ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KKR vs RR: ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿ ದಾಖಲೆ ಬರೆದ ಕ್ವಿಂಟನ್ ಡಿ ಕಾಕ್

IPL 2025: ಬಿರುಸಿನ ಬ್ಯಾಟಿಂಗ್‌ ನಡೆಸಿದ ಕ್ವಿಂಟನ್ ಡಿ ಕಾಕ್ 97 ರನ್‌ ಬಾರಿಸುವ ಮೂಲಕ ಚೇಸಿಂಗ್‌ ವೇಳೆ ಕೆಕೆಆರ್‌ ಪರ ಅತ್ಯಧಿಕ ರನ್‌ ಬಾರಿಸಿದ ಮೊದಲ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಕನ್ನಡಿಗ ಮನೀಷ್‌ ಪಾಂಡೆ(94) ಹೆಸರಿನಲ್ಲಿತ್ತು. ಇದೀಗ ಅವರ ದಾಖಲೆ ಪತನಗೊಂಡಿದೆ.

ಗುವಾಹಟಿ: ರಾಜಸ್ಥಾನ್‌ ರಾಯಲ್ಸ್‌(KKR vs RR) ವಿರುದ್ಧ ಬುಧವಾರ ನಡೆದಿದ್ದ ಐಪಿಎಲ್‌(IPL 2025) ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಕ್ವಿಂಟನ್ ಡಿ ಕಾಕ್(Quinton de Kock) ಅಜೇಯ 97 ರನ್‌ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಜತೆಗೆ ಈ ಇನಿಂಗ್ಸ್‌ ಮೂಲಕ ದಾಖಲೆಯೊಂದನ್ನು ಕೂಡ ನಿರ್ಮಿಸಿದ್ದಾರೆ. ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ಸ್‌ ತಂಡ 8 ವಿಕೆಟ್‌ಗಳ ಜಯದೊಂದಿಗೆ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು.

ಬಿರುಸಿನ ಬ್ಯಾಟಿಂಗ್‌ ನಡೆಸಿದ ಕ್ವಿಂಟನ್ ಡಿ ಕಾಕ್ 97 ರನ್‌ ಬಾರಿಸುವ ಮೂಲಕ ಚೇಸಿಂಗ್‌ ವೇಳೆ ಕೆಕೆಆರ್‌ ಪರ ಅತ್ಯಧಿಕ ರನ್‌ ಬಾರಿಸಿದ ಮೊದಲ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಕನ್ನಡಿಗ ಮನೀಷ್‌ ಪಾಂಡೆ(94) ಹೆಸರಿನಲ್ಲಿತ್ತು. ಇದೀಗ ಅವರ ದಾಖಲೆ ಪತನಗೊಂಡಿದೆ.

ಚೇಸಿಂಗ್‌ ವೇಳೆ ಕೆಕೆಆರ್‌ ಪರ ಅತ್ಯಧಿಕ ರನ್‌ ಬಾರಿಸಿದವರ ಪಟ್ಟಿ

ಕ್ವಿಂಟನ್‌ ಡಿ ಕಾಕ್‌-97*

ಮನೀಷ್‌ ಪಾಂಡೆ- 94

ಕ್ರಿಸ್‌ ಲೀನ್‌-93*

ಮಣಿಂದರ್ ಬಿಸ್ಲಾ- 92

ಗೌತಮ್‌ ಗಂಭೀರ್‌-90*

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್‌ 9 ವಿಕೆಟಿಗೆ 151 ರನ್ನುಗಳ ಸಾಮಾನ್ಯ ಮೊತ್ತ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್‌ ಕೇವಲ 2 ವಿಕೆಟ್‌ ನಷ್ಟಕ್ಕೆ 17.3 ಓವರ್‌ಗಳಲ್ಲಿ 153 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.



ರಾಜಸ್ಥಾನ್‌ ಪರ ಸಂಜು ಸ್ಯಾಮ್ಸನ್‌ (13) ಸಿಡಿಯುವ ಸೂಚನೆ ನೀಡಿದೂ ಕ್ರೀಸ್‌ ಆಕ್ರಮಿಸಲು ವಿಫ‌ಲರಾದರು. ಯಶಸ್ವಿ ಜೈಸ್ವಾಲ್‌ 29 ರನ್‌ ಮಾಡಿ ವಾಪಸಾದರು (24 ಎಸೆತ, 2 ಬೌಂಡರಿ, 2 ಸಿಕ್ಸರ್‌). ನಾಯಕ ರಿಯಾನ್‌ ಪರಾಗ್‌ ಆಟ 25 ರನ್ನಿಗೆ ಸೀಮಿತಗೊಂಡಿತು. ನಿತೀಶ್‌ ರಾಣಾ (8), ವನಿಂದು ಹಸರಂಗ (4) ಅಗ್ಗಕ್ಕೆ ವಿಕೆಟ್‌ ಒಪ್ಪಿಸಿದರು. 33 ರನ್‌ ಮಾಡಿದ ಧ್ರುವ ಜುರೆಲ್‌ ರಾಜಸ್ಥಾನ್‌ ಸರದಿಯ ಟಾಪ್‌ ಸ್ಕೋರರ್‌.

ಇದನ್ನೂ ಓದಿ IPL 2025: ರೋಹಿತ್‌ ಶರ್ಮ ಹಿಂದಿಕ್ಕಿ ಅನಗತ್ಯ ದಾಖಲೆ ಬರೆದ ಮ್ಯಾಕ್ಸ್‌ವೆಲ್‌

ಕೆಕೆಆರ್‌ ಪರ ವೈಭವ್‌ ಅರೋರ (33ಕ್ಕೆ 2) ಮತ್ತು ಹರ್ಷಿತ್‌ ರಾಣಾ (36ಕ್ಕೆ 2) ಕೂಡ ಉತ್ತಮ ದಾಳಿ ಸಂಘಟಿಸಿದರು. ಸ್ಪಿನ್ನರ್‌ಗಳಾದ ವರುಣ್‌ ಚಕ್ರವರ್ತಿ (17ಕ್ಕೆ 2), ಮೊಯಿನ್‌ ಅಲಿ (23ಕ್ಕೆ 2) ವಿಕೆಟ್‌ ಕಿತ್ತರು. ಚೇಸಿಂಗ್‌ ವೇಳೆ ಡಿ ಕಾಕ್‌ ಬರೋಬ್ಬರಿ 6 ಸಿಕ್ಸರ್‌ ಮತ್ತು 8 ಬೌಂಡರಿ ಸಿಡಿಸಿ ಅಜೇಯ 97 ರನ್‌ ಬಾರಿಸಿದರು. ಅವರ ಈ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.