ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB Practice: ನಾಲ್ಕು ಗಂಟೆ ಕಠಿಣ ಅಭ್ಯಾಸ ನಡೆಸಿದ ಆರ್‌ಸಿಬಿ ಆಟಗಾರರು

ವಿರಾಟ್‌ ಕೊಹ್ಲಿ, ಫಿಲ್‌ ಸಾಲ್ಟ್‌, ನಾಯಕ ಪಾಟೀದಾರ್‌, ಜಿತೇಶ್‌ ಶರ್ಮ ನೆಟ್ಸ್‌ನಲ್ಲಿ ಹೆಚ್ಚಾಗಿ ದೊಡ್ಡ ಹೊಡೆತಗಳನ್ನು ಅಭ್ಯಾಸ ನಡೆಸಿದ್ದು ಕಂಡು ಬಂತು. ವೇಗಿಗಳಾದ ಜೋಶ್‌ ಹ್ಯಾಲ್‌ವುಡ್‌, ಯಶ್‌ ದಯಾಳ್‌ ಮತ್ತು ಭುಮನೇಶ್ವರ್‌ ಕುಮಾರ್‌ ಬಹಳ ಜೋಶ್‌ನಿಂದ ಬೌಲಿಂಗ್‌ ಅಭ್ಯಾಸ ನಡೆಸಿದರು.

ಅಹಮದಾಬಾದ್:‌ 18 ವರ್ಷಗಳ ಕಪ್‌ ಗೆಲುವಿನ ಆಸೆ ಈಡೇರಿಸವ ಇರಾದೆಯೊಂದಿಗೆ ಫೈನಲ್‌ ಪ್ರವೇಶಿಸಿರುವ ಆರ್‌ಸಿಬಿ(RCB) ತಂಡ ಜೂನ್‌ 3 ರಂದು ನಡೆಯುವ ಫೈನಲ್‌ ಪಂದ್ಯಕ್ಕೆ ಭಾರೀ ಸಿದ್ಧತೆ ಆರಂಭಿಸಿದೆ. ಭಾನುವಾರ ಅಹಮದಾಬಾದ್‌(Ahmedabad)ನ ನರೇಂದ್ರ ಮೋದಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ (Narendra Modi Stadium) ಕ್ವಾಲಿಫೈಯರ್‌-2 ಪಂದ್ಯ ನಡೆಯುವ ಮುನ್ನ 4 ಗಂಟೆ ಕಠಿಣ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಅಭ್ಯಾಸ(RCB Practice) ನಡೆಸಿದೆ.

ಮಧ್ಯಾಹ್ನ 12 ಗಂಟೆಯಿಂದ 3 ಗಂಟೆ ತನಕ ಆರ್‌ಸಿಬಿ ಆಟಗಾರರು ಅಭ್ಯಾಸ ನಡೆಸಿದರು. ತಂಡದ ಪ್ರಧಾನ ಕೋಚ್‌ ಆಂಡಿ ಫ್ಲವರ್, ಬ್ಯಾಟಿಂಗ್‌ ಕೋಚ್‌ ದಿನೇಶ್‌ ಕಾರ್ತಿಕ್‌ ಮಾರ್ಗದರ್ಶನದಲ್ಲಿ ಆಟಗಾರರು ಬ್ಯಾಟಿಂಗ್‌ ಅಭ್ಯಾಸ ನಡೆಸಿದರು. ವಿರಾಟ್‌ ಕೊಹ್ಲಿ, ಫಿಲ್‌ ಸಾಲ್ಟ್‌, ನಾಯಕ ಪಾಟೀದಾರ್‌, ಜಿತೇಶ್‌ ಶರ್ಮ ನೆಟ್ಸ್‌ನಲ್ಲಿ ಹೆಚ್ಚಾಗಿ ದೊಡ್ಡ ಹೊಡೆತಗಳನ್ನು ಅಭ್ಯಾಸ ನಡೆಸಿದ್ದು ಕಂಡು ಬಂತು. ವೇಗಿಗಳಾದ ಜೋಶ್‌ ಹ್ಯಾಲ್‌ವುಡ್‌, ಯಶ್‌ ದಯಾಳ್‌ ಮತ್ತು ಭುಮನೇಶ್ವರ್‌ ಕುಮಾರ್‌ ಬಹಳ ಜೋಶ್‌ನಿಂದ ಬೌಲಿಂಗ್‌ ಅಭ್ಯಾಸ ನಡೆಸಿದರು.

ಆರ್‌ಸಿಬಿ ತಂಡ ಶನಿವಾರ (ಮೇ 31) ಅಹಮದಾಬಾದ್‌ಗೆ ತಲುಪಿತ್ತು. ಗುರುವಾರ (ಮೇ 29) ನಡೆದ ಕ್ವಾಲಿಫೈಯರ್ 1 ಗೆಲುವಿನ ನಂತರ, ತಂಡ ಒಂದು ದಿನ ಚಂಡೀಗಢದಲ್ಲಿಯೇ ಉಳಿದು ಮರುದಿನ ಅಹಮದಾಬಾದ್‌ಗೆ ಪ್ರಯಾಣಿಸಿತ್ತು.

ಜೂನ್ 3ರಂದು ನಡೆಯುವ ಐಪಿಎಲ್‌ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡ ಗೆದ್ದು ಟ್ರೋಫಿ ಕೈವಶ ಮಾಡಿದರೆ ಆ ದಿನವನ್ನು ಸಾರ್ವತ್ರಿಕ ರಜೆ ಎಂದು ಘೋಷಿಸಲು ಶಿವನಂದ ಮಲ್ಲನ್ನವರ ಎನ್ನುವ ಅಭಿಮಾನಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.





ಶನಿವಾರ ಸಂಜೆ ಮುಂಬೈ ಮತ್ತು ಪಂಜಾಬ್‌ ತಂಡದ ಆಟಗಾರರು ಅಭ್ಯಾಸ ನಡೆಸಿದ ವೇಳೆ ತುಂತುರು ಮಳೆಯಾಗಿತ್ತು. ಹೀಗಾಗಿ ಮೈದಾನ ಸಿಬ್ಬಂದಿ ಮೈದಾನಕ್ಕೆ ಕವರ್‌ಗಳನ್ನು ಹೊದಿಸಿದ್ದ ಕಾರಣ ಉಭಯ ತಂಡಗಳಿಗೂ ಹೆಚ್ಚಿನ ಅಭ್ಯಾಸ ಮಾಡಲು ಸಾಧ್ಯವಾಗಿರಲಿಲ್ಲ. ಇಂದಿನ ಪಂದ್ಯದಲ್ಲಿ ಯಾರು ವಿಜೇತರಾಗುತ್ತಾರೋ ಅವರು ಜೂ.3 ಮಂಗಳವಾರ ನಡೆಯುವ ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ಸವಾಲು ಎದುರಿಸಲಿದ್ದಾರೆ.