರೊನಾಲ್ಡೊ ಪೋರ್ಚುಗಲ್ ಪರ ಐದು ಪಂದ್ಯಗಳಲ್ಲಿ ಮೂರು ಗೋಲುಗಳನ್ನು ಗಳಿಸಿದರು. ಈ ಗೋಲುಗಳಲ್ಲಿ ಎರಡು ಗೋಲುಗಳು ಮೊದಲ ಬಾರಿ ಟೂರ್ನಿಯಲ್ಲಿ ಆಡಿದ ಉಜ್ಬೇಕಿಸ್ತಾನ್ ವಿರುದ್ಧ ಬಂದ್ದಿದ್ದವು ಮತ್ತು ಇನ್ನೊಂದು ಗೋಲು 32ನೇ ಸುತ್ತಿನ ಪಂದ್ಯದಲ್ಲಿ ಕ್ರೊಯೇಷ್ಯಾ ವಿರುದ್ಧ ಪೆನಾಲ್ಟಿ ಮೂಲಕ ಗೋಲು ದಾಖಲಾಗಿತ್ತು.
ಬೆಲ್ಜಿಯಂಗೆ ಮಣಿದ ಯುಎಸ್‌ಎ
ಇದೇ ದಿನ ನಡೆದಿದ್ದ ಮತ್ತೊಂದು ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ಹಾಗೂ ಯುಎಸ್‌ಎ ತಂಡಗಳು ಕಾದಾಟ ನಡೆಸಿದ್ದವ. ಈ ಪಂದ್ಯದಲ್ಲಿ ಅಧಿಕಾರಯುತ ಪ್ರದರ್ಶನವನ್ನು ತೋರಿದ ಬೆಲ್ಜಿಯಂ ತಂಡ, 4-0 ಅಂತರದಲ್ಲಿ ಆತಿಥೇಯ ಯುಎಸ್‌ಎ ತಂಡವನ್ನು ಮಣಿಸಿತು ಹಾಗೂ ಅಂತಿಮ 8 ರಂದು ಸುತ್ತಿಗೆ ಲಗ್ಗೆ ಇಟ್ಟಿತು. ಬೆಲ್ಜಿಯಂ ಪರ ಚಾರ್ಲ್ಸ್ ಡಿ ಕೆಟೆಲೆರೆ ( 9 ನಿಮಿಷ, 33ನೇ ನಿಮಿಷ) ಅವರು ಎರಡು ಗೋಲು ಗಳಿಸಿದರೆ, ಹ್ಯಾನ್ಸ್ ವಣಕೆನ್ (57ನೇ ನಿಮಿಷ) ಮತ್ತು ರೊಮೆಲೊ ಲುಕಾಕು ( 90+3) ಅವರು ತಲಾ ಒಂದೊಂದು ಗೋಲು ಪಡೆದರು. ಇನ್ನು ಯುಎಸ್ ಪರ ಮಲಿಕ್ ಟಿಲ್ಲಾಮನ್ 31ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿದರು.
ಬೆಲ್ಜಿಯಂ ತಂಡ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜುಲೈ 11 ರಂದು ಪೋರ್ಚುಗಲ್ ಎದುರು ಗೆದ್ದಿದ್ದ ಸ್ಪೇನ್ ಎದುರು ಕಾದಾಟ ನಡೆಸಲಿದೆ. ಈ ಮಹತ್ವದ ಕಾದಾಟ ಲಾಸ್ ಏಂಜಲೀಸ್ ಕ್ರೀಡಾಂಗಣದಲ್ಲಿ ಜರುಗಲಿದೆ.