ನವದೆಹಲಿ: ವಿಶ್ವ ನಂ.1 ಬಾಕ್ಸರ್ ಜೈಸ್ಮಿನ್ ಲಂಬೋರಿಯಾ (Jaismine Lamboria) ಅವರು 2026ರ ಕಾಮನ್‌ವೆಲ್ತ್ ಕ್ರೀಡಾಕೂಟದ (Commonwealth Games 2026) ಮಹಿಳೆಯರ 57 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಉತ್ತರ ಐರ್ಲೆಂಡ್‌ನ ಮೈಕೇಲಾ ವಾಲ್ಶ್ ಅವರನ್ನು 5-0 ಅಂತರದಲ್ಲಿ ಏಕಪಕ್ಷೀಯವಾಗಿ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಹಾಲಿ ವಿಶ್ವ ಚಾಂಪಿಯನ್ ಜೈಸ್ಮಿನ್ ಲಂಬೋರಿಯಾ ಅವರಿಗೆ ಮೊದಲ ಸುತ್ತಿನಲ್ಲಿ ಉತ್ತರ ಐರ್ಲೆಂಡ್‌ನ ಮೈಕೇಲಾ ವಾಲ್ಶ್‌ನಿಂದ ತೀವ್ರ ಪೈಪೋಟಿ ಎದುರಾಯಿತು. ಮೊದಲ ಸುತ್ತಿನಲ್ಲಿ ಇಬ್ಬರು ತೀರ್ಪುಗಾರರು ವಾಲ್ಶ್ ಪರ ತೀರ್ಪು ನೀಡಿದರೆ, ಉಳಿದ ಮೂವರು ತೀರ್ಪುಗಾರರು ಜೈಸ್ಮಿನ್ ಅವರಿಗೆ ಮುನ್ನಡೆ ನೀಡಿದರು. ಆದರೆ ಎರಡನೇ ಸುತ್ತಿನಲ್ಲಿ ಜೈಸ್ಮಿನ್ ಲಂಬೋರಿಯಾ ಸಂಪೂರ್ಣ ಹಿಡಿತ ಸಾಧಿಸಿದರು. ನಿಖರ ಹಾಗೂ ಪರಿಣಾಮಕಾರಿ ಪಂಚ್‌ಗಳ ಮೂಲಕ ಎದುರಾಳಿಯನ್ನು ಮಣಿಸಿದ ಅವರು, ಎಲ್ಲಾ ಐವರು ತೀರ್ಪುಗಾರರ ಅಂಕಪಟ್ಟಿಯಲ್ಲಿ ಎರಡನೇ ಸುತ್ತನ್ನು ತಮ್ಮದಾಗಿಸಿಕೊಂಡು ಪಂದ್ಯದಲ್ಲಿ ಮೇಲುಗೈ ಸಾಧಿಸಿದರು.
ಟ್ರಿಪಲ್ ಜಂಪ್‌ನಲ್ಲಿ ಅವಳಿ ಪದಕ ಗೆದ್ದ ಭಾರತ; ಬಾಕ್ಸಿಂಗ್‌ನಲ್ಲಿ ಜೈಸ್ಮಿನ್‌ಗೆ ಚಿನ್ನ
15 ನಿಮಿಷಗಳಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ
ಜೈಸ್ಮಿನ್ ಲಂಬೋರಿಯಾ ಅವರ ಚಿನ್ನದ ಗೆಲುವಿನೊಂದಿಗೆ ಕಾಮನ್‌ವೆಲ್ತ್ ಕ್ರೀಡಾಕೂಟ 2026ರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಅದ್ಭುತ ಪ್ರದರ್ಶನ ಮುಂದುವರಿದಿದೆ. ಇದಕ್ಕೂ ಮುನ್ನ 10ನೇ ದಿನದ ಸ್ಪರ್ಧೆಯಲ್ಲಿ ಪ್ರೀತಿ ಪವಾರ್ ಚಿನ್ನದ ಪದಕ ಗೆದ್ದು ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟಿದ್ದರು.
ಇದರೊಂದಿಗೆ ಬಾಕ್ಸಿಂಗ್‌ನಲ್ಲಿ ಇದುವರೆಗೆ ನಡೆದಿರುವ ಎರಡೂ ಫೈನಲ್ ಪಂದ್ಯಗಳಲ್ಲಿ ಭಾರತ ಚಿನ್ನದ ಪದಕ ಗೆದ್ದಂತಾಗಿದೆ. ಜೈಸ್ಮಿನ್ ಲಂಬೋರಿಯಾ ಮತ್ತು ಪ್ರೀತಿ ಪವಾರ್ ಅವರ ಸಾಧನೆಯಿಂದ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ಬಾಕ್ಸಿಂಗ್‌ನಲ್ಲಿ ಭಾರತದ ಒಟ್ಟು ಚಿನ್ನದ ಪದಕಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
10ನೇ ದಿನ ಬಾಕ್ಸಿಂಗ್‌ನಲ್ಲಿ ಭಾರತದ ಉಳಿದ ಪಂದ್ಯಗಳು
ಭಾರತದ ಪದಕ ಬೇಟೆ ಇನ್ನೂ ಮುಂದುವರಿದಿದೆ. 10ನೇ ದಿನದ ಸ್ಪರ್ಧೆಯಲ್ಲಿ ಭಾರತದ ಬಾಕ್ಸರ್‌ಗಳ ಇನ್ನೂ 8 ಪಂದ್ಯಗಳು ಬಾಕಿಯಿದ್ದು, ಅವುಗಳಲ್ಲಿ ಮತ್ತಷ್ಟು ಪದಕಗಳ ನಿರೀಕ್ಷೆ ಮೂಡಿದೆ.
ಜೈಸ್ಮಿನ್ ಲಂಬೋರಿಯಾ ಅವರು ಇದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ಲೆಸೊಥೊದ ರಪೆಲಾಂಗ್ ಮಾಸೆಲೆಲಾ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದ್ದರು. ಎರಡನೇ ಸುತ್ತಿನಲ್ಲಿ ಎದುರಾಳಿಗೆ ಮೂರು ಬಾರಿ ಸ್ಟ್ಯಾಂಡಿಂಗ್ ಕೌಂಟ್ ವಿಧಿಸಲ್ಪಟ್ಟ ನಂತರ, ರೆಫರಿ ಪಂದ್ಯವನ್ನು ಸ್ಥಗಿತಗೊಳಿಸಿ ಜೈಸ್ಮಿನ್ ಅವರನ್ನು ಫೈನಲ್‌ಗೆ ಮುನ್ನಡೆಸಿದರು.
ಕಾಮನ್ವೆಲ್ತ್ ಬಾಕ್ಸಿಂಗ್; ಪ್ರೀತಿ ಪವಾರ್ ಚಿನ್ನದ ಪಂಚ್
2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 60 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದ ಜೈಸ್ಮಿನ್, ಈ ಬಾರಿ ಗ್ಲಾಸ್ಗೋದಲ್ಲಿ ಅದನ್ನು ಚಿನ್ನದ ಪದಕವಾಗಿ ಪರಿವರ್ತಿಸಿಕೊಂಡರು. 2022ರ ಚಾಂಪಿಯನ್ ಮೈಕೇಲಾ ವಾಲ್ಶ್ ಅವರನ್ನು ಮಣಿಸುವ ಮೂಲಕ, 2025ರಲ್ಲಿ ಗೆದ್ದಿದ್ದ ವಿಶ್ವ ಚಾಂಪಿಯನ್ ಪಟ್ಟಿಗೆ ಇದೀಗ ಕಾಮನ್‌ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕವನ್ನೂ ಸೇರಿಸಿಕೊಂಡಿದ್ದಾರೆ. ಇದರೊಂದಿಗೆ ಮಹಿಳೆಯರ 57 ಕೆಜಿ ವಿಭಾಗದ ಅಗ್ರ ಬಾಕ್ಸರ್ ಎಂಬ ತಮ್ಮ ಸ್ಥಾನವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
10ನೇ ದಿನ ಬಾಕ್ಸಿಂಗ್‌ನಲ್ಲಿ ಭಾರತದ ಉಳಿದ ಪಂದ್ಯಗಳ ವೇಳಾಪಟ್ಟಿ
ಸಂಜೆ 4:45 – ಜದುಮಣಿ ಸಿಂಗ್ ಮಾಂಡೆಂಗ್‌ಬಾಮ್ (ಪುರುಷರ 55 ಕೆಜಿ)
ರಾತ್ರಿ 9:00 – ಸಾಕ್ಷಿ (ಮಹಿಳೆಯರ 51 ಕೆಜಿ)
ರಾತ್ರಿ 9:15 – ಪ್ರಿಯಾ (ಮಹಿಳೆಯರ 60 ಕೆಜಿ)
ರಾತ್ರಿ 9:45 – ಅರುಂಧತಿ ಚೌಧರಿ (ಮಹಿಳೆಯರ 70 ಕೆಜಿ)
ರಾತ್ರಿ 10:15 – ಲವ್ಲಿನಾ ಬೊರ್ಗೊಹೇನ್ (ಮಹಿಳೆಯರ 75 ಕೆಜಿ)
ರಾತ್ರಿ 10:45 – ಸಚಿನ್ (ಪುರುಷರ 60 ಕೆಜಿ)
ರಾತ್ರಿ 11:15 – ಅಂಕುಶ್ ಪಂಘಾಲ್ (ಪುರುಷರ 80 ಕೆಜಿ)
ರಾತ್ರಿ 11:45 – ನರೇಂದ್ರ (ಪುರುಷರ 90+ ಕೆಜಿ)