IPL 2026: ಮಿನಿ ಹರಾಜಿನಲ್ಲಿ ಯಾವ ತಂಡಕ್ಕೆ ಎಷ್ಟು ಆಟಗಾರರನ್ನು ಖರೀದಿಸಬಹುದು?
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಗರಿಷ್ಠ 10 ಆಟಗಾರರನ್ನು ಬಿಡುಗಡೆ ಮಾಡಿದ್ದು, ಹರಾಜಿಗೆ 13 ಸ್ಥಾನಗಳನ್ನು ಭರ್ತಿ ಮಾಡಲಿದೆ. ಅವರಲ್ಲಿ ಆರು ವಿದೇಶಿ ಆಟಗಾರರು ಸೇರಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹೊಸ ಬದಲಾವಣೆಗಾಗಿ 12 ಆಟಗಾರರನ್ನು ಕೈಬಿಟ್ಟಿದ್ದು, ಒಂಬತ್ತು ಸ್ಥಾನಗಳು ಲಭ್ಯವಿದೆ.
-
ಮುಂಬಯಿ: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(IPL 2026) ಟೂರ್ನಿಗೆ ಭರದ ಸಿದ್ದತೆಗಳು ನಡೆಯುತ್ತಿವೆ. ಶನಿವಾರ ಎಲ್ಲ ಫ್ರಾಂಚೈಸಿಗಳು ಆಟಗಾರರ ರೀಟೈನ್ ಹಾಗೂ ರಿಲೀಸ್ ಪಟ್ಟಿಯನ್ನು ಪ್ರಕಟಿಸಿತ್ತು. ಇದೀಗ ಎಲ್ಲಾ ತಂಡಗಳು ಮಿನಿ ಹರಾಜಿಗೆ ಸಜ್ಜಾಗಿದೆ. ಮಿನಿ ಹರಾಜು(IPL 2026 Mini Auction) ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆಯಲಿದೆ. ಪ್ರತಿ ತಂಡಕ್ಕೆ ಎಷ್ಟು ಸ್ಥಾನಗಳು ಉಳಿದಿವೆ ಎಂಬ ಮಾಹಿತಿ ಇಲ್ಲಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಗರಿಷ್ಠ 10 ಆಟಗಾರರನ್ನು ಬಿಡುಗಡೆ ಮಾಡಿದ್ದು, ಹರಾಜಿಗೆ 13 ಸ್ಥಾನಗಳನ್ನು ಭರ್ತಿ ಮಾಡಲಿದೆ. ಅವರಲ್ಲಿ ಆರು ವಿದೇಶಿ ಆಟಗಾರರು ಸೇರಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹೊಸ ಬದಲಾವಣೆಗಾಗಿ 12 ಆಟಗಾರರನ್ನು ಕೈಬಿಟ್ಟಿದ್ದು, ಒಂಬತ್ತು ಸ್ಥಾನಗಳು ಲಭ್ಯವಿದೆ.
ಚೆನ್ನೈ ಸೂಪರ್ ಕಿಂಗ್ಸ್: 9 (4 ವಿದೇಶಿ ಆಟಗಾರರು)
ಮುಂಬೈ ಇಂಡಿಯನ್ಸ್: 5 (1 ವಿದೇಶಿ ಆಟಗಾರ)
ಕೋಲ್ಕತ್ತಾ ನೈಟ್ ರೈಡರ್ಸ್: 13 (6 ವಿದೇಶಿ ಆಟಗಾರರು)
ರಾಯಲ್ ಚಾಲೆಂಜರ್ಸ್ ಬೆಂಗಳೂರು: 8 (2 ವಿದೇಶಿ ಆಟಗಾರರು)
ಸನ್‌ರೈಸರ್ಸ್ ಹೈದರಾಬಾದ್: 10 (2 ವಿದೇಶಿ ಆಟಗಾರರು)
ಗುಜರಾತ್ ಟೈಟಾನ್ಸ್: 5 (4 ವಿದೇಶಿ ಆಟಗಾರರು)
ರಾಜಸ್ಥಾನ್ ರಾಯಲ್ಸ್: 9 (1 ವಿದೇಶಿ ಆಟಗಾರ)
ಲಕ್ನೋ ಸೂಪರ್ ಜೈಂಟ್ಸ್: 6 (4 ವಿದೇಶಿ ಆಟಗಾರರು)
ದೆಹಲಿ ಕ್ಯಾಪಿಟಲ್ಸ್: 8 (5 ವಿದೇಶಿ ಆಟಗಾರರು)
ಪಂಜಾಬ್ ಕಿಂಗ್ಸ್: 4 (2 ವಿದೇಶಿ ಆಟಗಾರರು)
ಇದನ್ನೂ ಓದಿ IPL 2026: ಆರ್‌ಸಿಬಿ ಸೇರಿದಂತೆ ಎಲ್ಲಾ 10 ಫ್ರಾಂಚೈಸಿಗಳು ಉಳಿಸಿಕೊಂಡಿರುವ, ಬಿಡುಗಡೆ ಮಾಡಿದ ಆಟಗಾರರ ಪಟ್ಟಿ!
ಎಲ್ಲಾ 10 ಫ್ರಾಂಚೈಸಿಗಳ ಪರ್ಸ್‌ನಲ್ಲಿ ಉಳಿದಿರುವ ಹಣ
ಕೋಲ್ಕತ್ತಾ ನೈಟ್ ರೈಡರ್ಸ್: 64.3 ಕೋಟಿ
ಚೆನ್ನೈ ಸೂಪರ್ ಕಿಂಗ್ಸ್: 43.4 ಕೋಟಿ
ಸನ್‌ರೈಸರ್ಸ್ ಹೈದರಾಬಾದ್: 25.5 ಕೋಟಿ
ಲಖನೌ ಸೂಪರ್ ಜಯಂಟ್ಸ್: 22.95 ಕೋಟಿ
ಡಲ್ಲಿ ಕ್ಯಾಪಿಟಲ್ಸ್: 21.8 ಕೋಟಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು: 16.4 ಕೋಟಿ
ರಾಜಸ್ಥಾನ್ ರಾಯಲ್ಸ್: 16.05 ಕೋಟಿ
ಗುಜರಾತ್ ಟೈಟನ್ಸ್: 12.9 ಕೋಟಿ
ಪಂಜಾಬ್ ಕಿಂಗ್ಸ್: 11.5 ಕೋಟಿ
ಮುಂಬೈ ಇಂಡಿಯನ್ಸ್: 2.75 ಕೋಟಿ