ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತದ 15 ವರ್ಷಗಳ ಕಾಯುವಿಕೆಗೆ ಅಂತ್ಯ; ಜಪಾನ್ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದ ಪಿ.ವಿ ಸಿಂಧು

Japan Open: ಸೆಮಿಫೈನಲ್‌ನಲ್ಲಿ ಸಿಂಧುಗೆ ಸವಾಲು ಇನ್ನಷ್ಟು ಕಠಿಣವಾಗಲಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಆಟಗಾರ್ತಿ ಚೀನಾದ ಚೆನ್ ಯುಫೀ ವಿರುದ್ಧ ಆಡಿದ ಕೊನೆಯ ಐದು ಮುಖಾಮುಖಿಗಳಲ್ಲಿ ಸೋತಿದ್ದಾರೆ. ತಮ್ಮ ಮೊದಲ ಜಪಾನ್ ಓಪನ್ ಫೈನಲ್ ತಲುಪಬೇಕಾದರೆ ಸಿಂಧು ಅತ್ಯುತ್ತಮ ಪ್ರದರ್ಶನ ನೀಡಬೇಕಾಗುತ್ತದೆ.

PV Sindhu

ಜಪಾನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪಿವಿ ಸಿಂಧು ದಾಲೆಯೊಂದನ್ನು ನಿರ್ಮಿಸಿದ್ದಾರೆ. 15 ವರ್ಷಗಳ ನಂತರ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಸಿಂಗಲ್ಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮಾಜಿ ವಿಶ್ವ ಚಾಂಪಿಯನ್ ನೊಜೊಮಿ ಒಕುಹರಾ ವಿರುದ್ಧ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ವಾಕ್ ಓವರ್ ಪಡೆದ ನಂತರ ಅವರು ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಕೊನೆಯ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದರು.

ಈ ಮೂಲಕ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ, ಪ್ರತಿಷ್ಠಿತ ಸೂಪರ್ 750 ಸ್ಪರ್ಧೆಯಲ್ಲಿ ಭಾರತದ ದೀರ್ಘ ಕಾಯುವಿಕೆಯನ್ನು ಕೊನೆಗೊಳಿಸಿದರು. 2011 ರಲ್ಲಿ ಸೈನಾ ನೆಹ್ವಾಲ್ ಸೆಮಿಫೈನಲ್ ತಲುಪಿದ ಕೊನೆಯ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಸಿಂಧು ಈಗ ಸೆಮಿಫೈನಲ್‌ನಲ್ಲಿ ಮಾಜಿ ಒಲಿಂಪಿಕ್ ಚಾಂಪಿಯನ್ ಚೀನಾದ ಚೆನ್ ಯುಫೀ ಅವರನ್ನು ಎದುರಿಸಲಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಪ್ರಶಸ್ತಿ ಬರ ಎದುರಿಸುತ್ತಾ ಬಂದಿರುವ ಸಿಂಧು ಟೋಕಿಯೊದಲ್ಲಿ ತನ್ನ ಅದ್ಭುತ ಗೆಲುವಿನ ಓಟವನ್ನು ಮುಂದುವರಿ ಪ್ರಶಸ್ತಿ ಗೆಲ್ಲಲಿದ್ದಾರಾ ಎಂದು ಕಾದು ನೋಡಬೇಕಿದೆ. ಜಪಾನಿನ ಒಕುಹರಾ ಮತ್ತು ಸಿಂಧು ನಡುವಿನ ಕ್ವಾರ್ಟರ್ ಫೈನಲ್ ಹಣಾಹಣಿ ಸಾಕಷ್ಟು ರೋಮಾಂಚನ ಮೂಡಿಸಿತ್ತು. ಆದರೆ ಜಪಾನಿನ ತಾರೆ ಗಾಯಗೊಂಡ ಕಾರಣ ಪಂದ್ಯದಿಂದ ಹಿಂದೆ ಸರಿದರು.



ಭಾರತೀಯ ಶಟ್ಲರ್ ಸಿಂಧು ಆರಂಭಿಕ ಸುತ್ತಿನಲ್ಲಿ ಮಲೇಷ್ಯಾದ ವಾಂಗ್ ಲಿಂಗ್ ಚಿಂಗ್ ವಿರುದ್ಧ 21-14, 21-11 ಅಂತರದ ಭರ್ಜರಿ ಜಯ ಸಾಧಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಿದರು. ಅವರು, ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ 5ನೇ ಶ್ರೇಯಾಂಕಿತ ಆಟಗಾರ್ತಿ ಹಾನ್ ಯು ವಿರುದ್ಧ ಋತುವಿನ ಅತ್ಯುತ್ತಮ ಪ್ರದರ್ಶನ ನೀಡಿ ಕೇವಲ 35 ನಿಮಿಷಗಳಲ್ಲಿ 21-16, 21-14 ಅಂತರದಿಂದ ಸೋಲಿಸಿ ಕೊನೆಯ ಎಂಟರಲ್ಲಿ ಸ್ಥಾನ ಪಡೆದರು.

ಅರ್ಜೆಂಟೀನಾ vs ಸ್ಪೇನ್ ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು

ಜಪಾನ್‌ನಲ್ಲಿ ಸಿಂಧು ಅವರ ಓಟವು ಮಾಜಿ ವಿಶ್ವ ಚಾಂಪಿಯನ್‌ಗೆ 2026 ರ ಭರವಸೆಯ ಋತುವಿನಲ್ಲಿ ಮತ್ತೊಂದು ಉತ್ತೇಜಕ ಸಂಕೇತವಾಗಿದೆ. ಈ ವರ್ಷದ ಆರಂಭದಲ್ಲಿ, 31 ವರ್ಷದ ಸಿಂಧು ಮಲೇಷ್ಯಾ ಓಪನ್ ಸೂಪರ್ 1000 ರ ಸೆಮಿಫೈನಲ್ ತಲುಪಿದರು ಮತ್ತು ಅದರ ನಂತರ ಆಸ್ಟ್ರೇಲಿಯನ್ ಓಪನ್ ಸೂಪರ್ 500 ನಲ್ಲಿ ಅಕಾನೆ ಯಮಗುಚಿ ವಿರುದ್ಧ ಸೋತಿದ್ದರು.

ಆದಾಗ್ಯೂ, ಸೆಮಿಫೈನಲ್‌ನಲ್ಲಿ ಸಿಂಧುಗೆ ಸವಾಲು ಇನ್ನಷ್ಟು ಕಠಿಣವಾಗಲಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಆಟಗಾರ್ತಿ ಚೀನಾದ ಚೆನ್ ಯುಫೀ ವಿರುದ್ಧ ಆಡಿದ ಕೊನೆಯ ಐದು ಮುಖಾಮುಖಿಗಳಲ್ಲಿ ಸೋತಿದ್ದಾರೆ. ತಮ್ಮ ಮೊದಲ ಜಪಾನ್ ಓಪನ್ ಫೈನಲ್ ತಲುಪಬೇಕಾದರೆ ಸಿಂಧು ಅತ್ಯುತ್ತಮ ಪ್ರದರ್ಶನ ನೀಡಬೇಕಾಗುತ್ತದೆ.