ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

China Open 2025: ಕ್ವಾರ್ಟರ್‌ಫೈನಲ್ಸ್‌ಗೆ ಪ್ರವೇಶಿಸಿದ ಸಾತ್ವಿಕ್‌ಸಾಯಿರಾಜ್‌-ಚಿರಾಗ್‌ ಶೆಟ್ಟಿ ಜೋಡಿ!

ಭಾರತದ ಸಾತ್ವಿಕ್‌ಸಾಯಿರಾಜ್‌ ರಣಕಿ ರೆಡ್ಡಿ ಹಾಗೂ ಚಿರಾಗ್‌ಶೆಟ್ಟಿ ಭಾರತದ ಜೋಡಿಯು ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಮಾಡಿದೆ. ಪ್ರೀಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಜೋಡಿ, ಚೈನೀಸ್‌ ತೈಪೆಯ ಚಿಯು ಹಿಸಿಯಾಂಗ್‌ ಚಿಹೆ ಹಾಗೂ ವಾಂಗ್‌ ಚಿ ಲಿನ್‌ ಜೋಡಿಯ ವಿರುದ್ಧ ಗೆಲುವು ಪಡೆಯಿತು.

ಚೀನಾ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್ಸ್‌ಗೆ ಸಾತ್ವಿಕ್‌-ಚಿರಾಗ್‌ ಜೋಡಿ.

ಬೀಜಿಂಗ್‌ (ಚೀನಾ): ಭಾರತದ ಪುರುಷರ ಡಬಲ್ಸ್‌ ಜೋಡಿಯಾದ ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ (Satwiksairaj Rankireddy) ಮತ್ತು ಚಿರಾಗ್‌ ಶೆಟ್ಟಿ (Chirag Shetty) ಅವರು 2025ರ ಚೀನಾ ಓಪನ್‌ (China Open 2025) ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ಸ್‌ಗೆ ಲಗ್ಗೆ ಇಟ್ಟಿದ್ದಾರೆ. ಇವರು ಗುರುವಾರ ನಡೆದಿದ್ದ ಪ್ರೀಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಚೈನೀಸ್‌ ತೈಪೆಯ ಚಿಯು ಹಿಸಿಯಾಂಗ್‌ ಚಿಹೆ ಹಾಗೂ ವಾಂಗ್‌ ಚಿ ಲಿನ್‌ ಜೋಡಿಯ ವಿರುದ್ಧ ಗೆಲುವು ಪಡೆದಿದ್ದಾರೆ. ಆ ಮೂಲಕ ಚೀನಾ ಓಪನ್‌ನಲ್ಲಿ ಪ್ರಶಸ್ತಿ ಗೆಲ್ಲುವ ಭರವಸೆಯನ್ನು ಭಾರತದ ಜೋಡಿ ಮೂಡಿಸಿದೆ.

ಸಾತ್ವಿಕ್‌ಸಾಯಿರಾಜ್‌ ರಣಕಿ ರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ ಜೋಡಿ ಹಾಂಕಾಂಗ್‌ ಓಪನ್‌ ಟೂರ್ನಿಯಲ್ಲಿ ರನ್ನರ್‌ಅಪ್‌ ಆಗಿತ್ತು. ಇದೀಗ ಅದೇ ಲಯವನ್ನು ಈ ಜೋಡಿ ಮುಂದುವರಿಸಿದೆ. ಈ ಜೋಡಿಯು 33 ನಿಮಿಷಗಳಲ್ಲಿ ನಡೆದಿದ್ದ ಹಣಾಹಣಿಯಲ್ಲಿ ಅಧಿಕಾರಯುತ ಪ್ರದರ್ಶನವನ್ನು ತೋರಿಸಿ 21-13 ಮತ್ತು 21-12 ಅಂತರದಲ್ಲಿ ಚಿಯು ಹಿಸಿಯಾಂಗ್‌ ಚಿಹೆ ಹಾಗೂ ವಾಂಗ್‌ ಚಿ ಲಿನ್‌ ಜೋಡಿಯನ್ನು ಮಣಿಸಿತು. ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಚೀನಾದ ರೆನ್ ಕ್ಸಿಯಂಗ್‌ ಯು‌ ಹಾಗೂ ಕ್ಸಿ ಹಾನನ್‌ ಜೋಡಿಯ ವಿರುದ್ಧ ಭಾರತದ ಜೋಡಿ ಕಾದಾಟ ನಡೆಸಲಿದೆ.

China Masters: ಜಾಕೋಬ್ಸನ್‌ ವಿರುದ್ಧ ಪಿವಿ ಸಿಂಧೂಗೆ ಜಯ, ಕನ್ನಡಿಗ ಆಯುಷ್‌ ಶೆಟ್ಟಿಗೆ ನಿರಾಶೆ!

ಇದಕ್ಕೂ ಮುನ್ನ ಭಾರತದ ಜೋಡಿಯು 42 ನಿಮಿಷಗಳ ಕಾಲ ನಡೆದಿದ್ದ ಹದಿನಾರನೇ ಸುತ್ತಿನ ಪಂದ್ಯದಲ್ಲಿ ಮಲೇಷ್ಯಾದ ಜುನೈದಿ ಆರಿಫ್‌ ಮತ್ತು ರಾಯ್‌ ಕಿಂಗ್‌ ಯಪ್‌ ವಿರುದ್ದ 24-22, 21-13 ಅಂತರದಲ್ಲಿ ಗೆಲುವು ಪಡೆದಿತ್ತು. ಆ ಮೂಲಕ ಪ್ರೀಕ್ವಾರ್ಟರ್‌ಗೆ ಪ್ರವೇಶ ಮಾಡಿತ್ತು.

ಕ್ವಾರ್ಟರ್‌ಫೈನಲ್ಸ್‌ಗೆ ಪಿವಿ ಸಿಂಧೂ

ಎರಡು ಬಾರಿ ಒಲಿಂಪಿಕ್ಸ್‌ ಕ್ರೀಡಾಂಗಣದಲ್ಲಿ ಪದಕ ವಿಜೇತೆ ಪಿವಿ ಸಿಂಧೂ ಅವರು 2025ರ ಚೀನಾ ಮಾಸ್ಟರ್‌ಸ್‌ ಟೂರ್ನಿಯ ಮಹಿಳೆಯ ಸಿಂಗಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಹದಿನಾರನೇ ಸುತ್ತಿನ ಪಂದ್ಯದಲ್ಲಿ ಭಾರತದ ಸ್ಟಾರ್‌ ಬ್ಯಾಡ್ಮಿಂಟನ್‌ ಆಟಗಾರ್ತಿ, ಥಾಯ್ಲೆಂಡ್‌ನ ಆರನೇ ಶ್ರೇಯಾಂಕಿತೆ ಪಾರ್ನ್‌ಪಾವೆ ವಿರುದ್ಧ 21-15 ಮತ್ತು 21-15ರ ನೇರ ಗೇಮ್‌ಗಳ ಅಂತರದಲ್ಲಿ ಗೆಲುವು ಪಡೆದಿದ್ದರು.

ಪಿವಿ ಸಿಂಧೂ ಅವರು ತನ್ನ ಮೊದಲನೇ ಸುತ್ತಿನ ಪಂದ್ಯದಲ್ಲಿ ಡೆನ್ಮಾರ್ಕ್‌ನ ಡಾವೆಲ್‌ ಜಾಕೋಬ್ಸನ್‌ ಅವರ ವಿರುದ್ಧ ಗೆಲ್ಲುವ ಮೂಲಕ ಚೀನಾ ಮಾಸ್ಟರ್ಸ್‌ ಟೂರ್ನಿಯಲ್ಲಿ ಶುಭಾರಂಭವನ್ನು ಕಂಡಿತ್ತು. ಭಾರತೀಯ ಆಟಗಾರ್ತಿ ಜಾಕೋಬ್ಸನ್‌ ಅವರ ವಿರುದ್ದ 21-5 ಮತ್ತು 21-10 ಅಂತರದಲ್ಲಿ ಗೆಲುವು ಪಡೆದಿದ್ದರು. ಈ ಟೂರ್ನಿಯು ಸಿಂಧೂ ಅವರ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ. ಅವರು ಈ ವರ್ಷದ ಆರಂಭದಲ್ಲಿ ಆಡಿದ್ದ ಆರು ಟೂರ್ನಿಗಳಲ್ಲಿ ಆರಂಭಿಕ ಸುತ್ತಿನಲ್ಲಿಯೇ ಸೋತು ನಿರಾಶೆ ಅನುಭವಿಸಿದ್ದರು.

ಹಾಂಕಾಂಗ್‌ ಓಪನ್‌; ಫೈನಲ್‌ನಲ್ಲಿ ಸೋತ ಸಾತ್ವಿಕ್‌-ಚಿರಾಗ್‌ ಜೋಡಿ

ಮೊದಲನೇ ಸುತ್ತಿನಲ್ಲಿಯೇ ಹೊರ ನಡೆದಿದ್ದ ಆಯುಷ್‌ ಶೆಟ್ಟಿ

ಕನ್ನಡಿಗ ಆಯುಷ್‌ ಶೆಟ್ಟಿ ಅವರು ಚೀನಾ ಮಾಸ್ಟರ್ಸ್‌ ಟೂರ್ನಿಯ ಮೊದಲನೇ ಸುತ್ತಿನಲ್ಲಿಯೇ ನಿರ್ಗಮಿಸುವ ಮೂಲಕ ನಿರಾಶೆ ಮೂಡಿಸಿದ್ದಾರೆ. ಅವರು ಪುರುಷರ ಸಿಂಗಲ್ಸ್‌ನಲ್ಲಿ ಕಠಿಣ ಹೋರಾಟ ನಡೆಸಿದ ಹೊರತಾಗಿಯೂ ಚೌ ಥೀನ್‌ ಚೆನ್‌ ವಿರುದ್ಧ 19-21, 21-12 ಮತ್ತು 16-21 ಅಂತರದಲ್ಲಿ ಸೋಲು ಅನುಭವಿಸಿದ್ದರು. ಮೊದಲನೇ ಗೇಮ್‌ನಲ್ಲಿ ಸೋತ ಬಳಿಕ ಎರಡನೇ ಗೇಮ್‌ ಅನ್ನು ಗೆದ್ದು ಕಮ್‌ಬ್ಯಾಕ್‌ ಮಾಡಿದ್ದ ಕನ್ನಡಿಗ ಮೂರನೇ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಸೋಲು ಅನುಭವಿಸಿದ್ದರು.