ಮುಲ್ಲಾನ್‌ಪುರ್ (ಚಂಡೀಗಢ): ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು(ಗುರುವಾರ) ರಾತ್ರಿ 7.30 ಕ್ಕೆ ಮುಲ್ಲನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯ ಆರಂಭಗೊಳ್ಳಲಿದೆ. ಈ ಪಂದ್ಯಕ್ಕೆ ಆರ್‌ಸಿಬಿ ತನ್ನ ಆಡುವ ಬಳಗದಲ್ಲಿ 2 ಮಹತ್ವದ ಬದಲಾವಣೆ ಮಾಡುವು ಸಾಧ್ಯತೆ ಇದೆ.
ಗಾಯದಿಂದ ಚೇತರಿಕೆ ಕಂಡಿರುವ ಆಸೀಸ್ ಆಟಗಾರರಾದ ಜೋಶ್ ಹ್ಯಾಜಲ್‌ವುಡ್ ಮತ್ತು ಡಿಟ್ ಡೇವಿಡ್ ಚೇತರಿಸಿಕೊಂಡಿದ್ದು ಈ ಪಂದ್ಯದಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ. ಉಭಯ ಆಟಗಾರರು ಕಣಕ್ಕಿಳಿದರೆ ಇವರಿಗಾಗಿ ಲಿಯಾಂಮ್ ಲಿವಿಂಗ್‌ಸ್ಟೋನ್ ಮತ್ತು ನುವಾನ್ ತುಷಾರ ಜಾಗ ಬಿಡಬೇಕಾಗಿದೆ.
ಪಂಜಾಬ್ ತಂಡದಲ್ಲಿಯೂ ಎರಡು ಬದಲಾವಣೆ ಖಚಿತ. ರಾಷ್ಟ್ರೀಯ ತಂಡದ ಕರ್ತವ್ಯಕ್ಕೆ ಮರಳಿದ ಮಾರ್ಕೊ ಜಾನ್ಸೆನ್ ಬದಲು ಅಜ್ಮತುಲ್ಲಾ ಒಮರ್ಜೈ ಆಡಬಹುದು. ಯಜುವೇಂದ್ರ ಚಹಲ್ ಕೂಡ ಗಾಯದಿಂದ ಚೇತರಿಕೆ ಕಂಡಿದ್ದು ಈ ಪಂದ್ಯದಲ್ಲಿ ಆಡಲಿದ್ದಾರೆ. ಆಗ ಹರ್‌ಪ್ರೀತ್ ಬ್ರಾರ್ ಹೊರಗುಳಿಯಬೇಕಾಗಬಹುದು.
ಮೂರನೇ ಮುಖಾಮುಖಿ
ಪ್ರಸಕ್ತ ಋತುವಿನಲ್ಲಿ ಆರ್‌ಸಿಬಿ-ಪಂಜಾಬ್ ನಡುವಿನ 3ನೇ ಮುಖಾಮುಖಿ ಇದಾಗಿದೆ. ಎ. 18ರ ಬೆಂಗಳೂರು ಮಳೆ ಪಂದ್ಯವನ್ನು ಪಂಜಾಬ್ 5 ವಿಕೆಟ್‌ಗಳಿಂದ ಜಯಿಸಿತ್ತು. ಒಂದೇ ದಿನದ ಅಂತರದಲ್ಲಿ ಮುಲ್ಲಾನ್‌ಪುರ್‌ಗೆ ತೆರಳಿದ ಆರ್‌ಸಿಬಿ 7 ವಿಕೆಟ್‌ಗಳಿಂದ ಪಂಜಾಬನ್ನು ಮಣಿಸಿತ್ತು. ಇದೀಗ ಮೂರನೇ ಮುಖಾಮುಖಿಯಲ್ಲಿ ಯಾರು ಗೆಲ್ಲಲಿದ್ದಾರೆ ಎಂದು ಕಾದು ನೋಡಬೇಕಿದೆ.
ಸಂಭಾವ್ಯ ಆಡುವ ಬಳಗ
ಆರ್‌ಸಿಬಿ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ರಜತ್ ಪಾಟೀದಾರ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ), ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ನುವಾನ್ ತುಷಾರ.
ಪಂಜಾಬ್: ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಸ್ (ವಿ.ಕೀ), ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋನಿಸ್, ಅಜ್ಮತುಲ್ಲಾ ಒಮರ್ಜೈ, ಹರ್‌ಪ್ರೀತ್ ಬ್ರಾರ್/ಯಜುವೇಂದ್ರ ಚಹಲ್, ಕೈಲ್ ಜೇಮಿಸನ್, ವಿಜಯ್‌ಕುಮಾರ್ ವೈಶಾಕ್, ಅರ್ಷ್‌ದೀಪ್ ಸಿಂಗ್.
ಇದನ್ನೂ ಓದಿ IPL 2025:ʻದಿಗ್ವೇಶ್ ಸಿಂಗ್ ರನ್‌ಔಟ್ ವಿವಾದʼ-ರಿಷಭ್ ಪಂತ್ ವಿರುದ್ಧ ಅಶ್ವಿನ್ ಕಿಡಿ!