ಮುಂಬೈ, ನ.24: ಮಂಗಳವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ 'ಗ್ರೂಪ್-ಬಿ' ಪಂದ್ಯದಲ್ಲಿ, ದೆಹಲಿ ತಂಡದ ನಾಯಕ ಪ್ರಿಯಾಂಶ್ ಆರ್ಯ ತಮಿಳುನಾಡು ವಿರುದ್ಧ ಕೇವಲ 68 ಎಸೆತಗಳಲ್ಲಿ 181 ರನ್ (7 ಬೌಂಡರಿಗಳು, 19 ಸಿಕ್ಸರ್ಗಳು) ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ.
ಈ ಪ್ರದರ್ಶನದೊಂದಿಗೆ ಅವರು ಟೂರ್ನಿಯ ಇತಿಹಾಸದಲ್ಲೇ ಇನ್ನಿಂಗ್ಸ್ ಒಂದರಲ್ಲಿ ವೈಯಕ್ತಿಕ ಗರಿಷ್ಠ ಮೊತ್ತವನ್ನು ದಾಖಲಿಸುವುದರ ಜೊತೆಗೆ, ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಆರ್ಯ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.
ಸಾಯಿ ಕಿಶೋರ್ ಅವರ ಎಸೆತವೊಂದನ್ನು ಲಾಂಗ್-ಆನ್ನತ್ತ ಸಿಕ್ಸರ್ಗೆ ಅಟ್ಟುವ ಮೂಲಕ, ಅವರು 149 ರಿಂದ 155 ರನ್ಗಳಿಗೆ ತಲುಪಿದರು ಮತ್ತು ಈ ಮೂಲಕ ತಿಲಕ್ ವರ್ಮಾ ಅವರ ಹಿಂದಿನ ಅತ್ಯುತ್ತಮ ಮೊತ್ತವಾದ 151 ರನ್ಗಳನ್ನು ಹಿಂದಿಕ್ಕಿದರು. ಮುಂದಿನ ಎಸೆತದಲ್ಲಿ, ಡೀಪ್ ಸ್ಕ್ವೇರ್ ಲೆಗ್ನತ್ತ ಚೆಂಡನ್ನು ಬಾರಿಸುವ ಮೂಲಕ, ಒಂದು ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು (17) ಸಿಡಿಸಿದ ಪುನೀತ್ ಬಿಷ್ಟ್ ಅವರ ದಾಖಲೆಯನ್ನು ಅವರು ಸರಿಗಟ್ಟಿದರು.
ಭಾರತದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದ ನ್ಯೂಜಿಲೆಂಡ್ನ ಪ್ರಮುಖ ವೇಗಿ
ನಂತರ, ಗುರ್ಜಪ್ನೀತ್ ಸಿಂಗ್ ಅವರ ಫುಲ್ ಟಾಸ್ ಎಸೆತವನ್ನು ಡೀಪ್ ಕವರ್ನತ್ತ ಸಿಕ್ಸರ್ಗೆ ಅಟ್ಟುವ ಮೂಲಕ ಅವರು ಈ ದಾಖಲೆಯನ್ನು ಸಂಪೂರ್ಣವಾಗಿ ತಮ್ಮದಾಗಿಸಿಕೊಂಡರು. ಅಷ್ಟೇ ಅಲ್ಲದೆ, ತಮ್ಮ ಖಾತೆಗೆ ಮತ್ತೊಂದು ಸಿಕ್ಸರ್ ಅನ್ನು ಕೂಡ ಸೇರಿಸಿಕೊಂಡರು.
ಇದು ಟಿ20 ಕ್ರಿಕೆಟ್ನಲ್ಲಿ ಭಾರತೀಯ ಬ್ಯಾಟರ್ ಒಬ್ಬರು ಗಳಿಸಿದ ಅತ್ಯಧಿಕ ಮೊತ್ತವೂ ಆಗಿತ್ತು. ಇದು 2026ರ ಐಪಿಎಲ್ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಪರ ಕೆ.ಎಲ್. ರಾಹುಲ್ ಗಳಿಸಿದ್ದ 152 ರನ್ಗಳ (ಔಟ್ ಆಗದೆ) ಹಿಂದಿನ ದಾಖಲೆಯನ್ನು ಮೀರಿಸಿತು.
ದೆಹಲಿ ಪರವಾಗಿ ಇನ್ನಿಂಗ್ಸ್ ಆರಂಭಿಸಿದ ಈ ಎಡಗೈ ಬ್ಯಾಟರ್, ದೆಹಲಿ ಇನ್ನಿಂಗ್ಸ್ನ 19ನೇ ಓವರ್ನ ನಾಲ್ಕನೇ ಎಸೆತದಲ್ಲಿ ಮಣಿಮಾರನ್ ಸಿದ್ಧಾರ್ಥ್ ಅವರ ಬೌಲಿಂಗ್ನಲ್ಲಿ ಪೆವಿಲಿಯನ್ಗೆ ಮರಳಿದರು. ಪೆವಿಲಿಯನ್ಗೆ ಹಿಂದಿರುಗುವ ಮೊದಲು, ಪ್ರಿಯಾನ್ಶ್ 7 ಬೌಂಡರಿಗಳು ಮತ್ತು 19 ಸಿಕ್ಸರ್ಗಳನ್ನು ಸಿಡಿಸಿದ್ದರು. ಪಂದ್ಯದಲ್ಲಿ ಸಾಯಿ ಕಿಶೋರ್ ಉತ್ತಮ ಪ್ರದರ್ಶನ ನೀಡಲಿಲ್ಲ. ಸರಿಯಾಗಿ ದಂಡಿಸಿಕೊಂಡರು.