ರಾಯ್ಪುರ, ಮೇ 11: ಭಾನುವಾರ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ನ(IPL 2026) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(MI vs RCB) ತಂಡವು ಅಂಕಪಟ್ಟಿ(IPL 2026 Points Table)ಯಲ್ಲಿ ಅಗ್ರಸ್ಥಾನಕ್ಕೇರುವ ಮೂಲಕ ಪ್ಲೇ-ಆಫ್ ಪ್ರವೇಶಕ್ಕೆ ಇನ್ನೊಂದು ಮೆಟ್ಟಿಲು ದೂರದಲ್ಲಿದೆ. ಸೋಲು ಕಂಡ ಮುಂಬೈ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿತು.
ಆರ್‌ಸಿಬಿ ಆಡಿದ 11 ಪಂದ್ಯಗಳಲ್ಲಿ 7 ಗೆಲುವು 4 ಸೋಲು ಕಂಡಿದ್ದು ಒಟ್ಟು 14 ಅಂಕ ಗಳಿಸಿದೆ. ತಂಡದ ರನ್‌ರೇಟ್ ಕೂಡ ಉತ್ತಮವಾಗಿದೆ. ಇನ್ನುಳಿದ 3 ಪಂದ್ಯಗಳ ಪೈಕಿ ಕನಿಷ್ಠ ಒಂದು ಪಂದ್ಯ ಗೆದ್ದರೂ ತಂಡ ಅಧಿಕೃತವಾಗಿ ಪ್ಲೇ ಆಫ್ ಪ್ರವೇಶ ಪಡೆಯಲಿದೆ. ಆರ್‌ಸಿಬಿಯಷ್ಟೇ ಪಂದ್ಯಗಳನನ್ನಾಡಿ ಗೆಲುವು ಸಾಧಿಸಿರುವ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ಕೂಡ 14 ಅಂಕಗಳಿಸಿದೆ. ನೆಟ್ ರನ್‌ರೇಟ್ ಕಡಿಮೆ ಇರುವ ಕಾರಣ ಹೈದರಾಬಾದ್ ದ್ವಿತೀಯ ಸ್ಥಾನದಲ್ಲಿದ್ದರೆ, ಗುಜರಾತ್ ಮೂರನೇ ಸ್ಥಾನದಲ್ಲಿದೆ.
10 ಪಂದ್ಯಗಳಿಂದ 13 ಅಂಕ ಕಲೆಹಾಕಿರುವ ಪಂಜಾಬ್ ಕಿಂಗ್ಸ್ ನಾಲ್ಕನೇ ಸ್ಥಾನದಲ್ಲಿದೆ. ತಲಾ 12 ಅಂಕ ಪಡೆದಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಕ್ರಮವಾಗಿ 5 ಮತ್ತು 6ನೇ ಸ್ಥಾನದಲ್ಲಿದೆ. ಒಟ್ಟಾರೆ ಈ ಬಾರಿ ಅಗ್ರ ನಾಲ್ಕು ಸ್ಥಾನಗಳಿಗೆ 6 ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.
RCB vs MI: ಮುಂಬೈ ಎದುರು ಕೊನೆಯ ಓವರ್ ಥ್ರಿಲ್ಲರ್ ಗೆದ್ದ ಆರ್‌ಸಿಬಿಗೆ ಅಗ್ರ ಸ್ಥಾನ!
ಆರೆಂಜ್ ಕ್ಯಾಪ್
ಐಪಿಎಲ್ 2026 ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಹೆನ್ರಿಕ್ ಕ್ಲಾಸೆನ್ ಮತ್ತು ಅಭಿಷೇಕ್ ಶರ್ಮಾ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ. ಕ್ಲಾಸೆನ್ 494 ರನ್‌ಗಳೊಂದಿಗೆ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದರೆ, ಅಭಿಷೇಕ್ ಇದುವರೆಗೆ ಆಡಿದ 11 ಇನ್ನಿಂಗ್ಸ್‌ಗಳಲ್ಲಿ ಒಟ್ಟು 475 ರನ್‌ಗಳನ್ನು ಗಳಿಸಿದ್ದಾರೆ. ಅವರ ನಂತರ ಡೆಲ್ಲಿ ಕ್ಯಾಪಿಟಲ್ಸ್ ಕೆಎಲ್ ರಾಹುಲ್, ಜಿಟಿ ನಾಯಕ ಶುಭ್‌ಮನ್ ಗಿಲ್, ಆರ್‌ಆರ್‌ನ 15 ವರ್ಷದ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಕಾಣಿಸಿಕೊಂಡಿದ್ದಾರೆ.
CSK vs LSG: ಚೆನ್ನೈ ಎದುರು ಲಖನೌ ಸೋಲಿಗೆ ಈ ಇಬ್ಬರೇ ಕಾರಣ ಎಂದ ರಿಷಭ್ ಪಂತ್!
ಪರ್ಪಲ್ ಕ್ಯಾಪ್
ಮುಂಬೈ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್ ನಾಲ್ಕು ಓವರ್‌ಗಳಲ್ಲಿ 23 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಭುವನೇಶ್ವರ್ ಅವರ ಈ ಋತುವಿನ ಮೊದಲ ನಾಲ್ಕು ವಿಕೆಟ್‌ಗಳು ಐಪಿಎಲ್ 2026 ರಲ್ಲಿ ಅವರ ವಿಕೆಟ್‌ಗಳ ಸಂಖ್ಯೆಯನ್ನು 21 ಕ್ಕೆ ವಿಸ್ತರಿಸಲು ಸಹಾಯ ಮಾಡಿತು ಮತ್ತು ಅವರು ಈಗ ಪರ್ಪಲ್ ಕ್ಯಾಪ್ ಲೀಡರ್‌ಬೋರ್ಡ್‌ನಲ್ಲಿ ನಂಬರ್ 1 ಸ್ಥಾನವನ್ನು ಮರಳಿ ಪಡೆದರು. ಸಿಎಸ್‌ಕೆಯ ಅನ್ಶುಲ್ ಕಾಂಬೋಜ್ 19 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.