ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

CWG 2026: ಸಾಕ್ಷಿ ಮಲಿಕ್‌, ಪ್ರಿಯಾ ಘಂಘಾಸ್‌, ಅರುಂಧತಿಗೆ ಚಿನ್ನದ ಪದಕ, ಲವ್ಲಿನಾಗೆ ಬೆಳ್ಳಿ!

2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಬಾಕ್ಸರ್‌ಗಳಾದ ಸಾಕ್ಷಿ ಚೌಧರಿ, ಪ್ರಿಯಾ ಘಂಘಾಸ್ ಹಾಗೂ ಅರುಂಧತಿ ಚೌಧರಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ತಮ್ಮ ತಮ್ಮ ವಿಭಾಗಗಳ ಫೈನಲ್‌ನಲ್ಲಿ ಗೆಲುವು ಸಾಧಿಸಿದ ಈ ಮೂವರು ಬಾಕ್ಸರ್‌ಗಳು ಭಾರತಕ್ಕೆ ತಲಾ ಚಿನ್ನದ ಪದಕ ತಂದುಕೊಟ್ಟು ದೇಶದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದರು.

ಸಾಕ್ಷಿ, ಪ್ರಿಯಾ, ಅರುಂಧತಿಗೆ ಚಿನ್ನದ ಪದಕ.

ನವದೆಹಲಿ: ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ (Commonwealth Game 2026) ಭಾರತದ ಪದಕ ಬೇಟೆ ಜೋರಾಗಿದೆ. ಬಾಕ್ಸಿಂಗ್‌ನಲ್ಲಿ ಸಾಕ್ಷಿ ಚೌಧರಿ, ಪ್ರಿಯಾ ಘಂಘಾಸ್, ಅರುಂಧತಿ ಚೌಧರಿ ಹಾಗೂ ಸಚಿನ್ ತಮ್ಮ ತಮ್ಮ ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದು ಭಾರತದ ಪದಕಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಇದೇ ವೇಳೆ ಮಹಿಳೆಯರ 63 ಕೆಜಿ ಜುಡೋ ವಿಭಾಗದಲ್ಲಿ ಉನ್ನತಿ ಶರ್ಮಾ ದಕ್ಷಿಣ ಆಫ್ರಿಕಾದ ಸ್ಕೈ ನೋಸ್ಟರ್ ಅವರನ್ನು ಮಣಿಸಿ ಕಂಚಿನ ಪದಕ ಗೆದ್ದಿದ್ದಾರೆ.

ಇದುವರೆಗೆ ಭಾರತ ಒಟ್ಟು 36 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಮತ್ತು ಯಶ್ ವೀರ್ ಸಿಂಗ್ ಭಾರತಕ್ಕೆ ಡಬಲ್ ಪೋಡಿಯಂ ಸಾಧನೆ ತಂದುಕೊಟ್ಟಿದ್ದರೆ, ತೇಜಸ್ವಿನ್ ಶಂಕರ್ ಡೆಕಾಥ್ಲಾನ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದು, ಈ ವಿಭಾಗದಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಸಾಧನೆ ಮಾಡಿದ್ದಾರೆ. ಆದರೆ, ಮಹಿಳೆಯರ 75 ಕೆಜಿ ವಿಭಾಗದ ಫೈನಲ್‌ನಲ್ಲಿ ಲವ್ಲಿನಾ ಬೊರ್ಗೊಹೇನ್ ಸೋತು ಬೆಳ್ಳಿ ಪದಕಕ್ಕೆ ಸೀಮಿತರಾದರು.

CWG 2026: ಫೈನಲ್‌ನಲ್ಲಿ ಸೋತ ಜದುಮಣಿ ಸಿಂಗ್ ಮಾಂಡೆಂಗ್‌ಬಾಮ್‌ಗೆ ಬೆಳ್ಳಿ ಪದಕ, ಭಾರತಕ್ಕೆ 30ನೇ ಪದಕ!

ಕಾಮನ್‌ವೆಲ್ತ್ ಕ್ರೀಡಾಕೂಟ ಜುಡೋ ಸ್ಪರ್ಧೆಯಲ್ಲಿ ಭಾರತಕ್ಕೆ ಐತಿಹಾಸಿಕ ಯಶಸ್ಸು ದೊರೆತಿದೆ. ಅಸ್ಮಿತಾ ದೇ ಮತ್ತು ಹರ್ಷ್ ಸಿಂಗ್ ತಮ್ಮ ತಮ್ಮ ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದು ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅಸ್ಮಿತಾ ದೇ ಅವರ ಚಿನ್ನದ ಪದಕ ಕಾಮನ್‌ವೆಲ್ತ್ ಕ್ರೀಡಾಕೂಟದ ಜುಡೋ ಇತಿಹಾಸದಲ್ಲಿ ಭಾರತಕ್ಕೆ ಲಭಿಸಿದ ಮೊದಲ ಚಿನ್ನದ ಪದಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಳಿಕ ಹರ್ಷ್ ಸಿಂಗ್ ಕೂಡ ಚಿನ್ನ ಗೆದ್ದು ಭಾರತದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು.

ಇನ್ನೊಂದೆಡೆ, ಯಾಮಿನಿ ಮೌರ್ಯ ಕೂಡ ಚಿನ್ನಕ್ಕಾಗಿ ಹೋರಾಟ ನಡೆಸಿದರೂ, ಅಂತಿಮವಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಕ್ರೀಡಾಕೂಟದ ಉಪಾಂತ್ಯ ದಿನ ಭಾರತಕ್ಕೆ ಇನ್ನೂ ಹಲವು ವಿಭಾಗಗಳಲ್ಲಿ ಪದಕ ಗೆಲ್ಲುವ ಅವಕಾಶಗಳಿದ್ದು, ವಿಶೇಷವಾಗಿ ಚಿನ್ನದ ಪದಕಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆ ಮೂಡಿದೆ.

CWG 2026: ಬಾಕ್ಸಿಂಗ್‌ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡ ಜೈಸ್ಮಿನ್‌ ಲಂಬೋರಿಯಾ!

ಸಾಕ್ಷಿಗೆ ಏಕಪಕ್ಷೀಯ ಜಯ

ಮಹಿಳೆಯರ 51 ಕೆಜಿ ವಿಭಾಗದ ಫೈನಲ್‌ನಲ್ಲಿ ಸಾಕ್ಷಿ ಚೌಧರಿ ಇಂಗ್ಲೆಂಡ್‌ನ ರೂಬಿ ವೈಟ್ ವಿರುದ್ಧ 5-0 ಅಂಕಗಳ ಏಕಮತದ ತೀರ್ಪಿನಿಂದ ಗೆದ್ದು ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಪಂದ್ಯದ ಆರಂಭದಿಂದ ಅಂತ್ಯದವರೆಗೆ ಸಂಪೂರ್ಣ ಮೇಲುಗೈ ಸಾಧಿಸಿದ ಸಾಕ್ಷಿ, ಎದುರಾಳಿಯ ದಾಳಿಗಳನ್ನು ಯಶಸ್ವಿಯಾಗಿ ತಡೆದರು. ವಿಶೇಷವಾಗಿ ತಮ್ಮ ಬಲಗೈಯಿಂದ ನಿಖರ ಕೌಂಟರ್ ಪಂಚ್‌ಗಳನ್ನು ಬಾರಿಸಿ ಪಂದ್ಯವನ್ನು ನಿಯಂತ್ರಿಸಿದರು. ಅಂತಿಮ ಕ್ಷಣಗಳಲ್ಲಿ ರೂಬಿ ವೈಟ್ ತಿರುಗೇಟು ನೀಡಲು ಪ್ರಯತ್ನಿಸಿದರೂ, ಸಾಕ್ಷಿ ಯಾವುದೇ ಒತ್ತಡಕ್ಕೆ ಒಳಗಾಗದೆ ಗೆಲುವು ದಾಖಲಿಸಿದರು.

ಪ್ರಿಯಾ ಘಂಘಾಸ್‌ಗೆ ಭರ್ಜರಿ ಜಯ

ಮಹಿಳೆಯರ 60 ಕೆಜಿ ವಿಭಾಗದ ಫೈನಲ್‌ನಲ್ಲಿ ಭಾರತದ ಪ್ರಿಯಾ ಘಂಘಾಸ್ ಕೆನಡಾದ ಮೇರಿ-ಬಥೂಲ್ ಅಲ್-ಅಹ್ಮದಿಯಾ ಅವರನ್ನು 4-1 ವಿಭಜಿತ ತೀರ್ಪಿನ ಮೂಲಕ ಮಣಿಸಿ ಚಿನ್ನದ ಪದಕ ಗೆದ್ದರು. ಫೈನಲ್ ಪಂದ್ಯ ಆರಂಭದಿಂದ ಅಂತ್ಯದವರೆಗೆ ತೀವ್ರ ಪೈಪೋಟಿಯಿಂದ ಕೂಡಿತ್ತು. ನಿರ್ಣಾಯಕ ಕೊನೆಯ ಸುತ್ತಿನಲ್ಲಿ ಇಬ್ಬರೂ ಬಾಕ್ಸರ್‌ಗಳು ಭರ್ಜರಿ ಪಂಚ್‌ಗಳ ವಿನಿಮಯ ನಡೆಸಿದರು. ದಣಿವಿನ ಲಕ್ಷಣಗಳು ಕಂಡುಬಂದರೂ ಪ್ರಿಯಾ ಆಕ್ರಮಣಕಾರಿ ಆಟ ಮುಂದುವರಿಸಿ, ನಾಲ್ವರು ತೀರ್ಪುಗಾರರ ಮೆಚ್ಚುಗೆ ಗಳಿಸುವಷ್ಟು ಪರಿಣಾಮಕಾರಿ ಪಂಚ್‌ಗಳನ್ನು ಬಾರಿಸಿದರು. ಪ್ರಿಯಾ ಅವರ ಗೆಲುವಿನೊಂದಿಗೆ ಕ್ರೀಡಾಂಗಣದಲ್ಲಿ ನೆರೆದಿದ್ದ ಭಾರತೀಯ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.

CWG 2026: ಫೈನಲ್‌ನಲ್ಲಿ ಸೋತ ಜದುಮಣಿ ಸಿಂಗ್ ಮಾಂಡೆಂಗ್‌ಬಾಮ್‌ಗೆ ಬೆಳ್ಳಿ ಪದಕ, ಭಾರತಕ್ಕೆ 30ನೇ ಪದಕ!

ಅರುಂಧತಿ ಚೌಧರಿ ಪ್ರಾಬಲ್ಯ

ಭಾರತದ ಬಾಕ್ಸಿಂಗ್ ಸಂಭ್ರಮ ಅಲ್ಲಿಗೇ ನಿಲ್ಲಲಿಲ್ಲ. ಮಹಿಳೆಯರ 70 ಕೆಜಿ ವಿಭಾಗದ ಫೈನಲ್‌ನಲ್ಲಿ ಅರುಂಧತಿ ಚೌಧರಿ ಇಂಗ್ಲೆಂಡ್‌ನ ಶಾಂಟೆಲ್ ರೀಡ್ ಅವರನ್ನು ಸಂಪೂರ್ಣವಾಗಿ ಮಣಿಸಿ ಚಿನ್ನದ ಪದಕ ಗೆದ್ದರು. ಇದರೊಂದಿಗೆ ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದ ಭಾರತದ ಐದನೇ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟ ಲವ್ಲಿನಾ

ಮಹಿಳೆಯರ 75 ಕೆಜಿ ಬಾಕ್ಸಿಂಗ್ ವಿಭಾಗದ ಫೈನಲ್‌ನಲ್ಲಿ ಭಾರತದ ಸ್ಟಾರ್ ಬಾಕ್ಸರ್ ಹಾಗೂ ಒಲಿಂಪಿಕ್ ಪದಕ ವಿಜೇತೆ ಲವ್ಲಿನಾ ಬೊರ್ಗೊಹೇನ್ ಸೋಲು ಅನುಭವಿಸಿದ್ದಾರೆ. ಚಿನ್ನದ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ ಆಸ್ಟ್ರೇಲಿಯಾದ ಎಮ್ಮಾ-ಸು ಗ್ರೀನ್‌ಟ್ರಿ ವಿರುದ್ಧ ಲವ್ಲಿನಾ 1-4ರ ವಿಭಜಿತ ತೀರ್ಪಿನಿಂದ ಪರಾಭವಗೊಂಡರು. ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಫೈನಲ್‌ನಲ್ಲಿ ಕೊನೆಯವರೆಗೂ ಹೋರಾಟ ನಡೆಸಿದರೂ ಚಿನ್ನ ಕೈತಪ್ಪಿದ್ದು, ಲವ್ಲಿನಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.