ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ತುಂಬಾ ನಿರಾಶಾದಾಯಕ'; ಸೋಲಿಗೆ ಬೇಸರ ವ್ಯಕ್ತಪಡಿಸಿದ ಶುಭಮನ್‌ ಗಿಲ್‌

England vs India 2nd ODI: ಸರಣಿಯ ಬಗ್ಗೆ ಹೇಳುವುದಾದರೆ, ಸದ್ಯ 1-1 ಸಮಬಲ ಸಾಧಿಸಿವೆ. ಮೊದಲ ಏಕದಿನ ಪಂದ್ಯದಲ್ಲಿ ಭಾರತ ಗೆಲುವು ಕಂಡಿತ್ತು. ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಮೇಲುಗೈ ಸಾಧಿಸಿತು. ಮುಂದಿನ ಪಂದ್ಯಕ್ಕಾಗಿ, ಜುಲೈ 19 ರಂದು ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿವೆ. ಇದು ಸರಣಿ ನಿರ್ಣಾಯಕ ಪಂದ್ಯವಾಗಿದೆ. ಎರಡೂ ತಂಡಗಳು ಘರ್ಷಣೆಯಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವ ಭರವಸೆಯನ್ನು ಹೊಂದಿವೆ.

India vs England

ಕಾರ್ಡಿಫ್‌, ಜು.17: ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲಿಗೆ ಶರಣಾಯಿತು. ಗುರುವಾರ ತಡರಾತ್ರಿ ಕಾರ್ಡಿಫ್‌ನ ಸೋಫಿಯಾ ಗಾರ್ಡನ್ಸ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ 4 ವಿಕೆಟ್‌ ಅಂತರದ ಸೋಲು ಕಂಡಿತ್ತು. ಈ ಸೋಲು 'ತುಂಬಾ ನಿರಾಶಾದಾಯಕ' ಎಂದು ನಾಯಕ ಶುಭಮನ್‌ ಗಿಲ್‌ ಹೇಳಿದರು.

ಪಂದ್ಯದ ಬಳಿಕ ಮಾತನಾಡಿದ ಗಿಲ್‌, "ನಿಜ ಹೇಳಬೇಕೆಂದರೆ, ಇದೊಂದು ತುಂಬಾ ನಿರಾಶಾದಾಯಕ ಪ್ರದರ್ಶನ. 25 ಓವರ್‌ಗಳ ನಂತರ 300, 310 ಉತ್ತಮ ಮೊತ್ತವಾಗುತ್ತದೆ ಎಂದು ನಾವು ಭಾವಿಸಿದ್ದೆವು. ನಾವು ಉತ್ತಮ ಸ್ಥಾನದಲ್ಲಿದ್ದೆವು. ಆದರೆ, ಮಧ್ಯಮ ಓವರ್‌ಗಳಲ್ಲಿ ನಾವು ಹಲವಾರು ವಿಕೆಟ್‌ಗಳನ್ನು ಕಳೆದುಕೊಂಡೆವು. ನನ್ನ ಪ್ರಕಾರ, ನಮ್ಮ ಕೆಳ ಮಧ್ಯಮ ಕ್ರಮಾಂಕದಿಂದ ಇನಷ್ಟು ಉತ್ತಮ ಪ್ರದರ್ಶನ ಹೊರಬರಬೇಕಿದೆ. ಈ ಪಂದ್ಯದಲ್ಲಿ ನಮಗೆ ದೊರೆತ ಆರಂಭವನ್ನು ನಾವು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಗಿಲ್ ಹೇಳಿದರು.

ಸರಣಿಯ ಬಗ್ಗೆ ಹೇಳುವುದಾದರೆ, ಸದ್ಯ 1-1 ಸಮಬಲ ಸಾಧಿಸಿವೆ. ಮೊದಲ ಏಕದಿನ ಪಂದ್ಯದಲ್ಲಿ ಭಾರತ ಗೆಲುವು ಕಂಡಿತ್ತು. ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಮೇಲುಗೈ ಸಾಧಿಸಿತು. ಮುಂದಿನ ಪಂದ್ಯಕ್ಕಾಗಿ, ಜುಲೈ 19 ರಂದು ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿವೆ. ಇದು ಸರಣಿ ನಿರ್ಣಾಯಕ ಪಂದ್ಯವಾಗಿದೆ. ಎರಡೂ ತಂಡಗಳು ಘರ್ಷಣೆಯಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವ ಭರವಸೆಯನ್ನು ಹೊಂದಿವೆ.

IND vs ENG: ಭಾರತದ ಎದುರು ಏಕಾಂಗಿ ಹೋರಾಟ ನಡೆಸಿ ಇಂಗ್ಲೆಂಡ್‌ಗೆ ಜಯ ತಂದುಕೊಟ್ಟು ಜೋ ರೂಟ್‌!

ಎರಡನೇ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌ ಬೌಲಿಂಗ್‌ ಆಯ್ದುಕೊಂಡಿತು. ಬ್ಯಾಟಿಂಗ್‌ ಆಹ್ವಾನ ಪಡೆದ ಭಾರತ, ಉತ್ತಮ ಆರಂಭ ಪಡೆದರೂ ಬೃಹತ್ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. 44 ಓವರ್‌ಗಳಲ್ಲಿ 233 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ವಿರಾಟ್ (65) ಮತ್ತು ಶ್ರೇಯಸ್ ಅಯ್ಯರ್ (66) ಅವರು ಆಸರೆಯಾದರು. ಮಧ್ಯಮ ಕ್ರಮಾಂಕದಲ್ಲಿ ಭಾರತ ತಂಡವು 26 ಎಸೆತಗಳ ಅಂತರದಲ್ಲಿ ಕೇವಲ 15 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿದ್ದರಿಂದ ಸ್ಕೋರ್ ಹೆಚ್ಚಾಗಲಿಲ್ಲ.

ಬಳಿಕ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌, ಜೋ ರೂಟ್‌ ಅವರ ಅಜೇಯ 99 ರನ್‌ ಏಕಾಂಗಿ ಹೋರಾಟದ ನೆರವಿನಿಂದ ತಂಡವು 6 ವಿಕೆಟ್‌ಗೆ 235 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು. ಕೆಲ ಕ್ರಮಾಂಕದಲ್ಲಿ ವಿಲ್‌ ಜಾಕ್ಸ್‌ 30 ರನ್‌ ಗಳಿಸಿದರೆ, ವೇಗಿ ಗಸ್ ಅಟ್ಕಿನ್ಸನ್ ಅಜೇಯ 23 ರನ್‌ ಗಳಿಸಿದರು.