ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ (ಏಪ್ರಿಲ್ 27) ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್‌ಗಳ ವಿರುದ್ಧ ಆರ್‌ಸಿಬಿ (RCB Vs DC) ಬೌಲರ್‌ಗಳು ಮಾರಕ ಬೌಲಿಂಗ್ ದಾಳಿ ನಡೆಸಿ ಭರ್ಜರಿ ಜಯವನ್ನು ತಂದು ಕೊಟ್ಟಿದ್ದಾರೆ. ಪವರ್ ಪ್ಲೇನಲ್ಲೇ ಆರು ವಿಕೆಟ್ ಕೀಳುವ ಮೂಲಕ ಡೆಲ್ಲಿಗೆ ಆರಂಭಿಕ ಆಘಾತ ನೀಡಿದ್ದರು. ಗೆಲುವಿನ ಕುರಿತು ಮಾತನಾಡಿದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ (Rajat Patidar) ಭುವನೇಶ್ವರ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ಅವರ ಪ್ರಾಬಲ್ಯದ ಪ್ರದರ್ಶನಕ್ಕಾಗಿ ಶ್ಲಾಘಿಸಿದರು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ಕೇವಲ 75 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ ಕೇವಲ 1 ವಿಕೆಟ್ ಕಳೆದುಕೊಂಡು 6.3 ಓವರ್ಗಳಲ್ಲಿ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿತು. ಪಂದ್ಯದ ನಂತರ ಮಾತನಾಡಿದ ಪಾಟಿದಾರ್, ಪವರ್‌ಪ್ಲೇನಲ್ಲಿ ಬೌಲಿಂಗ್ ಮಾಡಿದ ರೀತಿಗೆ ಎಲ್ಲಾ ಕ್ರೆಡಿಟ್ ಬೌಲರ್‌ಗಳಾದ ಹ್ಯಾಜಲ್‌ವುಡ್ ಮತ್ತು ಭುವಿಗೆ ಸಲ್ಲುತ್ತದೆ. ಒಳ್ಳೆಯ ವಿಷಯವೆಂದರೆ ನಮಗೆ ಆರಂಭಿಕ ವಿಕೆಟ್‌ಗಳು ಸಿಕ್ಕವು ಎಂದು ಹೇಳಿದರು.
ಮೊದಲು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್‌ಗಳು ಮೊದಲ ಓವರ್‌ನ ಎರಡನೇ ಎಸೆತದಿಂದಲೇ ವಿಕೆಟ್‌ಗಳು ಬೀಳಲಾರಂಭಿಸಿದವು. ಭುವನೇಶ್ವರ್ ಕುಮಾರ್ ಎಸೆದ ಎರಡನೇ ಎಸೆತದಲ್ಲಿ ಸಾಹಿಲ್ ಪರಾಖ್ 0 ರನ್ ಗಳಿಸಿ ಔಟಾದರು. ನಂತರ, ಮುಂದಿನ ಓವರ್‌ನಲ್ಲಿ ಹೇಜಲ್‌ವುಡ್ ಕೆಎಲ್ ರಾಹುಲ್ ಅವರನ್ನು 1 ರನ್‌ಗೆ ಔಟ್ ಮಾಡಿದರು. ಸಮೀರ್ ರಿಜ್ವಿ ಮುಂದಿನ ಎಸೆತದಲ್ಲಿಯೇ ಶೂನ್ಯಕ್ಕೆ ಔಟ್ ಆದರು. ನಂತರ ಭುವನೇಶ್ವರ್ ಕುಮಾರ್ ಒಂದೇ ಓವರ್‌ನಲ್ಲಿ ಟ್ರಿಸ್ಟಾನ್ ಸ್ಟಬ್ಸ್ ಮತ್ತು ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಅವರನ್ನು ಔಟ್ ಮಾಡಿದರು.
RCB vs CSK: ಆರ್‌ಸಿಬಿ-ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ಆಡುವ ಬಳಗ
ಸ್ವಲ್ಪ ಸಮಯದೊಳಗೆ ಡೆಲ್ಲಿ ಕೇವಲ 8 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತು. ಆದಾಗ್ಯೂ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಅಭಿಷೇಕ್ ಪೊರೆಲ್ (30) ಮತ್ತು ಡೇವಿಡ್ ಮಿಲ್ಲರ್ (18) ಎರಡಂಕಿ ಮೊತ್ತ ಕಲೆಹಾಕುವ ಮೂಲಕ ತಂಡವನ್ನು 75 ರನ್‌ಗಳಿಗೆ ಕೊಂಡೊಯ್ದರು.
ಬಳಿಕ ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಕೇವಲ 39 ರನ್‌ಗಳಿಗೆ ಗುರಿ ಬೆನ್ನಟ್ಟಿತು. ಗೆಲುವಿನೊಂದಿಗೆ ಆರ್‌ಸಿಬಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಉಳಿದಿದ್ದರೂ, ನೆಟ್ ರನ್ ರೇಟ್ನಲ್ಲಿ ಭಾರಿ ಏರಿಕೆ ಕಂಡಿದೆ. ಆರ್‌ಸಿಬಿ ಆಡಿರುವ ಎಂಟು ಪಂದ್ಯಗಳಿಂದ ಆರು ಗೆಲುವುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.