ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಮಾಲ್ ಮಾಡಲು ಸಜ್ಜಾಗುತ್ತಿರುವ ಒಡಿಶಾದ ಮೂವರು ಅಥ್ಲಿಟ್‌ಗಳು!

ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಜುಲೈ 23 ರಿಂದ ಆಗಸ್ಟ್ 2ರವರೆಗೆ ನಡೆಯಲಿರುವ ಪ್ರತಿಷ್ಠಿತ 2026ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಭಾರತೀಯ ಜಿಮ್ನಾಸ್ಟಿಕ್ಸ್ ತಂಡ ಸಜ್ಜಾಗಿದೆ. ಭಾರತವನ್ನು ಪ್ರತಿನಿಧಿಸುತ್ತಿರುವ 8 ಕ್ರೀಡಾಪಟುಗಳ ಪೈಕಿ ಮೂವರು ಒಡಿಶಾದ ಅಥ್ಲಿಟ್‌ಗಳು ಮಹತ್ವದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲಲು ಒಡಿಶಾದ ಅಥ್ಲಿಟ್ಸ್‌ ಸಜ್ಜು.

ಬೆಂಗಳೂರು: ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಜುಲೈ 23 ರಿಂದ ಆಗಸ್ಟ್ 2ರವರೆಗೆ ನಡೆಯಲಿರುವ ಪ್ರತಿಷ್ಠಿತ 2026ರ ಕಾಮನ್‌ವೆಲ್ತ್ ಗೇಮ್ಸ್‌ಗೆ ( Commonwealth Games 2026) ಭಾರತೀಯ ಜಿಮ್ನಾಸ್ಟಿಕ್ಸ್ ತಂಡ ಸಜ್ಜಾಗಿದೆ. ಈ ಬಾರಿ ಭಾರತವನ್ನು ಪ್ರತಿನಿಧಿಸುತ್ತಿರುವ 8 ಕ್ರೀಡಾಪಟುಗಳ ಪೈಕಿ, ಮೂವರು ಕ್ರೀಡಾಪಟುಗಳು ಪ್ರತಿಷ್ಠಿತ 'ಒಡಿಶಾ ಎಎಂ/ಎನ್ಎಸ್ ಇಂಡಿಯಾ ಜಿಮ್ನಾಸ್ಟಿಕ್ಸ್ ಹೈ - ಪರ್ಫಾರ್ಮೆನ್ಸ್ ಸೆಂಟರ್'ನಿಂದ ಆಯ್ಕೆಯಾಗುವ ಮೂಲಕ ಕೇಂದ್ರಕ್ಕೆ ಕೀರ್ತಿ ತಂದಿದ್ದಾರೆ.

ಪುರುಷರ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ (ಎಂಎಜಿ) ವಿಭಾಗದಲ್ಲಿ ತಪನ್ ಮೊಹಂತಿ ಮತ್ತು ತಪೇಶ್ವರನಾಥ್ ದಾಸ್ ಅವರು ಭಾರತೀಯ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇನ್ನು ಮಹಿಳೆಯರ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ (ಡಬ್ಲ್ಯೂಎಜಿ) ವಿಭಾಗದಿಂದ ಅನುಭವಿ ಒಲಿಂಪಿಯನ್ ಪ್ರಣತಿ ನಾಯಕ್ ಅವರು ಕಣಕ್ಕಿಳಿಯಲಿದ್ದಾರೆ. ಕ್ರೀಡಾಪಟುಗಳ ಕಠಿಣ ಪರಿಶ್ರಮ ಮತ್ತು ಒಡಿಶಾದ ತರಬೇತಿ ಕೇಂದ್ರದಲ್ಲಿ ಇವರಿಗೆ ದೊರೆಯುತ್ತಿರುವ ವಿಶ್ವದರ್ಜೆಯ ಸೌಲಭ್ಯಗಳೇ ಈ ಮಹತ್ವದ ಸಾಧನೆಗೆ ಕಾರಣವಾಗಿವೆ.

Commonwealth Games 2026: ಪದಕದ ಗುರಿಯೊಂದಿಗೆ ಕಣಕ್ಕಿಳಿಯಲಿರುವ ವಿಶಾಲ್ ಟಿಕೆ!

ನಮಗೆ ಇದೊಂದು ಹೆಮ್ಮೆಯ ಮೈಲಿಗಲ್ಲು

ಈ ಆಯ್ಕೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ ಎಎಂ/ಎನ್ಎಸ್ ಇಂಡಿಯಾದ ನಿರ್ದೇಶಕ ಮತ್ತು ಎಚ್‌ಆರ್ ಉಪಾಧ್ಯಕ್ಷ ಅಶುತೋಷ್ ತೆಲಾಂಗ್, "ನಮ್ಮ ಕೇಂದ್ರದ ಮೂವರು ಕ್ರೀಡಾಪಟುಗಳು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುತ್ತಿರುವುದು ನಮಗೆ ಅತ್ಯಂತ ಹೆಮ್ಮೆಯ ವಿಷಯ. ತಪನ್, ತಪೇಶ್ವರನಾಥ್ ಮತ್ತು ಪ್ರಣತಿ ನಾಯಕ್ ಅವರು ನಮ್ಮ ಕೇಂದ್ರದಲ್ಲಿ ಅಳವಡಿಸಿಕೊಂಡಿರುವ ಶಿಸ್ತು, ಶ್ರದ್ಧೆ ಮತ್ತು ಉತ್ಕೃಷ್ಟತೆಗೆ ಸಾಕ್ಷಿಯಾಗಿದ್ದಾರೆ. ಒಡಿಶಾದಲ್ಲಿ ನಾವು ನಿರ್ಮಿಸಿರುವ ವಿಶ್ವದರ್ಜೆಯ ತರಬೇತಿ ವ್ಯವಸ್ಥೆಯ ಫಲವೇ ಅವರ ಈ ಸಾಧನೆ. ಅವರು ಜಾಗತಿಕ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಲಿ ಎಂದು ಶುಭ ಹಾರೈಸುತ್ತೇನೆ," ಎಂದರು.

ಏನಿದು ಒಡಿಶಾ ಎಎಂ/ಎನ್‌ಎಸ್‌ ಜಿಮ್ನಾಸ್ಟಿಕ್ಸ್ ಸೆಂಟರ್?

ಭಾರತದಲ್ಲಿ ಜಿಮ್ನಾಸ್ಟಿಕ್ಸ್ ಕ್ರೀಡೆಯನ್ನು ಉತ್ತೇಜಿಸಲು ಮತ್ತು ಒಡಿಶಾವನ್ನು ಜಿಮ್ನಾಸ್ಟಿಕ್ಸ್ ಹಬ್ ಆಗಿ ರೂಪಿಸುವ ಉದ್ದೇಶದಿಂದ, 2023ರಲ್ಲಿ ಒಡಿಶಾ ಸರ್ಕಾರ ಹಾಗೂ 'ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ' ಜಂಟಿಯಾಗಿ ಕಳಿಂಗ ಸ್ಟೇಡಿಯಂನಲ್ಲಿ ಈ ಉನ್ನತ ಮಟ್ಟದ ತರಬೇತಿ ಕೇಂದ್ರವನ್ನು (ಜಿಎಚ್‌ಪಿಸಿ) ಆರಂಭಿಸಿದ್ದವು.

ʻಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲʼ: ರೋಹಿತ್‌ ಶರ್ಮಾರ ನಿವೃತ್ತಿ ವದಂತಿಗಳ ಬಗ್ಗೆ ಆರ್‌ ಅಶ್ವಿನ್‌ ಪ್ರತಿಕ್ರಿಯೆ!

ಇದರ ಜೊತೆಗೆ ಮೂರು ಗ್ರಾಸ್‌ರೂಟ್ ಕೇಂದ್ರಗಳನ್ನೂ ಆರಂಭಿಸಲಾಗಿದ್ದು, ರಾಜ್ಯದ ಯುವ ಪ್ರತಿಭೆಗಳನ್ನು ಗುರುತಿಸಿ, ಪೋಷಿಸುವ ಕೆಲಸ ಮಾಡಲಾಗುತ್ತಿದೆ. ಎಎಂ/ಎನ್ಎಸ್ ಇಂಡಿಯಾದ 'ಉಡಾನ್' ಸಿಎಸ್ಆರ್ ಉಪಕ್ರಮದ ಅಡಿಯಲ್ಲಿ ಪ್ರತಿ ವರ್ಷ 450ಕ್ಕೂ ಹೆಚ್ಚು ಜಿಮ್ನಾಸ್ಟ್‌ಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ತಜ್ಞರಿಂದ ಉಚಿತ ತರಬೇತಿ, ಪೌಷ್ಟಿಕಾಂಶ ಮತ್ತು ಶೈಕ್ಷಣಿಕ ಬೆಂಬಲವನ್ನು ನೀಡಲಾಗುತ್ತಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಕ್ರೀಡಾಪಟುಗಳು

ಈ ಕೇಂದ್ರದ ಕ್ರೀಡಾಪಟುಗಳು ಈಗಾಗಲೇ ಲಿನ್ಸ್‌ಬನ್‌ನ ಇಂಟರ್ನ್ಯಾಷನಲ್ ಕಾಂಟಿನೆಂಟಲ್ ಕಪ್, ಟರ್ಕಿಯ ಎಫ್ಐಜಿ ವಿಶ್ವಕಪ್ ಮತ್ತು ಏಷ್ಯನ್ ಚಾಂಪಿಯನ್‌ಶಿಪ್‌ನಂತಹ ಪ್ರತಿಷ್ಠಿತ ವೇದಿಕೆಗಳಲ್ಲಿ ಮಿಂಚಿದ್ದಾರೆ. ಇಲ್ಲಿಯವರೆಗೆ ಈ ಕೇಂದ್ರದ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ 400ಕ್ಕೂ ಹೆಚ್ಚು ಪದಕಗಳನ್ನು ಜಯಿಸುವ ಮೂಲಕ, ಭಾರತೀಯ ಜಿಮ್ನಾಸ್ಟಿಕ್ಸ್‌ ವಲಯದಲ್ಲಿ ಭರವಸೆಯ ಕಿರಣವಾಗಿ ಮೂಡಿಬಂದಿದ್ದಾರೆ.