ಬೆಂಗಳೂರು: ಐಪಿಎಲ್ ಹಾಲಿ ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ತಂಡ, ಮುಂಬರುವ ಐಪಿಎಲ್ 2026(IPL 2026) ರ ಸೀಸನ್‌ಗಾಗಿ ಎಡಗೈ ವೇಗಿ ಯಶ್ ದಯಾಳ್(Yash Dayal) ಅವರನ್ನು ತಂಡದಲ್ಲಿ ಉಳಿಸಿಕೊಂಡ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅತ್ಯಾಚಾರ ಆರೋಪದಲ್ಲಿ ಎರಡು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವುವಾಗ ಯಶ್ ದಯಾಳ್ ಅವರನ್ನು ತಮ್ಮ ತಂಡದಲ್ಲಿ ಉಳಿಸಿಕೊಂಡಿರುವುದಕ್ಕೆ ಅಭಿಮಾನಿಗಳಿಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ.
ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ ಆರು ಆಟಗಾರರನ್ನು ಮಾತ್ರ ಬಿಡುಗಡೆ ಮಾಡಿದ್ದು, ಅವರು ಉಳಿಸಿಕೊಂಡ 17 ಆಟಗಾರರಲ್ಲಿ ದಯಾಳ್ ಕೂಡ ಒಬ್ಬರು. ಎರಡು ಪ್ರಕರಣಗಳ ಹೊರತಾಗಿಯೂ ಫ್ರಾಂಚೈಸಿ ಅವರನ್ನು ಉಳಿಸಿಕೊಂಡಿದ್ದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಟೀಕಿಸಿದರು. ಈ ಅಪರಾಧಗಳಿಂದಾಗಿ ದಯಾಳ್ ಅವರನ್ನು ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ (ಯುಪಿಸಿಎ) ಯುಪಿಟಿ20 ಲೀಗ್‌ನಲ್ಲಿ ಭಾಗವಹಿಸದಂತೆ ಅಮಾನತುಗೊಳಿಸಿದೆ. ಹೀಗಿರುವ ಆರ್‌ಸಿಬಿ ಏಕೆ ಅವರನ್ನು ರಿಟೇನ್ ಮಾಡಿದೆ ಎಂದು ಕೆಲವರು ಪ್ರಶ್ನಿಸಿದ್ದಾರೆ.
27 ವರ್ಷದ ದಯಾಳ್, ಗಾಜಿಯಾಬಾದ್ ಮತ್ತು ಜೈಪುರದಲ್ಲಿ ಲೈಂಗಿಕ ದೌರ್ಜನ್ಯದ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವುದು ಬಿಸಿ ಚರ್ಚೆಗೆ ನಾಂದಿ ಹಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳು ಇಂತಹ ಗಂಭೀರ ಆರೋಪಗಳ ನಡುವೆ ಆರ್‌ಸಿಬಿ ನಿರ್ಧಾರವು ನಿರ್ಲಕ್ಷ್ಯವೇ ಎಂದು ಪ್ರಶ್ನಿಸಿದ್ದಾರೆ. ಆರೋಪಗಳು ಇನ್ನೂ ತನಿಖೆಯಲ್ಲಿರುವ ಸಮಯದಲ್ಲಿ ಫ್ರಾಂಚೈಸಿ ತಪ್ಪು ಸಂದೇಶವನ್ನು ಕಳುಹಿಸಿದೆ ಎಂದು ಕೆಲವರು ಟೀಕಿಸಿದರು.
"ಪ್ರಸ್ತುತ ಪೋಕ್ಸೋ ಪ್ರಕರಣ ನಡೆಯುತ್ತಿರುವ ಮತ್ತು ಹಲವಾರು ಮಹಿಳೆಯರಿಂದ ದುಷ್ಕೃತ್ಯದ ಆರೋಪ ಎದುರಿಸುತ್ತಿರುವ ಯಶ್ ದಯಾಳ್ ಅವರನ್ನು ಆರ್‌ಸಿಬಿ ಉಳಿಸಿಕೊಂಡಿದೆ. ಏತನ್ಮಧ್ಯೆ, ಈ ಆರೋಪಗಳಿಂದಾಗಿ ಅವರ ರಾಜ್ಯ ತಂಡ ಯುಪಿ ಈಗಾಗಲೇ ಅವರನ್ನು ಕೈಬಿಟ್ಟಿತ್ತು. ಆರ್‌ಸಿಬಿಗೆ ನಾಚಿಕೆಗೇಡು" ಎಂದು ಎಕ್ಸ್‌ನಲ್ಲಿ ಬಳಕೆದಾರರು ಬರೆದಿದ್ದಾರೆ.
ಇದನ್ನೂ ಓದಿ IPL 2026: ಮಿನಿ ಹರಾಜಿನಲ್ಲಿ ಯಾವ ತಂಡಕ್ಕೆ ಎಷ್ಟು ಆಟಗಾರರನ್ನು ಖರೀದಿಸಬಹುದು?
"ಯಶ್ ದಯಾಳ್ ಅವರಂತಹ ವ್ಯಕ್ತಿ ಇನ್ನೂ ತಂಡದಲ್ಲಿ ಸ್ಥಾನ ಪಡೆದಿರುವುದು ವಿಪರ್ಯಾಸ ಮತ್ತು ಪೈಶಾಚಿಕ. ಆರ್‌ಸಿಬಿಯಿಂದ ಮುಜುಗರ!" ಎಂದು ಮತ್ತೊಬ್ಬ ಅಭಿಮಾನಿ ಹೇಳಿದರು.
ಆರ್‌ಸಿಬಿ ಬಿಡುಗಡೆ ಮಾಡಿದ ಆಟಗಾರರು
ಸ್ವಸ್ತಿಕ್ ಚಿಕಾರ, ಮಯಾಂಕ್ ಅಗರ್ವಾಲ್, ಟಿಮ್ ಸೀಫರ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಮನೋಜ್ ಭಾಂಡಗೆ, ಲುಂಗಿ ಎನ್‌ಗಿಡಿ, ಬ್ಲೆಸಿಂಗ್ ಮುಝರಬಾನಿ, ಮೋಹಿತ್ ರಾಥೆ.
ಆರ್‌ಸಿಬಿ ಉಳಿಸಿಕೊಂಡ ಆಟಗಾರರು
ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃಣಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ಜಾಶ್ ಹೇಝಲ್‌ವುಡ್, ಯಶ್ ದಯಾಳ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಸಿಖ್ ದಾರ್ ಸಿಂಗ್, ಅಭಿನಂದನ್ ಸಿಂಗ್, ಸುಯಾಶ್ ಶರ್ಮಾ.
ಆರ್‌ಸಿಬಿ ಖಾತೆಯಲ್ಲಿ ಉಳಿದಿರುವ ಒಟ್ಟು ಮೊತ್ತ: 16.40 ಕೋಟಿ ರೂ.