ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗಾಲೆ ಟೆಸ್ಟ್‌ನಲ್ಲಿ ಮಹತ್ವದ ದಾಖಲೆ ಬರೆಯಲು ಸಜ್ಜಾದ ರವೀಂದ್ರ ಜಡೇಜಾ

Ravindra Jadeja: ಟೆಸ್ಟ್ ಕ್ರಿಕೆಟ್‌ನಲ್ಲಿ 350 ವಿಕೆಟ್‌ಗಳನ್ನು ಗಳಿಸಿದರೆ, ಜಡೇಜಾ ಈ ಸಾಧನೆ ಮಾಡಿದ ಎರಡನೇ ಭಾರತೀಯ ಕ್ರಿಕೆಟಿಗನಾಗಲಿದ್ದಾರೆ. ಈ ಸಾಧನೆಯನ್ನು ಕಪಿಲ್ ದೇವ್ ಮಾತ್ರ ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಆಲ್‌ರೌಂಡ್ ಡಬಲ್ ಸಾಧನೆ ಮಾಡಿದ ಮೊದಲ ಭಾರತೀಯ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಜಡೇಜಾ ಪಾತ್ರರಾಗಲಿದ್ದಾರೆ.

Ravindra Jadeja

ಗಾಲೆ, ಆ.15: ಶನಿವಾರ ಆರಂಭಗೊಂಡ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಮ್‌ ಇಂಡಿಯಾದ ಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾ ಮಹತ್ವದ ಮೈಲುಗಲ್ಲೊಂದನ್ನು ತಲುಪುವ ಸನಿಹದಲ್ಲಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 350 ರನ್ ಗಳಿಸಲು ಅವರಿಗೆ ಕೇವಲ ಎರಡು ವಿಕೆಟ್‌ ಅಗತ್ಯವಿದೆ.

ಜಡೇಜಾ 89 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು, 25.12 ಸರಾಸರಿಯಲ್ಲಿ 348 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರ ಬೌಲಿಂಗ್‌ನಲ್ಲಿ 15 ಐದು ವಿಕೆಟ್ ಗೊಂಚಲು ಸೇರಿದೆ. ಬ್ಯಾಟಿಂಗ್‌ನಲ್ಲಿ, ಅವರು 4,095 ಟೆಸ್ಟ್ ರನ್‌ಗಳನ್ನು ಗಳಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ 350 ವಿಕೆಟ್‌ಗಳನ್ನು ಗಳಿಸಿದರೆ, ಜಡೇಜಾ ಈ ಸಾಧನೆ ಮಾಡಿದ ಎರಡನೇ ಭಾರತೀಯ ಕ್ರಿಕೆಟಿಗನಾಗಲಿದ್ದಾರೆ. ಈ ಸಾಧನೆಯನ್ನು ಕಪಿಲ್ ದೇವ್ ಮಾತ್ರ ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಆಲ್‌ರೌಂಡ್ ಡಬಲ್ ಸಾಧನೆ ಮಾಡಿದ ಮೊದಲ ಭಾರತೀಯ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಜಡೇಜಾ ಪಾತ್ರರಾಗಲಿದ್ದಾರೆ.

2036ರ ಒಲಿಂಪಿಕ್ಸ್; ದೇಶಾದ್ಯಂತ ಪ್ರತಿಭಾನ್ವೇಷಣೆ ಘೋಷಿಸಿದ ಪ್ರಧಾನಿ ಮೋದಿ

ಜಡೇಜಾ 4,000 ಟೆಸ್ಟ್ ರನ್‌ಗಳನ್ನು ಮತ್ತು 300 ಕ್ಕೂ ಹೆಚ್ಚು ವಿಕೆಟ್‌ ಪೂರ್ತಿಗೊಳಿಸಿದ ವಿಶ್ವದ ನಾಲ್ಕನೇ ಆಟಗಾರ ಎನಿಸಿದರು. ಆ ಗುಂಪಿನಲ್ಲಿರುವ ಇತರರು ಕಪಿಲ್ ದೇವ್, ಇಂಗ್ಲೆಂಡ್‌ನ ಇಯಾನ್ ಬೋಥಮ್ ಮತ್ತು ನ್ಯೂಜಿಲೆಂಡ್‌ನ ಡೇನಿಯಲ್ ವೆಟ್ಟೋರಿ. ಕಪಿಲ್ ದೇವ್, 131 ಪಂದ್ಯಗಳಲ್ಲಿ 5,248 ರನ್‌ಗಳು ಮತ್ತು 434 ವಿಕೆಟ್‌ಗಳೊಂದಿಗೆ ತಮ್ಮ ಟೆಸ್ಟ್ ವೃತ್ತಿಜೀವನವನ್ನು ಕೊನೆಗೊಳಿಸಿದರು.

ಜಡೇಜಾ ಅವರ ಶ್ರೀಲಂಕಾ ವಿರುದ್ಧದ ಟೆಸ್ಟ್ ದಾಖಲೆಯು ಉತ್ತಮವಾಗಿದೆ. ಲಂಕಾ ವಿರುದ್ಧದ ಏಳು ಟೆಸ್ಟ್‌ಗಳು ಮತ್ತು ಒಂಬತ್ತು ಇನ್ನಿಂಗ್ಸ್‌ಗಳಲ್ಲಿ, ಅವರು 65.20 ಸರಾಸರಿಯಲ್ಲಿ 326 ರನ್‌ಗಳನ್ನು ಗಳಿಸಿದ್ದಾರೆ, ಒಂದು ಶತಕ ಮತ್ತು ಒಂದು ಅರ್ಧಶತಕ ಸೇರಿದೆ. ಅಜೇಯ 175 ರನ್‌ಗಳ ಅತ್ಯುತ್ತಮ ಸ್ಕೋರ್ ಸೇರಿದೆ. ಬೌಲಿಂಗ್ ಅಂಕಿಅಂಶಗಳು ಅಷ್ಟೇ ಪ್ರಬಲವಾಗಿವೆ. 23.72 ಸರಾಸರಿಯಲ್ಲಿ 33 ವಿಕೆಟ್‌ಗಳು, ಎರಡು ಐದು ವಿಕೆಟ್ ಗೊಂಚಲುಗಳು ಮತ್ತು 5/41 ರ ಅತ್ಯುತ್ತಮ ಅಂಕಿಅಂಶಗಳು.

ಬ್ಯಾಟಿಂಗ್‌ ಆಯ್ದುಕೊಂಡ ಭಾರತ

ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ತಂಡ ಬ್ಯಾಟಿಂಗ್‌ ಆಯ್ದಕೊಂಡು ಉತ್ತಮ ರನ್‌ ಕಲೆಹಾಕುತ್ತಿದೆ. ಊಟದ ವಿರಾಮಕ್ಕೆ ಒಂದು ವಿಕೆಟ್‌ ನಷ್ಟಕ್ಕೆ 101 ರನ್‌ ಗಳಿಸಿದೆ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ ಸಂವಹನ ಕೊರತೆಯಿಂದ 32 ರನ್‌ ಗಳಿಸಿದ್ದ ವೇಳೆ ರನೌಟ್‌ ಆಗಿ ವಿಕೆಟ್‌ ಕಳೆದುಕೊಂಡರು.