ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆರ್​ಸಿಬಿ ಖರೀದಿ ರೇಸ್‌ನಲ್ಲಿ ಬಿಗ್‌ ಟ್ವಿಸ್ಟ್‌; ಅಂತಿಮ ಕ್ಷಣದಲ್ಲಿ ಎಂಟ್ರಿ ಕೊಟ್ಟ ಆದಿತ್ಯ ಬಿರ್ಲಾ ಗ್ರೂಪ್

RCB Sale: ಪ್ರತಿಷ್ಠಿತ ಫುಟ್​ಬಾಲ್​ ಕ್ಲಬ್​ ಯುನೈಟೆಡ್​ ಮ್ಯಾಂಚೆಸ್ಟರ್​ ಮಾಲೀಕ ಅವ್ರಾಮ್​ ಗ್ಲೇಜರ್​ ಅವರ ಲ್ಯಾನ್ಸರ್​ ಕ್ಯಾಪಿಟಲ್​ ಕಂಪನಿ ಈ ಮುನ್ನ ಗರಿಷ್ಠ 1.8 ಶತಕೋಟಿ ಡಾಲರ್​ (16,616 ಕೋಟಿ ರೂ.) ಬಿಡ್​ ಸಲ್ಲಿಸಿತ್ತು. ಆದರೆ ಅಂತಿಮ ಸುತ್ತಿನಲ್ಲಿ ಖರೀದಿ ರೇಸ್​ನಿಂದ ಹಿಂದೆ ಸರಿದಿದೆ ಎನ್ನಲಾಗಿದೆ.

RCB Sale

ನವದೆಹಲಿ, ಮಾ.22: ಐಪಿಎಲ್​ ಚಾಂಪಿಯನ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB Sale) ತಂಡದ ಖರೀದಿ ರೇಸ್‌ನಲ್ಲಿ ಬಿಗ್ ಟ್ವಿಸ್ಟ್ ಉಂಟಾಗಿದ್ದು ಆದಿತ್ಯ ಬಿರ್ಲಾ ಗ್ರೂಪ್(Aditya Birla Group) ಈ ರೇಸ್‌ಗೆ ಎಂಟ್ರಿಕೊಟ್ಟಿದೆ ಎಂದು ವರದಿಯಾಗಿದೆ. ಕೆಲ ದಿನಗಳ ಹಿಂದೆ ಅಂತಿಮ ಹಂತದ ರೇಸ್​ನಲ್ಲಿ 2 ಕಂಪನಿಗಳು ಮಾತ್ರ ಉಳಿದುಕೊಂಡಿವೆ ಎಂದು ವರದಿಯಾಗಿತ್ತು. ಆದರೆ ಇದೀಗ ಆರ್‌ಸಿಬಿ ಖರೀದಿಸುವ 2 ಬಿಲಿಯನ್ ಡಾಲರ್‌ ರೇಸ್‌ನಲ್ಲಿ ಆದಿತ್ಯ ಬಿರ್ಲಾ ಗ್ರೂಪ್ ಕಾಣಿಸಿಕೊಂಡಿದೆ.

ಬಿರ್ಲಾ ಗ್ರೂಪ್‌ ಅಮೆರಿಕದ ಕ್ರೀಡಾ ಹೂಡಿಕೆದಾರ ಡೇವಿಡ್ ಬ್ಲಿಟ್ಜರ್ ಅವರೊಂದಿಗೆ ಕೈಜೋಡಿಸಿದ್ದಾರೆ ಮತ್ತು ಹಾಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮತ್ತು ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) ಚಾಂಪಿಯನ್‌ಗಳಿಗೆ ಬಿಡ್ ಮಾಡಲು ನೋಡುತ್ತಿದ್ದಾರೆ. ಇಲ್ಲಿಯವರೆಗೆ, ಬಿರ್ಲಾ-ಬ್ಲಿಟ್ಜರ್ ಒಕ್ಕೂಟವು ಆರ್‌ಸಿಬಿಗೆ ಸಮಾನಾಂತರವಾಗಿ ನಡೆಯುತ್ತಿರುವ ರಾಜಸ್ಥಾನ ರಾಯಲ್ಸ್ ಅನ್ನು ಖರೀದಿಸಲು ಸ್ಪರ್ಧೆಯಲ್ಲಿತ್ತು. ಆದರೆ ಇದೀಗ ರಾಜಸ್ಥಾನ್‌ ಬಿಟ್ಟು ಆರ್‌ಸಿಬಿ ಮೇಲೆ ಕಣ್ಣಿಟ್ಟಿದೆ. ಆದ್ಯಾಗೂ ಬಿರ್ಲಾ-ಬ್ಲಿಟ್ಜರ್ ಒಕ್ಕೂಟವು ಇನ್ನೂ ಅಧಿಕೃತವಾಗಿ ಬಿಡ್‌ ಸಲ್ಲಿಸಿಲ್ಲ ಎನ್ನಲಾಗಿದೆ.

ವರದಿಗಳ ಪ್ರಕಾರ, ಸ್ವೀಡನ್​ನ ಖಾಸಗಿ ಷೇರು ಸಂಸ್ಥೆ "ಇಕ್ಯೂಟಿ' ಆರ್​ಸಿಬಿ ತಂಡದ ಖರೀದಿ ರೇಸ್​ನಲ್ಲಿ ಸದ್ಯ ಮುಂಚೂಣಿಯಲ್ಲಿದೆ. ಇಕ್ಯೂಟಿ 2ರಿಂದ 2.1 ಶತಕೋಟಿ ಡಾಲರ್​ (ಸುಮಾರು 18,463ರಿಂದ 19,386 ಕೋಟಿ ರೂ.) ಬಿಡ್​ ಸಲ್ಲಿಸಿದೆ ಎನ್ನಲಾಗಿದೆ. ಇನ್ನು ಮಣಿಪಾಲ್​ ಹಾಸ್ಪಿಟಲ್ಸ್​ನ ಡಾ. ರಂಜನ್​ ಪೈ ಅವರು ಅಮೆರಿಕದ ಖಾಸಗಿ ಷೇರು ಸಂಸ್ಥೆ ಕೆಕೆಆರ್​ ಮತ್ತು ಸಿಂಗಾಪುರದ ಪ್ರಮುಖ ಹೂಡಿಕೆ ಸಂಸ್ಥೆ ಟೆಮಾಸೆಕ್​ ಜತೆಗೂಡಿ ಆರ್​ಸಿಬಿ ಖರೀದಿ ರೇಸ್​ನಲ್ಲಿ ಉಳಿದಿದ್ದಾರೆ. ಆದರೆ ಅವರ ಬಿಡ್​ ಮೊತ್ತ ಬಹಿರಂಗವಾಗಿಲ್ಲ.

ಭಾರತದ ಜತೆಗಿನ ಸರಣಿಗಾಗಿ ಐರ್ಲೆಂಡ್‌ ಪ್ರವಾಸ ಮುಂದೂಡಿದ ಬಾಂಗ್ಲಾದೇಶ

ಪ್ರತಿಷ್ಠಿತ ಫುಟ್​ಬಾಲ್​ ಕ್ಲಬ್​ ಯುನೈಟೆಡ್​ ಮ್ಯಾಂಚೆಸ್ಟರ್​ ಮಾಲೀಕ ಅವ್ರಾಮ್​ ಗ್ಲೇಜರ್​ ಅವರ ಲ್ಯಾನ್ಸರ್​ ಕ್ಯಾಪಿಟಲ್​ ಕಂಪನಿ ಈ ಮುನ್ನ ಗರಿಷ್ಠ 1.8 ಶತಕೋಟಿ ಡಾಲರ್​ (16,616 ಕೋಟಿ ರೂ.) ಬಿಡ್​ ಸಲ್ಲಿಸಿತ್ತು. ಆದರೆ ಅಂತಿಮ ಸುತ್ತಿನಲ್ಲಿ ಖರೀದಿ ರೇಸ್​ನಿಂದ ಹಿಂದೆ ಸರಿದಿದೆ ಎನ್ನಲಾಗಿದೆ.

ಯಾವುದೇ ಐಪಿಎಲ್​ ತಂಡದ ಮಾರಾಟ ಪ್ರಕ್ರಿಯೆಯನ್ನು ಬಿಸಿಸಿಐ ಒಪ್ಪಿಗೆ ಇಲ್ಲದೆ ಅಂತಿಮಗೊಳಿಸುವಂತಿಲ್ಲ. ಇದು ಬಿಸಿಸಿಐ ನಿಯಮಾವಳಿ ಆಗಿದೆ. ಹೀಗಾಗಿ ಆರ್​ಸಿಬಿ ತಂಡ ಹೊಸ ಮಾಲೀಕರ ಕೈಗೆ ಸೇರಲು ಅಕ್ಟೋಬರ್​ವರೆಗೆ ಕಾಯಬೇಕಾಗಬಹುದು ಎನ್ನಲಾಗಿದೆ. ಬಿಸಿಸಿಐ ಸದ್ಯ ಐಪಿಎಲ್​ 19ನೇ ಆವೃತ್ತಿಯಲ್ಲಿ ಬಿಜಿಯಾಗಿದೆ. ಹೀಗಾಗಿ ಈ ಸಮಯದಲ್ಲಿ ಬಿಸಿಸಿಐ ಯಾವುದೇ ತಂಡದ ಮಾಲೀಕತ್ವ ಬದಲಾವಣೆಗೆ ಸಮ್ಮತಿ ನೀಡುವ ಸಾಧ್ಯತೆ ಇಲ್ಲ.