ಕರಾಚಿ, ಮೇ 16: ಮುಂಬರುವ ಮಹಿಳಾ ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನ ಶನಿವಾರ 15 ಸದಸ್ಯರ ತಂಡವನ್ನು ಹೆಸರಿಸಿದೆ. ಅನುಭವಿ ಫಾತಿಮಾ ಸನಾ ತಂಡದ ನಾಯಕಿಯಾಗಿದ್ದಾರೆ. ತಂಡದಲ್ಲಿ ಐದು ಆಟಗಾರ್ತಿಯರು ಮೊದಲ ಬಾರಿಗೆ ಸ್ಥಾನ ಪಡೆದಿದ್ದಾರೆ. ಐಮನ್ ಫಾತಿಮಾ, ನಟಾಲಿಯಾ ಪರ್ವೈಜ್, ರಮೀನ್ ಶಮಿಮ್, ಸೈರಾ ಜಬೀನ್ ಮತ್ತು ತಸ್ಮಿಯಾ ರುಬಾಬ್.
ಇತ್ತೀಚೆಗೆ ಮುಕ್ತಾಯಗೊಂಡ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಎರಡು ಶತಕಗಳನ್ನು ಬಾರಿಸಿದ್ದ ಗುಲ್ ಫಿರೋಜಾ ಅಗ್ರ ಕ್ರಮಾಂಕವನ್ನು ಬಲಪಡಿಸಲಿದ್ದಾರೆ. ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮುನೀಬಾ ಅಲಿ ಮತ್ತು ಆಯೇಷಾ ಜಾಫರ್ ಪಾಕಿಸ್ತಾನದ ಅಗ್ರ ಕ್ರಮಾಂಕವನ್ನು ಮುನ್ನಡೆಸುವ ಇತರ ಆಟಗಾರ್ತಿಯರಾಗಿದ್ದಾರೆ.
ನಟಾಲಿಯಾ, ಇರಾಮ್ ಜಾವೇದ್, ಅಲಿಯಾ ರಿಯಾಜ್ ಮತ್ತು ಸೈರಾ ಮಧ್ಯಮ ಕ್ರಮಾಂಕದ ಆಟಗಾರ್ತಿಯಾಗಿದ್ದಾರೆ. ಪಾಕಿಸ್ತಾನದ ದೊಡ್ಡ ಶಕ್ತಿ ಬೌಲಿಂಗ್‌ನಲ್ಲಿದೆ. ಸಾದಿಯಾ ಇಕ್ಬಾಲ್, ನಶ್ರಾ ಸಂಧು, ತುಬಾ ಹಸನ್ ಮತ್ತು ರಮೀನ್ ಸ್ಪಿನ್ ದಾಳಿಯನ್ನು ಮುನ್ನಡೆಸಿದರೆ, ಫಾತಿಮಾ, ಡಯಾನಾ ಬೇಗ್ ಮತ್ತು ತಸ್ಮಿಯಾ ವೇಗದ ಬೌಲಿಂಗ್ ವಿಭಾಗವನ್ನು ಬಲಪಡಿಸಲಿದ್ದಾರೆ.
Women's T20 World Cup 2026: ಭಾರತ ಮಹಿಳಾ ತಂಡವನ್ನು ಪ್ರಕಟಿಸಿದ ಬಿಸಿಸಿಐ!
ಪಂದ್ಯಾವಳಿಗೂ ಮುನ್ನ, ಇದೇ ತಂಡವು ಮೇ 28 ರಿಂದ ಪ್ರಾರಂಭವಾಗುವ ಐರ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಒಳಗೊಂಡ ತ್ರಿಕೋನ ಸರಣಿಯಲ್ಲಿ ಭಾಗವಹಿಸಲಿದೆ. ಮಹಿಳಾ ಟಿ20 ವಿಶ್ವಕಪ್‌ನ ಎಲ್ಲಾ ಆವೃತ್ತಿಗಳಲ್ಲಿ ಭಾಗವಹಿಸಿರುವ ಪಾಕಿಸ್ತಾನ ಇನ್ನೂ ನಾಕೌಟ್ ಹಂತವನ್ನು ತಲುಪಿಲ್ಲ. ಟೂರ್ನಿಯಲ್ಲಿ ಅದರ ಮೊದಲ ಪೈಪೋಟಿ ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧ. ಪಾಕಿಸ್ತಾನ ತಂಡವು 'ಎ' ಗುಂಪಿನಲ್ಲಿ ಸ್ಥಾನ ಪಡೆದಿದೆ. ಆಸ್ಟ್ರೇಲಿಯಾ, ಭಾರತ, ದಕ್ಷಿಣ ಆಫ್ರಿಕಾ, ನೆದರ್ಲ್ಯಾಂಡ್ಸ್ ಮತ್ತು ಬಾಂಗ್ಲಾದೇಶ ಈ ಗುಂಪಿನ ತಂಡಗಳಾಗಿವೆ.
ಪಾಕ್ ಮಹಿಳಾ ಟಿ20 ವಿಶ್ವಕಪ್ ತಂಡ
ಫಾತಿಮಾ ಸನಾ (ನಾಯಕಿ), ಗುಲ್ ಫಿರೋಜಾ, ಆಯೇಶಾ ಜಾಫರ್, ಇರಾಮ್ ಜಾವೇದ್, ಐಮನ್ ಫಾತಿಮಾ, ಅಲಿಯಾ ರಿಯಾಜ್, ನತಾಲಿಯಾ ಪರ್ವೈಜ್, ಸೈರಾ ಜಬೀನ್, ಮುನೀಬಾ ಅಲಿ, ತುಬಾ ಹಸನ್, ರಮೀನ್ ಶಮೀಮ್, ಸಾದಿಯಾ ಇಕ್ಬಾಲ್, ನಶ್ರಾ ಸಂಧು, ಡಯಾನಾ ಬೇಗ್, ತಸ್ಮಿಯಾ ರುಬಾಬ್.