ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ದಾಖಲೆಯ ಪದಕ ಗೆದ್ದ ಭಾರತೀಯ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ

PM Modi: ಹ್ಯಾಂಗ್‌ಝೌನಲ್ಲಿ ನಡೆದ 2023ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತವು 108 ಪದಕಗಳನ್ನು ಗೆದ್ದು ತನ್ನ ಹಿಂದಿನ ಅತ್ಯುತ್ತಮ ಸಾಧನೆಯನ್ನು ಮೀರಿಸಿದೆ. ಅಲ್ಲದೆ, ತನ್ನ ಚಿನ್ನದ ಪದಕಗಳ ಸಂಖ್ಯೆಯನ್ನು 27ರಿಂದ 30ಕ್ಕೆ ಏರಿಸಿಕೊಂಡಿದೆ. ಪದಕ ಪಟ್ಟಿಯಲ್ಲಿ ಚೀನಾ, ಜಪಾನ್ ಮತ್ತು ಉಜ್ಬೇಕಿಸ್ತಾನ್‌ಗಳ ನಂತರ ಭಾರತವು ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿತು.

PM Narendra Modi

ನವದೆಹಲಿ, ಅ.25: ಏಷ್ಯನ್ ಪ್ಯಾರಾ ಗೇಮ್ಸ್ 2026 ಮುಕ್ತಾಯಗೊಂಡ ಮರುದಿನ, ಅಂದರೆ ಅಕ್ಟೋಬರ್ 25, ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ಯಾರಾ-ಕ್ರೀಡಾಪಟುಗಳನ್ನು ಅಭಿನಂದಿಸಿದರು. ಈ ಕ್ರೀಡಾಕೂಟದಲ್ಲಿ ಭಾರತೀಯ ತಂಡವು ಇದುವರೆಗಿನ ಅತ್ಯಧಿಕ ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿತು. ನಾಗೋಯಾದಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಭಾರತವು ಒಟ್ಟು 114 ಪದಕಗಳನ್ನು (30 ಚಿನ್ನ, 35 ಬೆಳ್ಳಿ ಮತ್ತು 49 ಕಂಚಿನ ಪದಕಗಳು) ಗೆಲ್ಲುವ ಮೂಲಕ ತನ್ನ ಅಭಿಯಾನವನ್ನು ಪೂರ್ಣಗೊಳಿಸಿತು.

'X' ನಲ್ಲಿನ ಪೋಸ್ಟ್ ಕ್ರೀಡಾಪಟುಗಳ ದೃಢನಿಶ್ಚಯವನ್ನು ಶ್ಲಾಘಿಸಿದ ಮೋದಿ, ಅವರ ಪ್ರದರ್ಶನಗಳು ದೇಶಕ್ಕೆ ಅಪಾರ ಹೆಮ್ಮೆಯನ್ನು ತಂದಿವೆ ಎಂದು ಹೇಳಿದರು.

"ಇತ್ತೀಚೆಗಷ್ಟೇ ಮುಕ್ತಾಯಗೊಂಡ 2026ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ನಮ್ಮ ಪ್ಯಾರಾ ಕ್ರೀಡಾಪಟುಗಳು ಸಾಧಿಸಿರುವುದು ಎಂತಹ ಅದ್ಭುತ ಸಾಧನೆ!, ದಾಖಲೆಯ 114 ಪದಕಗಳೊಂದಿಗೆ, ಈ ಕ್ರೀಡಾಕೂಟದಲ್ಲಿ ಭಾರತವು ಇದುವರೆಗಿನ ಅತ್ಯುತ್ತಮ ಪ್ರದರ್ಶನವನ್ನು ನೀಡಿದೆ. ಇದು ಇಡೀ ರಾಷ್ಟ್ರಕ್ಕೆ ಅಪಾರ ಹೆಮ್ಮೆ ಮತ್ತು ಸಂತೋಷದ ಕ್ಷಣವಾಗಿದೆ!" ಎಂದು ಮೋದಿ ಪೋಸ್ಟ್‌ ಮಾಡಿದ್ದಾರೆ.

ಭಾರತ ವಿರುದ್ಧ ಸತತ ಸೋಲು; ತಂಡದಲ್ಲಿ ಹಲವು ಬದಲಾವಣೆ ಮಾಡಿದ ನ್ಯೂಜಿಲೆಂಡ್‌

"ನಮ್ಮ ತಂಡದ ಪ್ರತಿಯೊಬ್ಬ ಸದಸ್ಯರ ಅಸಾಧಾರಣ ದೃಢನಿಶ್ಚಯವನ್ನು ನಾನು ಅಭಿನಂದಿಸುತ್ತೇನೆ. ಪ್ರತಿಯೊಬ್ಬ ಕ್ರೀಡಾಪಟುವೂ ಈ ಐತಿಹಾಸಿಕ ಸಾಧನೆಗೆ ಕೊಡುಗೆ ನೀಡಿದ್ದಾರೆ ಮತ್ತು ತಮ್ಮ ಸಾಧನೆಗಳ ಮೂಲಕ ಅಸಂಖ್ಯಾತ ಭಾರತೀಯರಿಗೆ ಸ್ಫೂರ್ತಿ ತುಂಬಿದ್ದಾರೆ," ಎಂದು ಮೋದಿ ಬರೆದಿದ್ದಾರೆ.

ಹ್ಯಾಂಗ್‌ಝೌನಲ್ಲಿ ನಡೆದ 2023ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತವು 108 ಪದಕಗಳನ್ನು ಗೆದ್ದು ತನ್ನ ಹಿಂದಿನ ಅತ್ಯುತ್ತಮ ಸಾಧನೆಯನ್ನು ಮೀರಿಸಿದೆ. ಅಲ್ಲದೆ, ತನ್ನ ಚಿನ್ನದ ಪದಕಗಳ ಸಂಖ್ಯೆಯನ್ನು 27ರಿಂದ 30ಕ್ಕೆ ಏರಿಸಿಕೊಂಡಿದೆ. ಪದಕ ಪಟ್ಟಿಯಲ್ಲಿ ಚೀನಾ, ಜಪಾನ್ ಮತ್ತು ಉಜ್ಬೇಕಿಸ್ತಾನ್‌ಗಳ ನಂತರ ಭಾರತವು ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿತು.



ಭಾರತವು 168 ಸದಸ್ಯರ ತಂಡದೊಂದಿಗೆ ಸ್ಪರ್ಧಿಸಿತು. ಈ ಅಂಶವನ್ನು ಪರಿಗಣಿಸಿದರೆ, ಈ ಸಾಧನೆಯು ವಿಶೇಷ ಮಹತ್ವವನ್ನು ಪಡೆಯುತ್ತದೆ. ಏಕೆಂದರೆ ಈ ತಂಡದ ಗಾತ್ರವು ಹಿಂದಿನ ಆವೃತ್ತಿಯಲ್ಲಿದ್ದ ತಂಡದ ಗಾತ್ರದ ಅರ್ಧದಷ್ಟಿತ್ತು. ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು, ಅದರಲ್ಲಿಯೂ ಪ್ಯಾರಾ-ಅಥ್ಲೆಟಿಕ್ಸ್ ವಿಭಾಗವು ಭಾರತದ ಪದಕಗಳ ಪಟ್ಟಿಗೆ ಅತಿ ಹೆಚ್ಚು ಕೊಡುಗೆ ನೀಡಿತು.

ಪ್ಯಾರಾ-ಅಥ್ಲೆಟಿಕ್ಸ್‌ನಲ್ಲಿ ಭಾರತ 22 ಚಿನ್ನ, 19 ಬೆಳ್ಳಿ ಮತ್ತು 24 ಕಂಚು ಸೇರಿದಂತೆ 65 ಪದಕಗಳನ್ನು ಗಳಿಸಿದೆ. ಪ್ಯಾರಾ-ಬ್ಯಾಡ್ಮಿಂಟನ್ 16 ಪದಕಗಳೊಂದಿಗೆ ಮುಂದಿನ ಪ್ರಮುಖ ಕೊಡುಗೆ ನೀಡಿದರೆ, ಪ್ಯಾರಾ-ಈಜು 11 ಪದಕಗಳನ್ನು ಸೇರಿಸಿತು. ಪ್ಯಾರಾ-ಆರ್ಚರಿಯಲ್ಲಿ ಮೂರು ಚಿನ್ನದ ಪದಕಗಳೂ ಸೇರಿದಂತೆ ಒಟ್ಟು ಆರು ಪದಕಗಳು ಲಭಿಸಿದರೆ, ಪ್ಯಾರಾ-ಶೂಟಿಂಗ್‌ನಲ್ಲಿ ಎರಡು ಚಿನ್ನದ ಪದಕಗಳೊಂದಿಗೆ ಒಟ್ಟು ಐದು ಪದಕಗಳು ಬಂದವು. ಇವುಗಳಲ್ಲದೆ, ಪ್ಯಾರಾ-ಟೇಬಲ್ ಟೆನ್ನಿಸ್, ಪ್ಯಾರಾ-ಜೂಡೋ ಮತ್ತು ಪ್ಯಾರಾ-ಪವರ್‌ಲಿಫ್ಟಿಂಗ್‌ನಲ್ಲೂ ಭಾರತ ಪದಕಗಳನ್ನು ಗೆದ್ದುಕೊಂಡಿತು.