ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rashid Khan: ವೈಮಾನಿಕ ದಾಳಿ ಖಂಡಿಸಿ ಪಾಕ್‌ ಕ್ರಿಕೆಟ್‌ ಲೀಗ್‌ ಹೆಸರನ್ನೇ ಡಿಲೀಟ್‌ ಮಾಡಿದ ರಶೀದ್‌ ಖಾನ್‌

ಪಾಕ್‌ ದಾಳಿಯನ್ನು ಖಂಡಿಸಿ ಟ್ವೀಟ್‌ ಮಾಡಿದ್ದ ರಶೀದ್‌ ಖಾನ್‌, "ಅಫ್ಘಾನಿಸ್ತಾನದ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ನಾಗರಿಕರ ಸಾವು ನನಗೆ ತುಂಬಾ ದುಃಖ ತಂದಿದೆ. ವಿಶ್ವ ವೇದಿಕೆಯಲ್ಲಿ ತಮ್ಮ ರಾಷ್ಟ್ರವನ್ನು ಪ್ರತಿನಿಧಿಸುವ ಕನಸು ಕಂಡಿದ್ದ ಮಹಿಳೆಯರು, ಮಕ್ಕಳು ಮತ್ತು ಮಹತ್ವಾಕಾಂಕ್ಷಿ ಯುವ ಕ್ರಿಕೆಟಿಗರ ಪ್ರಾಣವನ್ನು ಬಲಿ ಪಡೆದ ದುರಂತ ಇದು" ಎಂದು ರಶೀದ್ ಎಕ್ಸ್‌ನಲ್ಲಿ ಬರೆದಿದ್ದರು.

ಕಾಬುಲ್‌: ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ ಅಫ್ಗಾನಿಸ್ತಾನದ ಮೂವರು ಸ್ಥಳೀಯ ಕ್ರಿಕೆಟಿಗರು ಸಾವೀಗಿಡಾದ ಬಳಿಕ ಅಫ್ಗಾನಿಸ್ತಾನ ಕ್ರಿಕೆಟ್ ತಂಡದ ನಾಯಕ ರಶೀದ್‌ ಖಾನ್‌(Rashid Khan) ಪಾಕ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೇಡಿತನದ ದಾಳಿ ಎಂದು ಕಿಡಿಕಾರಿದ್ದರು. ಇದೀಗ ತಮ್ಮ ಎಕ್ಸ್ ಬಯೋದಿಂದ ತಮ್ಮ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಫ್ರಾಂಚೈಸಿ ಲಾಹೋರ್ ಖಲಂದರ್ಸ್‌(Lahore Qalandars) ಹೆಸರನ್ನು ತೆಗೆದುಹಾಕಿದ್ದಾರೆ.

ರಶೀದ್ ಆನ್‌, ಈ ಹಿಂದೆ ತಮ್ಮ X ಬಯೋದಲ್ಲಿ ತಾವು ಪ್ರತಿನಿಧಿಸುವ ಎಲ್ಲಾ ಪ್ರಮುಖ ತಂಡಗಳನ್ನು ಪಟ್ಟಿ ಮಾಡಿದ್ದರು. ಅಫ್ಘಾನಿಸ್ತಾನ ರಾಷ್ಟ್ರೀಯ ತಂಡ, ಗುಜರಾತ್ ಟೈಟಾನ್ಸ್ (ಐಪಿಎಲ್), ಅಡಿಲೇಡ್ ಸ್ಟ್ರೈಕರ್ಸ್ (ಬಿಬಿಎಲ್), ಮತ್ತು ಲಾಹೋರ್ ಖಲಂದರ್ಸ್ (ಪಿಎಸ್‌ಎಲ್) ಹೆಸರನ್ನು ಹಾಕಿದ್ದರು. ಇದೀಗ ಅವರು ಲಾಹೋರ್ ಖಲಂದರ್ಸ್ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿದ್ದಾರೆ. ರಾಷ್ಟ್ರೀಯ ತಂಡದ ಜತೆಗೆ ಐಪಿಎಲ್ ಮತ್ತು ಬಿಬಿಎಲ್ ತಂಡಗಳನ್ನು ಮಾತ್ರ ಉಳಿಸಿದ್ದಾರೆ. ಒಂದೊಮ್ಮೆ ಅವರು ಪಿಎಸ್‌ಎಲ್ ಟೂರ್ನಿಗೆ ಗುಡ್‌ಬೈ ಹೇಳಿದರೂ ಅಚ್ಚರಿಯಿಲ್ಲ.

ಪಾಕ್‌ ದಾಳಿಯನ್ನು ಖಂಡಿಸಿ ಟ್ವೀಟ್‌ ಮಾಡಿದ್ದ ರಶೀದ್‌ ಖಾನ್‌, "ಅಫ್ಘಾನಿಸ್ತಾನದ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ನಾಗರಿಕರ ಸಾವು ನನಗೆ ತುಂಬಾ ದುಃಖ ತಂದಿದೆ. ವಿಶ್ವ ವೇದಿಕೆಯಲ್ಲಿ ತಮ್ಮ ರಾಷ್ಟ್ರವನ್ನು ಪ್ರತಿನಿಧಿಸುವ ಕನಸು ಕಂಡಿದ್ದ ಮಹಿಳೆಯರು, ಮಕ್ಕಳು ಮತ್ತು ಮಹತ್ವಾಕಾಂಕ್ಷಿ ಯುವ ಕ್ರಿಕೆಟಿಗರ ಪ್ರಾಣವನ್ನು ಬಲಿ ಪಡೆದ ದುರಂತ ಇದು" ಎಂದು ರಶೀದ್ ಎಕ್ಸ್‌ನಲ್ಲಿ ಬರೆದಿದ್ದರು.

ಇದನ್ನೂ ಓದಿ Pakistan-Afghanistan Talks: ಪಾಕಿಸ್ತಾನ-ಅಫ್ಘಾನಿಸ್ತಾನದ ಶಾಂತಿ ಮಾತುಕತೆ ಯಶಸ್ವಿ

"ಈ ಅನ್ಯಾಯದ ಮತ್ತು ಕಾನೂನುಬಾಹಿರ ಕ್ರಮಗಳು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯನ್ನು ಪ್ರತಿನಿಧಿಸುತ್ತವೆ ಮತ್ತು ಅವುಗಳನ್ನು ಗಮನಿಸದೆ ಬಿಡಬಾರದು. ಅಮೂಲ್ಯವಾದ ಮುಗ್ಧ ಆತ್ಮಗಳು ಕಳೆದುಕೊಂಡ ಹಿನ್ನೆಲೆಯಲ್ಲಿ, ಪಾಕಿಸ್ತಾನ ವಿರುದ್ಧದ ಮುಂಬರುವ ಪಂದ್ಯಗಳಿಂದ ಹಿಂದೆ ಸರಿಯುವ ಎಸಿಬಿ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಈ ಕಷ್ಟದ ಸಮಯದಲ್ಲಿ ನಾನು ನಮ್ಮ ಜನರೊಂದಿಗೆ ನಿಲ್ಲುತ್ತೇನೆ. ನಮ್ಮ ರಾಷ್ಟ್ರೀಯ ಘನತೆಯು ಎಲ್ಲಕ್ಕಿಂತ ಮೊದಲು ಮುಖ್ಯವಾಗಬೇಕು" ಎಂದು ಟ್ವೀಟ್‌ ಮಾಡಿದ್ದರು.