ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪಾಕಿಸ್ತಾನ-ನ್ಯೂಜಿಲೆಂಡ್‌ ಪಂದ್ಯ ರದ್ದು; ಉಭಯ ತಂಡಗಳಿಗೂ ಒಂದಂಕ

Pakistan vs New Zealand: ಎರಡು ಸೆಮಿಫೈನಲ್‌ ಮತ್ತು ಫೈನಲ್‌ ಪಂದ್ಯಕ್ಕೆ ಮೀಸಲು ದಿನ ನಿಗದಿಯಾಗಿದೆ. ಸೆಮಿ ಪಂದ್ಯ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಮುಂದಿರುವ ತಂಡ ಫೈನಲ್​ಗೇರಲಿದೆ. ಒಂದೊಮ್ಮೆ ಫೈನಲ್‌ ಪಂದ್ಯವೂ ಕೂಡ ಮಳೆಯಿಂದ ಪೂರ್ಣ ಫಲಿತಾಂಶ ಬಾರದೆ ರದ್ದುಗೊಂಡರೆ ಆಗ ಜಂಟಿ ವಿಜೇತರನ್ನು ಘೋಷಿಸಲಾಗುವುದು.

pak vs nz Match abandoned

ಕೊಲಂಬೊ, ಫೆ.21: ಟಿ20 ವಿಶ್ವಕಪ್‌ನ ನ್ಯೂಜಿಲೆಂಡ್‌ ಮತ್ತು ಪಾಕಿಸ್ತಾನ ನಡುವಣ ಸೂಪರ್‌-8(T20 World Cup 2026 Super Eights) ಪಂದ್ಯ ಮಳೆಯಿಂದ ಒಂದು ಎಸೆತ ಕಾಣದೆ ರದ್ದುಗೊಂಡಿದೆ. ಮೀಸಲು ದಿನ ಇರದ ಕಾರಣ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಯಿತು.

ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಈ ಪಂದ್ಯ ಕೇವಲ ಟಾಸ್‌ಗಷ್ಟೇ ಸೀಮಿತವಾಯಿತು. ಟಾಸ್‌ ಆದ ತಕ್ಷಣ ಮಳೆ ಜೋರಾಗಿ ಸುರಿಯಲಾರಂಭಿಸಿತು. 8:10ರ ವೇಳೆ ಅಂಪೈರ್‌ಗಳು ಪಂದ್ಯದ ಕಟ್‌-ಅಫ್‌ ಸಮಯ ಘೋಷಿಸಿದರು. ಅದರಂತೆ 5 ಓವರ್‌ಗಳ ಸ್ಪರ್ಧೆಗೆ ಕಟ್-ಆಫ್ ಸಮಯ ರಾತ್ರಿ 10:16 ನಿಗದಿ ಮಾಡಿದರು. ಆದರೆ ಮಳೆ ಬಿಡುವ ಸೂಚನೆ ಕಂಡು ಬಾರದ ಕಾರಣ ಅಂತಿಮವಾಗಿ ಪಂದ್ಯವನ್ನು ರದ್ದು ಎಂದು ಘೋಷಿಸಿದರು.

ಸೆಮಿ, ಫೈನಲ್‌ಗೆ ಮೀಸಲು ದಿನ

ಎರಡು ಸೆಮಿಫೈನಲ್‌ ಮತ್ತು ಫೈನಲ್‌ ಪಂದ್ಯಕ್ಕೆ ಮೀಸಲು ದಿನ ನಿಗದಿಯಾಗಿದೆ. ಸೆಮಿ ಪಂದ್ಯ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಮುಂದಿರುವ ತಂಡ ಫೈನಲ್​ಗೇರಲಿದೆ. ಒಂದೊಮ್ಮೆ ಫೈನಲ್‌ ಪಂದ್ಯವೂ ಕೂಡ ಮಳೆಯಿಂದ ಪೂರ್ಣ ಫಲಿತಾಂಶ ಬಾರದೆ ರದ್ದುಗೊಂಡರೆ ಆಗ ಜಂಟಿ ವಿಜೇತರನ್ನು ಘೋಷಿಸಲಾಗುವುದು.



ನಾಳೆ ಭಾರತ vs ದಕ್ಷಿಣ ಆಫ್ರಿಕಾ ಮುಖಾಮುಖಿ

ಭಾರತ ಮತ್ತು ದಕ್ಷಿಣ ಆಫ್ರಿಕಾ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ಮೂರನೇ ಸೂಪರ್ 8 ಪಂದ್ಯಾವಳಿಯಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ ಎರಡೂ ತಂಡಗಳಿಗೆ ಇದು ಮೊದಲ ಪಂದ್ಯವಾಗಿದೆ.

ಟಿ20ಗಳಲ್ಲಿ ಮುಖಾಮುಖಿ ದಾಖಲೆ

ಆಡಿರುವ ಪಂದ್ಯಗಳು- 35

ಭಾರತ ಗೆಲುವು - 21

ದಕ್ಷಿಣ ಆಫ್ರಿಕಾ ಗೆಲುವು - 13

ಫಲಿತಾಂಶವಿಲ್ಲ - 1