ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ವಿಶ್ವ ಟೆನಿಸ್ ಲೀಗ್: ತಂಡದ ಮಾಲೀಕರು ಹಾಗೂ ಆಟಗಾರರ ತಂಡಗಳನ್ನು ಘೋಷಣೆ!

ಡಿಸೆಂಬರ್ 17 ರಿಂದ 20 ರವರೆಗೆ ಬೆಂಗಳೂರಿನ ಎಸ್‌.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ವಿಶ್ವ ಟೆನಿಸ್‌ ಲೀಗ್‌ ನಡೆಯಲಿದೆ. ಗೇಮ್‌ ಚೇಜರ್ಸ್‌ ಫಾಲ್ಕನ್ಸ್‌, ವಿಬಿ ರಿಯಾಲಿಟಿ ಹಾಕ್ಸ್‌, ಅಸ್ಸಿ ಮ್ಯಾವೆರಿಕ್ಸ್ ಕೈಟ್ಸ್ ಸೇರಿದಂತೆ ನಾಲ್ಕು ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಆವೃತ್ತಿಯು 16 ಆಟಗಾರರು, 4 ತಂಡಗಳು, 1 ಚಾಂಪಿಯನ್ ಹೊಂದಿದ್ದು, ಅನುಭವಿ ತರಬೇತುದಾರರ ನೇತೃತ್ವದಲ್ಲಿ ಈ ಟೂರ್ನಿ ನಡೆಯಲಿದೆ.

ವಿಶ್ವ ಟೆನಸ್‌ ಲೀಗ್‌ ಆಡಲಿರುವ ಡೇನಿಯಲ್‌ ಮೆಡ್ವಿಡೆವ್‌,

ಬೆಂಗಳೂರು: ವಿಶ್ವ ಟೆನಿಸ್ ಲೀಗ್ (WTL) ‘ದಿ ಗ್ರೇಟೆಸ್ಟ್ ಶೋ ಆನ್ ಕೋರ್ಟ್’ ಡಿಸೆಂಬರ್ 17 ರಿಂದ 20 ರವರೆಗೆ ಬೆಂಗಳೂರಿನ ಎಸ್‌.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ನಡೆಯಲು ಸಜ್ಜಾಗಿದೆ. ದೇಶದಾದ್ಯಂತ ಲೀಗ್‌ನ ಉತ್ಸಾಹ ಹೆಚ್ಚುತ್ತಿರುವ ಬೆನ್ನಲ್ಲೇ ವರ್ಲ್ಡ್ ಟೆನಿಸ್ ಲೀಗ್ ತನ್ನ ತಂಡದ ಮಾಲೀಕರನ್ನು ಮತ್ತು ತಂಡಗಳ ಸಂಯೋಜನೆಯನ್ನು ಅನಾವರಣಗೊಳಿಸಿದೆ. ಈ ಸೀಸನ್ ನ ಫ್ರಾಂಚೈಸಿ ಮಾಲೀಕರಲ್ಲಿ ಹಾಲಿ ಚಾಂಪಿಯನ್‌ಗಳಾದ ಗೇಮ್ ಚೆಂಜರ್ಸ್ ಫಾಲ್ಕನ್ಸ್ (ಮಾಲೀಕ: ಅಮನ್ದೀಪ್ ಸಿಂಗ್, ಗೇಮ್ ಚೆಂಜರ್ಸ್ FZCO),ವಿಬಿ ರಿಯಾಲ್ಟಿ ಹಾಕ್ಸ್ (ಮಾಲೀಕ: ವಾಶು ಭಗ್ನಾನಿ), ಅಸ್ಸಿ ಮ್ಯಾವೆರಿಕ್ಸ್ ಕೈಟ್ಸ್ (ಮಾಲೀಕರು: ಡಾ. ಉಮೇದ್ ಶೇಖಾವತ್, ಅಮಿತ್ ಸಾಹ್ನಿ ಮತ್ತು ಕೇವಲ್ ಕಲ್ರಾ) ಮತ್ತು ಎಒಎಸ್ ಈಗಲ್ಸ್ (ಮಾಲೀಕರು: ಎಒಎಸ್ ಸ್ಪೋರ್ಟ್ಸ್ ಟೂರ್ನಮೆಂಟ್, ದುಬೈ ಮತ್ತು ಸತೇಂದರ್ ಪಾಲ್ ಛಬ್ರಾ) ಸೇರಿದ್ದಾರೆ.

2025ರ ವಿಶ್ವ ಟೆನಿಸ್ ಲೀಗ್‌ನ ಆವೃತ್ತಿಯು 16 ಆಟಗಾರರು, 4 ತಂಡಗಳು, 1 ಚಾಂಪಿಯನ್ ಹೊಂದಿದ್ದು, ಅನುಭವಿ ತರಬೇತುದಾರರ ನೇತೃತ್ವದಲ್ಲಿ ಕೆಲವು ಅತ್ಯುತ್ತಮ ಜಾಗತಿಕ ಟೆನಿಸ್ ತಾರೆಗಳು ಮತ್ತು ಭಾರತದ ಅಗ್ರ ಶ್ರೇಯಾಂಕಿತ ಆಟಗಾರರು ಈ ಆವೃತ್ತಿಯಲ್ಲಿ ಆಡಲಿದ್ದಾರೆ.

IND vs SA: ʻಭಾರತ ತಂಡ 201ಕ್ಕೆ ಆಲೌಟ್‌ʼ-ಬ್ಯಾಟ್ಸ್‌ಮನ್‌ಗಳ ಬಗ್ಗೆ ಬೇಸರ ಹೊರಹಾಕಿದ ರವಿಶಾಸ್ತ್ರಿ!

ತಂಡಗಳ ವಿವರ

ಗೇಮ್ ಚೆಂಜರ್ಸ್ ಫಾಲ್ಕನ್ಸ್: ಜಾನ್ ಲಾಫ್ನಿ ಡಿ ಜೆಗರ್, ಡೇನಿಯಲ್ ಮೆಡ್ವೆಡೆವ್, ರೋಹನ್ ಬೋಪಣ್ಣ, ಮಾಗ್ಡಾ ಲಿನೆಟ್, ಸಹಜ ಯಮಲಪಲ್ಲಿ

ವಿಬಿ ರಿಯಾಲ್ಟಿ ಹಾಕ್ಸ್: ರಾಬರ್ಟ್ ಲಿಂಡ್‌ಸ್ಟೆಡ್, ಡೆನಿಸ್ ಷಪೊವಾಲೊವ್, ಯುಕೀ ಭಾಂಬ್ರಿ, ಎಲೀನಾ ಸ್ವಿಟೋಲಿನಾ, ಮಾಯಾ ರೇವತಿ

ಅಸ್ಸಿ ಮ್ಯಾವೆರಿಕ್ಸ್ ಕೈಟ್ಸ್: ಜೂಲಿಯನ್ ನೋವೆಲ್ ನಿಕ್ ಕಿರ್ಗಿಯೋಸ್, ದಕ್ಷಿಣೇಶ್ವರ್ ಸುರೇಶ್, ಮಾರ್ಟಾ ಕೋಸ್ಟ್ಯುಕ್, ಅಂಕಿತಾ ರೈನಾ

ಎಒಎಸ್ ಈಗಲ್ಸ್: ಮಾರ್ಕ್ ಗೆಲ್ಲಾರ್ಡ್, ಗೇಲ್ ಮೊನ್ಫಿಲ್ಸ್, ಸುಮಿತ್ ನಾಗಲ್, ಪೌಲಾ ಬಡೋಸಾ, ಶ್ರೀವಲ್ಲಿ ಭಾಮಿಡಿಪತಿ

ಗೇಮ್ ಚೇಂಜರ್ಸ್ ಫಾಲ್ಕನ್ಸ್‌ ತಂಡದ ಮಾಲೀಕ ಅಮನ್‌ದೀಪ್ ಸಿಂಗ್ ಮಾತನಾಡಿ "ನಾವು ಮತ್ತೊಂದು ಪ್ರಭಾವಶಾಲಿ ತಂಡದೊಂದಿಗೆ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಮರಳಿದ್ದೇವೆ. ಮೆಡ್ವೆಡೆವ್ ಅವರ ಕೋರ್ಟ್ ಪ್ರಾಬಲ್ಯ ಮತ್ತು ಬೋಪಣ್ಣ ಅವರ ಡಬಲ್ಸ್ ಪರಿಣತಿಯಿಂದ ನಮ್ಮ ತಂಡವು ಶಕ್ತಿ ಮತ್ತು ಅನುಭವದ ಸಮತೋಲನವನ್ನು ತರುತ್ತದೆ," ಎಂದಿದ್ದಾರೆ.

ವಿಬಿ ರಿಯಾಲ್ಟಿ ಹಾಕ್ಸ್ ತಂಡದ ಮಾಲೀಕ ವಾಶು ಭಾಗ್ನಾನಿ ಮಾತನಾಡಿ "ನಾವು ಉತ್ತಮ ಆಟಗಾರರನ್ನು ನಮ್ಮ ತಂಡಕ್ಕೆ ಆಯ್ಕೆ ಮಾಡಿದ್ದೇವೆ. ಷಪೊವಾಲೊವ್ ಅವರ ಅಗ್ರೆಸಿವ್ ಆಟ, ಭಾಂಬ್ರಿ ಅವರ ನಿಷ್ಠೆ ಮತ್ತು ಮಾಯಾ ಅವರ ದೃಢತೆ ತಂಡಕ್ಕೆ ಮತ್ತಷ್ಟು ಬಲ ನೀಡಲಿದೆ. WTL ನ ನಮ್ಮ ಮೊದಲ ಸೀಸನ್ ಅನ್ನು ಸ್ಮರಣೀಯವಾಗಿಸುತ್ತೇವೆ." ಎಂದು ಹೇಳಿದ್ದಾರೆ.

IND vs SA: ಮಾರ್ಕೊ ಯೆನ್ಸನ್‌ ಮಾರಕ ದಾಳಿಗೆ ಭಾರತ 201ಕ್ಕೆ ಆಲ್‌ಔಟ್‌, ಆಫ್ರಿಕಾ ಹಿಡಿತದಲ್ಲಿ ಎರಡನೇ ಟೆಸ್ಟ್‌!

ಅಸ್ಸಿ ಮೇವರಿಕ್ಸ್ ಕೈಟ್ಸ್‌ ತಂಡದ ಮಾಲೀಕ ಡಾ. ಉಮೇದ್ ಶೇಖಾವತ್ ಮಾತನಾಡಿ "ಕಿರ್ಗಿಯೋಸ್ ಅವರ ಸ್ಫೋಟಕ ಸರ್ವ್, ಕೋಸ್ಟ್ಯುಕ್ ಅವರ ಆಕ್ರಮಣಶೀಲತೆ, ದಕ್ಷಿಣೇಶ್ವರ್ ಮತ್ತು ಅಂಕಿತಾ ಅವರ ಉತ್ತಮ ಪ್ರಾತಿನಿಧ್ಯದೊಂದಿಗೆ ನಮ್ಮ ತಂಡ ಭಾರತದ WTLನ ಚೊಚ್ಚಲ ಪಂದ್ಯಕ್ಕೆ ಸಿದ್ಧವಾಗಿದೆ," ಎಂದರು.

ಎಒಎಸ್‌ ಈಗಲ್ಸ್ ತಂಡದ ಮಾಲೀಕ ಸತೇಂದರ್ ಪಾಲ್ ಛಾಬ್ರಾ ಮಾತನಾಡಿ "ನಾಗಲ್ ಅವರ ಹಂಬಲ, ಪೌಲಾ ಮತ್ತು ಶ್ರೀವಲ್ಲಿ ಅವರ ಸಮತೋಲನವಿದ್ದು ಲೀಗ್‌ನಲ್ಲಿ ಪ್ರಭಾವ ಬೀರುವ ತಂಡ ಇದಾಗಲಿದೆ," ಎಂದರು. ಬೆಂಗಳೂರು ವಿಶ್ವದಾದ್ಯಂತದ ಆಟಗಾರರನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದಂತೆ, WTL‌ನ ಭಾರತದ ಮೊದಲ ಸೀಸನ್ ಉನ್ನತ ಮಟ್ಟದ ಪ್ರತಿಭೆ ಮತ್ತು ನಿಜವಾದ ಕ್ರೀಡಾಸ್ಫೂರ್ತಿಯ ಆಟಗಾರರನ್ನು ಹೊಂದಿದೆ.