ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

HIL Season 2 auction: ಎಸ್‌ಜಿ ಪೈಪರ್ಸ್ ತಂಡಕ್ಕೆ 8 ಹೊಸ ಆಟಗಾರ್ತಿಯರ ಸೇರ್ಪಡೆ!

ಎಸ್‌ಜಿ ಪೈಪರ್ಸ್ ಮಹಿಳಾ ತಂಡವು ಹಾಕಿ ಇಂಡಿಯಾ ಲೀಗ್ ಎರಡನೇ ಆವೃತ್ತಿಯ ಹರಾಜಿನಲ್ಲಿ ಎಂಟು ಹೊಸ ಆಟಗಾರರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಈ ಬಗ್ಗೆ ಮಾತನಾಡಿದ ತಂಡದ ನಾಯಕಿ ನವನೀತ್ ಕೌರ್, ನಮ್ಮ ತಂಡಕ್ಕೆ ಹೊಸ ಆಟಗಾರ್ತಿಯರನ್ನು ಸೇರಿಸಿರುವುದಕ್ಕೆ ಸಂತವಾಗುತ್ತಿದೆ ಎಂದು ಹೇಳಿದ್ದಾರೆ.

ಹಾಕಿ ಇಂಡಿಯಾ ಲೀಗ್‌ ಮಿನಿ ಹರಾಜಿನಲ್ಲಿ ಎಸ್‌ಜಿ ಪೈಪರ್ಸ್‌ ತಂಡಕ್ಕೆ ಹೊಸ ಆಟಗಾರ್ತಿಯರ ಸೇರ್ಪಡೆ.

ಬೆಂಗಳೂರು: ಎಸ್‌ಜಿ ಪೈಪರ್ಸ್ (SG Pipers) ಮಹಿಳಾ ತಂಡವು ಹಾಕಿ ಇಂಡಿಯಾ ಲೀಗ್ (the Hockey India League Season 2 auction) ಎರಡನೇ ಆವೃತ್ತಿಯ ಹರಾಜಿನಲ್ಲಿ ಎಂಟು ಹೊಸ ಆಟಗಾರ್ತಿಯರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಆ ಮೂಲಕ ಎಸ್‌ಜಿ ಪೈಪರ್ಸ್, ಯುವ ಹಾಗೂ ಅನುಭವಿ ಆಟಗಾರ್ತಿಯರ ಜೊತೆಗೆ ತಂಡವನ್ನು ಬಲಿಷ್ಠಗೊಳಿಸುವತ್ತ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ ಬಗ್ಗೆ ಮಾತನಾಡಿದ ತಂಡದ ನಾಯಕಿ ನವನೀತ್ ಕೌರ್ (Navneet Kau), ನಮ್ಮ ತಂಡಕ್ಕೆ ಹೊಸ ಆಟಗಾರ್ತಿಯರನ್ನು ಸೇರಿಸಿರುವುದಕ್ಕೆ ಸಂತವಾಗುತ್ತಿದೆ ಎಂದು ಹೇಳಿದ್ದಾರೆ. ಹಾಗೇಯೇ ಮುಖ್ಯ ತರಬೇತುದಾರ ಸೋಫಿ ಗಿಯರ್ಟ್ಸ್ ಅವರು ಕೂಡ ಹೊಸ ಆಟಗಾರ್ತಿಯರ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

"ನಾವು ಹರಾಜು ಪ್ರಕ್ರಿಯೆಯನ್ನು ಸರಿಯಾದ ಹಾದಿಯಲ್ಲಿ ಸಮೀಪಿಸಿದ್ದೇವೆ ಎಂದು ನಾನು ಭಾವಿಸುತ್ತೇನೆ. ತಂಡ ಹರಾಜಿನಲ್ಲಿ ಹೆಚ್ಚು ಗಮನಹರಿಸಿದೆ ಮತ್ತು ಕಾರ್ಯತಂತ್ರದ ಭಾಗವಾಗಲು ನನಗೆ ತುಂಬಾ ಸಂತೋಷವಾಗಿದೆ. ಕ್ರೀಡಾಪಟುವಾಗಿ, ಎಸ್‌ಜಿ ಪೈಪರ್ಸ್ ನಮಗೆ ಈ ಅವಕಾಶವನ್ನು ನೀಡಿದ್ದು ನಮಗೆ ಅಪಾರ ಹೆಮ್ಮೆ ಮತ್ತು ಸಂತೋಷವನ್ನು ನೀಡುತ್ತದೆ. ಯೋಜನೆ ಸಂಪೂರ್ಣವಾಗಿತ್ತು- ನಮಗೆ ಸ್ಪಷ್ಟವಾದ ಕಾರ್ಯತಂತ್ರವಿತ್ತು ಮತ್ತು ನಾವು ಬಹು ಸ್ಥಾನಗಳಲ್ಲಿ ಆಡಬಲ್ಲ ಹಾಗೂ ಹೊಂದಿಕೊಳ್ಳುವ ಆಟಗಾರ್ತಿಯರನ್ನು ಆಯ್ಕೆ ಮಾಡಿದ್ದೇವೆ, ಅದು ನಮಗೆ ಒಂದು ಘಟಕವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ," ಎಂದು ಎಸ್‌ಜಿ ಪೈಪರ್ಸ್‌ ತಂಡದ ನಾಯಕಿ ನವನೀತ್‌ ಕೌರ್‌ ಹೇಳಿದ್ದಾರೆ.

2026ರ ಏಷ್ಯನ್ ಕ್ರೀಡಾಕೂಟ; ಭಾರತ ಪುರುಷರ ಫುಟ್ಬಾಲ್ ತಂಡಕ್ಕಿಲ್ಲ ಅವಕಾಶ?

"ದೀಪಿಕಾ ಕೂಡ ಹರಾಜು ತಂತ್ರದ ಭಾಗವಾಗಿದ್ದರು. ಮೈದಾನದಲ್ಲಿರುವ ಆಟಗಾರ್ತಿಯರಿಂದ ಅವರು ಮಾಹಿತಿಯನ್ನು ಹೊಂದಿದ್ದರು ಮತ್ತು ನಮ್ಮ ತರಬೇತುದಾರ ನಿಜವಾಗಿಯೂ ಸಹಾಯ ಮಾಡಿದ್ದಾರೆ. ಉದಿತಾ ಅವರ ಸಹಿಯಿಂದ ನಮಗೆ ಸಂತೋಷವಾಗಿದೆ,"ಎಂದು ಅವರು ತಿಳಿಸಿದ್ದಾರೆ.

ಎಸ್‌ಜಿ ಪೈಪರ್ಸ್ ಮಹಿಳಾ ಹಾಕಿ ಇಂಡಿಯಾ ಲೀಗ್ ತಂಡಕ್ಕೆ ಆಯ್ಕೆಯಾದ ಆಟಗಾರ್ತಿಯರು

1.ಉದಿತಾ

2.ಲೋಲಾ ರೀರಾ

3.ಜುವಾನಾ ಮೊರೆಲ್ಲೊ

4.ತೆರೇಸಾ ವಿಯಾನಾ

5.ಕ್ರಿಸ್ಟಿನಾ ಕೊಸೆಂಟಿನೋ

6.ಕೋಸ್ಟಾ ವಾಲೆಂಟಿನಾ ಇಸಬೆಲ್

7.ಥೌಡಮ್ ಸುಮನ್ ದೇವಿ

8.ಪ್ರೀತಿ ದುಬೆ



ಎಸ್‌ಜಿ ಪೈಪರ್ಟ್‌ ಕೋಚ್‌ ಹೇಳಿದ್ದೇನು?

ಹೊಸ ಸೇರ್ಪಡೆಯ ಬಗ್ಗೆ ಮುಖ್ಯ ಕೋಚ್‌ ಸೋಫಿ ಗಿಯರ್ಟ್ಸ್ ಮಾತನಾಡಿ, "ಕ್ರಿಸ್ಟಿನಾ ಕೊಸೆಂಟಿನೋ ಅವರನ್ನು ಗೋಲ್‌ ಕೀಪರ್ ಆಗಿ ಆರಿಸುವುದು ಸ್ಪಷ್ಟ ನಿರ್ಧಾರವಾಗಿತ್ತು. ನಮ್ಮ ಭಾರತೀಯ ಆಟಗಾರ್ತಿಯರಾದ ಉದಿತಾ, ಸುಮನ್ ದೇವಿ ಥೌಡಂ, ಪ್ರೀತಿ ದುಬೆ, ಕೈಟ್ಲಿನ್ ನಾಬ್ಸ್ ಮತ್ತು ವಿಕ್ಟೋರಿಯಾ ತಂಡಕ್ಕೆ ರಾಷ್ಟ್ರೀಯ ಅನುಭವವನ್ನು ನೀಡಲಿದ್ದಾರೆ," ಎಂದಿದ್ದಾರೆ.