ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

RR vs GT: ರಶೀದ್‌ ಖಾನ್‌ ಸ್ಪಿನ್‌ ಮೋಡಿಗೆ ಜಡೇಜಾ, ನರೈನ್‌ ದಾಖಲೆ ಪತನ

Rashid Khan: ಐಪಿಎಲ್ ಇತಿಹಾಸದಲ್ಲಿ ಸ್ಪಿನ್ನರ್ ಆಗಿ ಅತಿ ಹೆಚ್ಚು ಮೂರು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಸುನಿಲ್ ನರೈನ್, ರವೀಂದ್ರ ಜಡೇಜಾ ಮತ್ತು ಇತರ ಹಲವರನ್ನು ಹಿಂದಿಕ್ಕಿದರು. ಐಪಿಎಲ್‌ನಲ್ಲಿ ರಶೀದ್ ಅವರ 18 ನೇ ಮೂರು ವಿಕೆಟ್ ಗೊಂಚಲು ಇದಾಗಿದೆ.

Rashid Khan

ಜೈಪುರ, ಮೇ 10: ಇಂಡಿಯನ್ ಪ್ರೀಮಿಯರ್ ಲೀಗ್‌ನ(IPL 2026) 52ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು(RR vs GT) ರಾಜಸ್ಥಾನ ರಾಯಲ್ಸ್ ವಿರುದ್ಧ ಅಸಾಧಾರಣ ಪ್ರದರ್ಶನ ನೀಡಿತು. ಮೇ 9 ರಂದು ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 77 ರನ್‌ಗಳ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿ 4 ವಿಕೆಟ್‌ ಕಿತ್ತ ಅಫ್ಘಾನಿಸ್ತಾನದ ಸ್ಪಿನ್ನರ್‌ ರಶೀದ್‌ ಖಾನ್‌(Rashid Khan) ಈ ಸಾಧನೆಯೊಂದಿಗೆ ದಾಖಲೆಯೊಂದನ್ನು ಬರೆದಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಸ್ಪಿನ್ನರ್ ಆಗಿ ಅತಿ ಹೆಚ್ಚು ಮೂರು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಸುನಿಲ್ ನರೈನ್, ರವೀಂದ್ರ ಜಡೇಜಾ ಮತ್ತು ಇತರ ಹಲವರನ್ನು ಹಿಂದಿಕ್ಕಿದರು. ಐಪಿಎಲ್‌ನಲ್ಲಿ ರಶೀದ್ ಅವರ 18 ನೇ ಮೂರು ವಿಕೆಟ್ ಗೊಂಚಲು ಇದಾಗಿದೆ. ದಾಖಲೆ ಯುಜ್ವೇಂದ್ರ ಚಾಹಲ್ ಹೆಸರಿನಲ್ಲಿದೆ. ಅವರು 23 ಬಾರಿ ಈ ಸಾಧನೆ ಮಾಡಿದ್ದಾರೆ.

ಐಪಿಎಲ್‌ನಲ್ಲಿ ಸ್ಪಿನ್ನರ್‌ಗಳಲ್ಲಿ ಅತಿ ಹೆಚ್ಚು 3 ವಿಕೆಟ್ ಗೊಂಚಲುಗಳು

23 - ಯುಜ್ವೇಂದ್ರ ಚಾಹಲ್

18 - ರಶೀದ್ ಖಾನ್

17 - ಸುನಿಲ್ ನರೈನ್

17 - ಅಮಿತ್ ಮಿಶ್ರಾ

17 - ರವೀಂದ್ರ ಜಡೇಜಾ

ಇಂದಿನ ಆರ್‌ಸಿಬಿ-ಮುಂಬೈ ಪಂದ್ಯ ನಡೆಯುವುದೇ ಅನುಮಾನ; ಭಾರೀ ಮಳೆ ಭೀತಿ

ಪಂದ್ಯದಲ್ಲಿ ಟಾಸ್‌ ಗೆದ್ದ ರಾಜ್ಥಾನ್‌ ತಂಡವು ಫೀಲ್ಡಿಂಗ್‌ ಆಯ್ದುಕೊಂಡಿತು. ಆದರೆ ಆಯ್ಕೆಗೆ ತಕ್ಕ ಪ್ರದರ್ಶನ ತೋರುವಲ್ಲಿ ವಿಫಲಾಯಿತು. ಬ್ಯಾಟಿಂಗ್‌ ಆಹ್ವಾನ ಪಡೆದ ಗುಜರಾತ್‌ ತಂಡಕ್ಕೆ ನಾಯಕ ಶುಭಮನ್‌ ಗಿಲ್‌ (84) ಮತ್ತು ಸಾಯಿ ಸುದರ್ಶನ್‌ (55) ಅರ್ಧಶತಕ ಸಿಡಿಸುವ ಮೂಲಕ ಉತ್ತಮ ಆರಂಭ ಒದಗಿಸಿದರು. ಅಂತಿಮವಾಗಿ ತಂಡವು 4 ವಿಕೆಟ್‌ಗೆ 229 ರನ್‌ಗಳ ಭಾರಿ ಮೊತ್ತ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡವು ರಶೀದ್‌ (33ಕ್ಕೆ 4), ಜೇಸನ್‌ ಹೋಲ್ಡರ್‌ (13ಕ್ಕೆ 3) ಮತ್ತು ಕಗಿಸೊ ರಬಾಡ (33ಕ್ಕೆ 2) ದಾಳಿಗೆ ತತ್ತರಿಸಿ 16.3 ಓವರ್‌ಗಳಲ್ಲಿ 152 ರನ್‌ಗೆ ಸರ್ವಪತನ ಕಂಡಿತು.

ಸಂಕ್ಷಿಪ್ತ ಸ್ಕೋರು

ಗುಜರಾತ್ ಟೈಟನ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 229 (ಸಾಯಿ ಸುದರ್ಶನ್ 55, ಶುಭಮನ್ ಗಿಲ್ 84, ವಾಷಿಂಗ್ಟನ್ ಸುಂದರ್ ಔಟಾಗದೇ 37; ಬ್ರಿಜೇಶ್‌ ಶರ್ಮಾ 47ಕ್ಕೆ2). ರಾಜಸ್ಥಾನ ರಾಯಲ್ಸ್: 16.3 ಓವರ್‌ಗಳಲ್ಲಿ 152 (ವೈಭವ್‌ ಸೂರ್ಯವಂಶಿ 36, ಧ್ರುವ್‌ ಜುರೇಲ್‌ 24, ರವೀಂದ್ರ ಜಡೇಜ 38; ರಶೀದ್‌ ಖಾನ್‌ 33ಕ್ಕೆ4, ಜೇಸನ್‌ ಹೋಲ್ಡರ್‌ 12ಕ್ಕೆ3, ಕಗಿಸೊ ರಬಾಡ 33ಕ್ಕೆ2).