ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಒಂದಂಕ ಪಡೆದು ಆರ್‌ಸಿಬಿಯನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಪಂಜಾಬ್‌

IPL 2026 Points Table: ಆರೆಂಜ್ ಕ್ಯಾಪ್‌ಗಾಗಿ ಟಾಪ್-10 ಪಟ್ಟಿಯಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಿದೆ. ಅಂಗ್‌ಕ್ರಿಶ್ ರಘುವಂಶಿ 7 ಗಳಿಸುವ ಮೂಲಕ ಐದನೇ ಸ್ಥಾನ್ಕೇರಿದ್ದಾರೆ. ಪಿಬಿಕೆಎಸ್‌ನ ಕೂಪರ್ ಕಾನೊಲಿಗಿಂತ ಎರಡು ರನ್ ಮುಂದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ನ ಸಮೀರ್‌ ರಿಝ್ವಿ(160 ರನ್‌) ಮೊದಲ ಸ್ಥಾನದಲ್ಲಿದ್ದಾರೆ.

Shreyas Iyer

ಕೋಲ್ಕತಾ, ಎ.7: ಈಡನ್ ಗಾರ್ಡನ್ಸ್‌ನಲ್ಲಿ ನಡೆಯಬೇಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಮಳೆಯಿಂದ ಕೇವಲ 3.4 ಓವರ್‌ಗಳನ್ನು ಮಾತ್ರ ಆಡಲು ಸಾಧ್ಯವಾಯಿತು. ಪಂದ್ಯ ರದ್ದಾದ ಕಾರಣ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಯಿತು. ಈ ಒಂದು ಅಂಕ ಪಡೆದ ಕೆಕೆಆರ್‌ ಅಂಕಪಟ್ಟಿ(IPL 2026 Points Table)ಯಲ್ಲಿ ಖಾತೆ ತೆರೆಯಿತು.

ಪಂಜಾಬ್‌ ತಂಡ ಆರ್‌ಸಬಿಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿತು. ಸದ್ಯ ಆಡಿದ ‌3 ಪಂದ್ಯಗಳಿಂದ 5 ಅಂಕ ಕಲೆಹಾಕಿದೆ. ಆರ್‌ಸಿಬಿ ಎರಡನೇ ಸ್ಥಾನಿಯಾಗಿದೆ. ಉಳಿದಂತೆ ರಾಜಸ್ಥಾನ್‌ ಮತ್ತು ಡೆಲ್ಲಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದೆ. ಸತತ ಎರಡು ಸೋಲು ಕಂಡಿದ್ದ ಕೆಕೆಆರ್‌ ಒಂದು ಅಂಕದ ಬಲದಿಂದ ಸದ್ಯ 8ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಇಂದು ನಡೆಯುವ ಪಂದ್ಯದಲ್ಲಿ ಅಜೇಯ ರಾಜಸ್ಥಾನ್‌ ಮತ್ತು ಮುಂಬೈ ತಂಡಗಳು ಸೆಣಸಾಟ ನಡೆಸಲಿವೆ. ಈ ಪಂದ್ಯದಲ್ಲಿ ರಾಜಸ್ಥಾನ್‌ ಗೆದ್ದರೆ ಹ್ಯಾಟ್ರಿಕ್‌ ಗೆಲುವಿನ ಜತೆಗೆ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಪಡೆಯಲಿದೆ. ಇತ್ತಂಡಗಳ ನಡುವಣ ಈ ಪಂದ್ಯ ಗುವಾಹಟಿಯಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ.

ಆರೆಂಜ್ ಕ್ಯಾಪ್‌ಗಾಗಿ ಟಾಪ್-10 ಪಟ್ಟಿಯಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಿದೆ. ಅಂಗ್‌ಕ್ರಿಶ್ ರಘುವಂಶಿ 7 ಗಳಿಸುವ ಮೂಲಕ ಐದನೇ ಸ್ಥಾನ್ಕೇರಿದ್ದಾರೆ. ಪಿಬಿಕೆಎಸ್‌ನ ಕೂಪರ್ ಕಾನೊಲಿಗಿಂತ ಎರಡು ರನ್ ಮುಂದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ನ ಸಮೀರ್‌ ರಿಝ್ವಿ(160 ರನ್‌) ಮೊದಲ ಸ್ಥಾನದಲ್ಲಿದ್ದಾರೆ.

KKR vs PBKS ಪಂದ್ಯವನ್ನು ಬಲಿ ಪಡೆದ ಮಳೆರಾಯ, ತಂಡಗಳಿಗೆ ಒಂದೊಂದು ಅಂಕ!

ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತ್ತ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಇನಿಂಗ್ಸ್‌ನ ಎರಡನೇ ಓವರ್‌ ಬೌಲಿಂಗ್ ಮಾಡಿದ ಝೇವಿಯರ್ (9ಕ್ಕೆ2) ಎರಡು ವಿಕೆಟ್ ಬುಟ್ಟಿಗೆ ಹಾಕಿಕೊಂಡರು. ಆರಂಭಿಕ ಬ್ಯಾಟರ್ ಫೀನ್ ಅಲೆನ್ (6; 7ಎ, 4X1) ಮತ್ತು ಕ್ಯಾಮರಾನ್ ಗ್ರೀನ್ (4; 2ಎ, 4X1) ಅವರು ನಿರ್ಗಮಿಸಿದರು. 3.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 25 ರನ್ ಗಳಿಸಿದ ವೇಳೆ ಮತ್ತೆ ಮಳೆ ಸುರಿದು ಪಂದ್ಯ ಸ್ಥಗಿತಗೊಂಡಿತು.

ರಾತ್ರಿ 11:14ರ ಕಟ್‌ ಆಫ್‌ಗೆ 40 ನಿಮಿಷಗಳ ಮೊದಲು ಮಳೆ ನಿಂತಿತು. ಆದರೆ, ಐದು ಓವರ್‌ಗಳ ಪಂದ್ಯಕ್ಕೆ ಮೈದಾನವನ್ನು ಸಿದ್ಧಪಡಿಸಲು ಸಾಕಷ್ಟು ಸಮಯವಿರಲಿಲ್ಲ. ಹೀಗಾಗಿ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು. ಸ್ವಾರಸ್ಯವೆಂದರೆ, ಹೋದ ವರ್ಷ ಈಡನ್ ಗಾರ್ಡನ್‌ ನಲ್ಲಿ ಕೋಲ್ಕತ್ತ ಮತ್ತು ಪಂಜಾಬ್ ಮುಖಾಮುಖಿಯಾಗಿದ್ದ ಪಂದ್ಯವೂ ಮಳೆಯಿಂದಾಗಿ ರದ್ದಾಗಿತ್ತು.