ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮದುವೆ ರದ್ದಾದ ಬೆನ್ನಲ್ಲೇ ಸ್ಮೃತಿ ಮಂಧಾನ ಜತೆಗಿದ್ದ ಎಲ್ಲಾ ಫೋಟೊ ಡಿಲೀಟ್‌ ಮಾಡಿದ ಪಲಾಶ್

Palash Muchhal: ಭಾನುವಾರ ಮಂಧಾನ ಮತ್ತು ಪಲಾಶ್‌ ತಮ್ಮ ವಿವಾಹ ರದ್ದಾದ ಬಗ್ಗೆ ಅಧಿಕೃತ ಪ್ರಕಟನೆ ಮೂಲಕ ಖಚಿತಪಡಿಸಿದ್ದರು. ಎಲ್ಲವನ್ನು ಇಲ್ಲಿಗೇ ಬಿಟ್ಟು, ಮುಂದುವರಿಯುವ ಆಲೋಚನೆ ಮಾಡಿರುವುದಾಗಿ ಮತ್ತು ಎರಡೂ ಕುಟುಂಬಗಳ ಖಾಸಗಿತನವನ್ನು ಗೌರವಿಸುವಂತೆ ಮನವಿ ಮಾಡಿದ್ದರು.

Palash Muchhal

ಮುಂಬಯಿ, ಡಿ.8: ಭಾರತದ ಮಹಿಳಾ ಕ್ರಿಕೆಟ್‌ ತಂಡದ ಉಪನಾಯಕಿ ಸ್ಮೃತಿ ಮಂಧಾನ(Smriti Mandhana) ಹಾಗೂ ಸಂಗೀತ ಸಂಯೋಜಕ ಪಲಾಶ್‌ ಮುಚ್ಛಲ್‌(Palash Muchhal) ವಿವಾಹ ರದ್ದಾದ ಬೆನ್ನಲ್ಲೇ ಇಬ್ಬರು ಇನ್‌ಸ್ಟಾಗ್ರಾಂನಲ್ಲಿ ಪರಸ್ಪರ 'ಅನ್‌ಫಾಲೋ' ಮಾಡಿಕೊಂಡಿದ್ದಾರೆ. ಪಲಾಶ್‌ ಮುಚ್ಛಲ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಮಂಧಾನ ಅವರೊಂದಿಗೆ ಹಂಚಿಕೊಂಡಿದ್ದ ಎಲ್ಲ ಪೋಸ್ಟ್‌ಗಳನ್ನು ಡಿಲೀಟ್‌ ಮಾಡಿದ್ದಾರೆ.

ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದ ಪಲಾಶ್‌ ಮತ್ತು ಮಂಧಾನ ಅವರ ನಡುವಿನ ಪ್ರಪೋಸಲ್‌ ವಿಡಿಯೊ, ಮಹಿಳಾ ವಿಶ್ವಕಪ್‌ ಟ್ರೋಫಿ ಗೆದ್ದಾಗ ಅವರೊಂದಿಗೆ ಹಂಚಿಕೊಂಡಿದ್ದ ಫೋಟೋಗಳು ಹಾಗೂ ನಿಶ್ಚಿತಾರ್ಥದ ವಿಡಿಯೊ ಸೇರಿದಂತೆ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್‌ ಮಾಡಿದ್ದಾರೆ.

ಭಾನುವಾರ ಮಂಧಾನ ಮತ್ತು ಪಲಾಶ್‌ ತಮ್ಮ ವಿವಾಹ ರದ್ದಾದ ಬಗ್ಗೆ ಅಧಿಕೃತ ಪ್ರಕಟನೆ ಮೂಲಕ ಖಚಿತಪಡಿಸಿದ್ದರು. ಎಲ್ಲವನ್ನು ಇಲ್ಲಿಗೇ ಬಿಟ್ಟು, ಮುಂದುವರಿಯುವ ಆಲೋಚನೆ ಮಾಡಿರುವುದಾಗಿ ಮತ್ತು ಎರಡೂ ಕುಟುಂಬಗಳ ಖಾಸಗಿತನವನ್ನು ಗೌರವಿಸುವಂತೆ ಮನವಿ ಮಾಡಿದ್ದರು.

ಮಂಧಾನ ಮದುವೆ ಮುಂದೂಡಿಕೆಯಾದ ದಿನವೇ ಒಂದು ವಾರಗಳ ಕಾಲ ನಡೆದ ಮದುವೆ ಸಂಭ್ರಮದ ಹಲವು ವಿಡಿಯೋಗಳನ್ನು ಸ್ಮೃತಿ ಹಂಚಿಕೊಂಡಿದ್ದರು. ಆದರೆ ಅದೆಲ್ಲವನ್ನೂ ಆಗಲೇ ಅಳಿಸಿ ಹಾಕಿದ್ದು, ಚರ್ಚೆಗೆ ಗ್ರಾಸವಾಗಿತ್ತು.ಇವರ ಜತೆಗೆ ಈ ಸಂಭ್ರಮದಲ್ಲಿ ಭಾಗಿಯಾಗಿದ್ದ ಟೀಂ ಇಂಡಿಯಾದ ಇತರ ಆಟಗಾರ್ತಿಯರಾದ ಜೆಮಿಮಾ ರೋಡ್ರಿಗ್ಸ್‌, ಶ್ರೇಯಾಂಕಾ ಪಾಟೀಲ್‌ ಸೇರಿ ಹಲವು ಸ್ನೇಹಿತೆಯರು ಸ್ಮೃತಿ ನಿಶ್ಚಿತಾರ್ಥದ ವಿಷಯ ಬಹಿರಂಗಪಡಿಸಲು ಮಾಡಿದ್ದ ವಿಡಿಯೋವನ್ನು ತಮ್ಮ ಖಾತೆಗಳಿಂದ ಡಿಲೀಟ್‌ ಮಾಡಿದ್ದರು.

ಇದನ್ನೂ ಓದಿ Smriti Mandhana: ಪಲಾಶ್ ಮುಚ್ಚಲ್ ಜತೆಗಿನ ಮದುವೆ ರದ್ದು; ದೃಢಪಡಿಸಿದ ಸ್ಮೃತಿ ಮಂಧಾನ

ಮದುವೆ ದಿನ ಪಲಾಶ್‌ ಮುಚ್ಚಲ್‌, ಮಹಿಳಾ ಡ್ಯಾನ್ಸ್‌ ಕೊರಿಯೋಗ್ರಾಫರ್‌ ಒಬ್ಬರ ಜೊತೆ ಪ್ರಣಯದಲ್ಲಿದ್ದಾಗ ಸ್ಮೃತಿ ಬಳಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿತ್ತು. ಆಘಾತಕ್ಕೊಳಗಾದ ಸ್ಮೃತಿ ಮದುವೆಯನ್ನು ಸ್ಥಗಿತಗೊಳಿಸಲು ಇದೇ ಕಾರಣ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಲಾಶ್‌, ತಾನು ಯಾರಿಗೂ ಮೋಸ ಮಾಡಿಲ್ಲ. ತಮ್ಮ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳೆಲ್ಲ ಸುಳ್ಳು ಎಂದು ಹೇಳಿದ್ದಾರೆ.

ವದಂತಿಗಳು ತೀವ್ರ ನೋವುಂಟುಮಾಡುವ ಮತ್ತು ಸಂಪೂರ್ಣವಾಗಿ ಆಧಾರರಹಿತ ಮತ್ತು ಮಾನಹಾನಿಕರ ಎಂದು ಅವರು ಬಣ್ಣಿಸಿದ್ದಾರೆ. ಸುಳ್ಳು ಮಾಹಿತಿ ಹರಡುವವರ ವಿರುದ್ಧ ತಮ್ಮ ತಂಡವು ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ಪಲಾಶ್‌ ಎಚ್ಚರಿಸಿದ್ದಾರೆ.