ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚೆನ್ನೈನಲ್ಲಿ ವಿಶ್ವ ದರ್ಜೆಯ ತಮಿಳುನಾಡು ಒಲಿಂಪಿಕ್‌ ಸಿಟಿ ಸ್ಥಾಪನೆಗೆ ಸಿಎಂ ವಿಜಯ್‌ ಅನುಮೋದನೆ!

ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ಅವರು ಕ್ರೀಡಾ ಕ್ಷೇತ್ರದಲ್ಲಿ ದೊಡ್ಡ ಅಭಿವೃದ್ದಿಗೆ ಕೈ ಹಾಕಿದ್ದಾರೆ. ಚೆನ್ನೈನಲ್ಲಿ ವಿಶ್ವದರ್ಜೆಯ ಒಲಿಂಪಿಕ್‌ ಸಿಟಿಯನ್ನು ರೂಪಿಸಲು ಅವರು ಹಸಿರು ನಿಶಾನೆ ತೋರಿದ್ದಾರೆ. ಅಧಿವೇಶನದಲ್ಲಿ ಅವರು 110ರ ನಿಯಮದಡಿಯಲ್ಲಿ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಚೆನ್ನೈನಲ್ಲಿ ಒಲಿಂಪಿಕ್‌ ಸಿಟಿ ನಿರ್ಮಾಣಕ್ಕೆ ಸಿಎಂ ವಿಜಯ್‌ ಗ್ರೀನ್‌ ಸಿಗ್ನಲ್‌.

ನವದೆಹಲಿ: ಚೆನ್ನೈನಲ್ಲಿ ವಿಶ್ವದರ್ಜೆಯ ತಮಿಳುನಾಡು ಒಲಿಂಪಿಕ್ ಸಿಟಿ (Olympic City) ಸ್ಥಾಪಿಸುವುದಾಗಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (CM Vijay) ಗುರುವಾರ ವಿಧಾನಸಭೆಯಲ್ಲಿ ನಿಯಮ 110ರ ಅಡಿಯಲ್ಲಿ ಘೋಷಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಗಳ ಕಚೇರಿ (CMO) ಪ್ರಕಾರ, ಈ ಒಲಿಂಪಿಕ್ ಸಿಟಿಯನ್ನು ತಮಿಳುನಾಡು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಲಿದೆ. ಇಲ್ಲಿ ವಿಶ್ವದರ್ಜೆಯ ಕ್ರೀಡಾಂಗಣಗಳು, ಅತ್ಯಾಧುನಿಕ ಕ್ರೀಡಾ ಉಪಕರಣಗಳು, ಹೈ ಪರ್ಫಾರ್ಮೆನ್ಸ್ ಟ್ರೈನಿಂಗ್ ಸೆಂಟರ್ ಹಾಗೂ ಪ್ರತ್ಯೇಕ ಕ್ರೀಡಾ ವಿಜ್ಞಾನ ಮತ್ತು ಕ್ರೀಡಾ ವೈದ್ಯಕೀಯ ಕೇಂದ್ರಗಳು ಇರಲಿವೆ.

ಕ್ರೀಡಾಪಟುಗಳು ಮತ್ತು ತರಬೇತುದಾರರಿಗಾಗಿ ವಸತಿ ಸೇರಿದಂತೆ ಆಧುನಿಕ ಮೂಲಸೌಕರ್ಯವನ್ನೂ ಒಲಿಂಪಿಕ್ ಸಿಟಿಯಲ್ಲಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ವಿಜಯ್ ತಿಳಿಸಿದ್ದಾರೆ. ತಮಿಳುನಾಡಿನ ಕ್ರೀಡಾಪಟುಗಳಿಗೆ ಅತ್ಯಾಧುನಿಕ ತರಬೇತಿ ಮತ್ತು ಅಗತ್ಯ ಬೆಂಬಲ ಸೌಲಭ್ಯಗಳನ್ನು ಒಂದೇ ಕಡೆ ಒದಗಿಸುವ ಸಮಗ್ರ ಕ್ರೀಡಾ ಕೇಂದ್ರವಾಗಿ ಒಲಿಂಪಿಕ್ ಸಿಟಿಯನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ. ಆ ಮೂಲಕ ಒಲಿಂಪಿಕ್ಸ್ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ತಮಿಳುನಾಡಿನ ಕ್ರೀಡಾಪಟುಗಳು ಹೆಚ್ಚು ಪದಕ ಗೆಲ್ಲಲು ನೆರವಾಗುವ ಗುರಿ ಹೊಂದಲಾಗಿದೆ.

ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಹೇಳಿ ಎಂದ ಬಿಸಿಸಿಐ ಸೆಲೆಕ್ಟರ್‌ಗಳ ವಿರುದ್ಧ ರೋಹಿತ್‌ ಶರ್ಮಾ ಗರಂ!

ಚೆನ್ನೈನಲ್ಲಿ ಪ್ರತ್ಯೇಕ ಮೋಟಾರ್‌ಸ್ಪೋರ್ಟ್ಸ್ ಸಿಟಿ

ಇದೇ ವೇಳೆ, ಚೆನ್ನೈನಲ್ಲಿ ಪ್ರತ್ಯೇಕ ಮೋಟಾರ್‌ಸ್ಪೋರ್ಟ್ಸ್ ಸಿಟಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ವಿಜಯ್ ಘೋಷಿಸಿದ್ದಾರೆ. ನಗರದಲ್ಲಿ ಫಾರ್ಮುಲಾ 1ರಿಂದ ಫಾರ್ಮುಲಾ 4ರವರೆಗಿನ ರೇಸ್‌ಗಳನ್ನು ಆಯೋಜಿಸಲು ಈ ಸೌಲಭ್ಯವನ್ನು ಬಳಸಿಕೊಳ್ಳಲಾಗುವುದು.

ಕಳೆದ ಜೂನ್‌ನಲ್ಲಿ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ (MYAS) ದೇಶದಲ್ಲಿ ಮೋಟಾರ್‌ಸ್ಪೋರ್ಟ್ಸ್ ಕ್ಷೇತ್ರದ ಮೇಲ್ವಿಚಾರಣೆ ನಡೆಸಲು ಕಾರ್ಯಪಡೆಯೊಂದನ್ನು ರಚಿಸಿತ್ತು. 2028ರ ಅಂತ್ಯದೊಳಗೆ ಭಾರತದಲ್ಲಿ ಫಾರ್ಮುಲಾ 1 ರೇಸಿಂಗ್‌ನ್ನು ಮರಳಿ ತರುವ ಗುರಿಯೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ.

“2028ರ ವೇಳೆಗೆ ಭಾರತಕ್ಕೆ F1 ಅನ್ನು ಮರಳಿ ತರಲು ನಾವು ಪ್ರಯತ್ನಿಸುತ್ತೇವೆ. ಇದಕ್ಕಾಗಿ ದೇಶದ ಮೋಟಾರ್‌ಸ್ಪೋರ್ಟ್ಸ್ ಕ್ಷೇತ್ರವನ್ನು ಮೇಲ್ವಿಚಾರಣೆ ಮಾಡಿ, ಸಚಿವಾಲಯಕ್ಕೆ ವರದಿ ಸಲ್ಲಿಸುವ ಕಾರ್ಯಪಡೆಯನ್ನು ರಚಿಸಿದ್ದೇವೆ” ಎಂದು ಎಂವೈಎಎಸ್‌ ಮೂಲವೊಂದು ಎಎನ್‌ಐಗೆ ತಿಳಿಸಿತ್ತು.

2027ರ ಏಕದಿನ ವಿಶ್ವಕಪ್‌ ಟೂರ್ನಿಗೆ ರೋಹಿತ್‌ ಶರ್ಮಾರ ಮಹತ್ವವನ್ನು ತಿಳಿಸಿದ ಜಾಂಟಿ ರೋಡ್ಸ್‌!

F1, MotoGP ಮತ್ತು WRC ಆಯೋಜನೆಗೆ ಪ್ರಯತ್ನ

ಈ ವರ್ಷದ ಆರಂಭದಲ್ಲಿ ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾ (FMSCI) ಅಧ್ಯಕ್ಷ ಅರಿಂಡಂ ಘೋಷ್ ಅವರು ನವದೆಹಲಿಯಲ್ಲಿ ಕ್ರೀಡಾ ಸಚಿವಾಲಯದೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ಭಾರತದಲ್ಲಿ 2030ರ ವೇಳೆಗೆ ಫಾರ್ಮುಲಾ 1, 2028ರ ವೇಳೆಗೆ ವಿಶ್ವ ರ‍್ಯಾಲಿ ಚಾಂಪಿಯನ್‌ಶಿಪ್ (WRC) ಮತ್ತು MotoGP ರೇಸ್‌ಗಳನ್ನು ಆಯೋಜಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದರು.

ನಂತರ ಬೆಂಗಳೂರಿನಲ್ಲಿ ನಡೆದ FMSCI ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಘೋಷ್, ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ, ರಾಜ್ಯ ಸಚಿವ ರಕ್ಷಾ ಖಡ್ಸೆ, ಹಿರಿಯ ಅಧಿಕಾರಿಗಳು ಮತ್ತು ಸಂಭಾವ್ಯ ಪಾಲುದಾರರೊಂದಿಗೆ ನಡೆದ ಸಭೆಯಲ್ಲಿ ಭಾರತಕ್ಕೆ F1, MotoGP ಹಾಗೂ WRC ಸುತ್ತನ್ನು ತರುವ ಕುರಿತು ಪ್ರಮುಖವಾಗಿ ಚರ್ಚಿಸಲಾಯಿತು ಎಂದು ಹೇಳಿದರು.

ಭಾರತೀಯ ಚಾಲಕರನ್ನು ಬೆಳೆಸುವುದು ಮತ್ತು ದೇಶದಲ್ಲಿ ಒಟ್ಟಾರೆ ಮೋಟಾರ್‌ಸ್ಪೋರ್ಟ್ಸ್ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುವ ಅಗತ್ಯವನ್ನು FMSCI ಸಭೆಯಲ್ಲಿ ಒತ್ತಿಹೇಳಿತು. ಸಂಘಟನೆಯ ಸಲಹೆಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಘೋಷ್ ಹೇಳಿದ್ದರು.