ನವದೆಹಲಿ, ಜು.8: ಲಾರ್ಡ್ಸ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಿಂದ ಭಾರತೀಯ ಮಹಿಳಾ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಪ್ರತೀಕಾ ರಾವಲ್(Pratika Rawal) ಹೊರಗುಳಿದಿದ್ದಾರೆ. ಇದು ಕ್ರಿಕೆಟ್‌ನ ತವರು ಮೈದಾನದಲ್ಲಿ ನಡೆಯಲಿರುವ ಮೊದಲ ಮಹಿಳಾ ಟೆಸ್ಟ್ ಪಂದ್ಯವಾಗಿದೆ.
ಇತ್ತೀಚಿನ ಹಿನ್ನಡೆಯಿಂದಾಗಿ ಅವರು ಲಾರ್ಡ್ಸ್ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಜುಲೈ 10 ರಿಂದ 13 ರವರೆಗೆ ನಡೆಯಲಿರುವ ಏಕೈಕ ಪಂದ್ಯಕ್ಕೆ ಪ್ರಿಯಾ ಪುನಿಯಾ ಬದಲಿ ಆಟಗಾರ್ತಿಯಾಗಿ ತಂಡಕ್ಕೆ ಸೇರಿಸಲಾಗಿದೆ ಎಂದು ಕೋಚ್ ಅಮೋಲ್ ಮುಜುಂದಾರ್ ಹೇಳಿದ್ದಾರೆ. ಇಂಗ್ಲೆಂಡ್‌ನಲ್ಲಿ ಭಾರತ ಎ ಪರ ಮೂರು ಏಕದಿನ ಪಂದ್ಯಗಳಲ್ಲಿ ಎರಡರಲ್ಲಿ ಆಡಿದ ನಂತರ ಲಾರ್ಡ್ಸ್ ಟೆಸ್ಟ್‌ನಲ್ಲಿ ಕಾಣಿಸಿಕೊಳ್ಳುವ ಭರವಸೆ ಹೊಂದಿದ್ದರು.
2025 ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಗುಂಪು ಹಂತದ ಪಂದ್ಯದ ಸಮಯದಲ್ಲಿ ಪ್ರತಿಕಾ ಗಂಭೀರ ಗಾಯಕ್ಕೆ ತುತ್ತಾಗಿದ್ದರು. ಇದರಿಂದಾಗಿ ಅವರು ವಿಶ್ವಕಪ್‌ನ ಉಳಿದ ಪಂದ್ಯಗಳನ್ನು ತಪ್ಪಿಸಿಕೊಂಡರು. ಆದರೆ ಭಾರತದ ಟ್ರೋಫಿ ಗೆಲುವಿನ ವಿಜಯೋತ್ಸವದ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದರು. ಆರು ಇನ್ನಿಂಗ್ಸ್‌ಗಳಲ್ಲಿ 308 ರನ್ ಗಳಿಸುವ ಮೂಲಕ ಮಹಿಳಾ ಇನ್ ಬ್ಲೂ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದರು. ಗಾಯದಿಂದಾಗಿ, ಅವರು ಮಹಿಳಾ ಪ್ರೀಮಿಯರ್ ಲೀಗ್ ಮತ್ತು ಇಡೀ ದೇಶೀಯ ಋತುವನ್ನು ಕಳೆದುಕೊಳ್ಳಬೇಕಾಯಿತು.
ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಳ್ಳಲಿದ್ದಾರೆ ಸೌರವ್ ಗಂಗೂಲಿ
ಏತನ್ಮಧ್ಯೆ, ಇಂಗ್ಲೆಂಡ್ ತಂಡದ ವಿರುದ್ಧದ ಭಾರತ ಎ ಏಕದಿನ ಪಂದ್ಯಗಳಲ್ಲಿ ಪುನಿಯಾ ಇತ್ತೀಚೆಗೆ ನೀಡಿದ ಅದ್ಭುತ ಪ್ರದರ್ಶನದ ನಂತರ ಅವರನ್ನು ತಂಡಕ್ಕೆ ಕರೆಸಲಾಗಿದೆ. ಅವರು ಮೂರು ಪಂದ್ಯಗಳಲ್ಲಿ ಎರಡರಲ್ಲಿ ಎರಡು ಅರ್ಧಶತಕಗಳನ್ನು ಗಳಿಸಿದರು ಮತ್ತು ಇಂಗ್ಲೆಂಡ್ ಎ ವಿರುದ್ಧ ಭಾರತ ಎ ತಂಡವು 2-1 ಅಂತರದಿಂದ ಜಯಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ಟೆಸ್ಟ್‌ಗೆ ಪದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಡಿಸೆಂಬರ್ 2024 ರಲ್ಲಿ ಭಾರತ ಪರ ಅವರು ಕೊನೆಯ ಬಾರಿಗೆ ಆಡಿದ್ದರು.
ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಗ್ರೂಪ್ ಹಂತದಿಂದಲೇ ಹೊರಬಿದ್ದಿದ್ದರೂ, ಮಹಿಳಾ ತಂಡಕ್ಕೆ ಐತಿಹಾಸಿಕ ಲಾರ್ಡ್ಸ್ ಟೆಸ್ಟ್ ಪಂದ್ಯ ಕಾದಿದೆ. 1934 ರಲ್ಲಿ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಮೊದಲ ಮಹಿಳಾ ಟೆಸ್ಟ್ ಪಂದ್ಯ ನಡೆದ 92 ವರ್ಷಗಳ ನಂತರ, ಐಕಾನಿಕ್ ಸ್ಥಳದಲ್ಲಿ ಇದು ಮೊದಲ ಅಂತರರಾಷ್ಟ್ರೀಯ ರೆಡ್-ಬಾಲ್ ಪಂದ್ಯವಾಗಲಿದೆ.