ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs CSK: ಚೆನ್ನೈ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಅಭಿಮಾನಿಗಳನ್ನು ಕೆಣಕಿದ ರಾಯುಡು

ಇತ್ತೀಚೆಗಷ್ಟೇ ರಾಯುಡು ಈ ಬಾರಿ ಆರ್‌ಸಿಬಿ ತಂಡವನ್ನು ಪ್ಲೇಆಫ್ ಹಂತಕ್ಕೇರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಆರ್‌ಸಿಬಿ ಪ್ಲೇ-ಆಫ್ ಹಂತ ದಾಟೀದರೆ ಅಭಿಮಾನಿಗಳ ಬಹು ವರ್ಷದ ಕಪ್‌ ಕನಸು ಈ ಬಾರಿ ನನಸಾಗುವ ಸಾಧ್ಯತೆ ಇದೆ ಎಂದು ಹೇಳಿದ್ದರು.

ಚೆನ್ನೈ: ಕೆಲ ದಿನಗಳ ಹಿಂದಷ್ಟೇ ಆರ್‌ಸಿಬಿ(RCB) ತಂಡ ಈ ಬಾರಿ ಕಪ್‌ ಗೆಲ್ಲುವ ನೆಚ್ಚಿನ ತಂಡ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌(CSK) ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು(Ambati Rayudu) ತಮ್ಮ ಹಳೆಯ ಚಾಳಿಯನ್ನು ಮತ್ತೆ ಮುಂದುವರಿಸಿದ್ದಾರೆ. ಸಿಎಸ್​ಕೆ ಮುಂದೆ ಆರ್​ಸಿಬಿ(RCB vs CSK) ಸಾಮಾನ್ಯ ತಂಡ. ಹೀಗಾಗಿ ಉಭಯ ತಂಡಗಳನ್ನು ಸಾಂಪ್ರದಾಯಿಕ ಎದುರಾಳಿಗಳೆಂದು ಬಿಂಬಿಸುವುದು ಸರಿಯಲ್ಲ ಎಂದು ಹೇಳುವ ಮೂಲಕ ಮತ್ತೆ ಆರ್‌ಸಿಬಿ ಅಭಿಮಾನಿಗಳನ್ನು ಕೆಣಕಿದ್ದಾರೆ.

ಕ್ರಿಕ್‌ಬಝ್‌ ಸಂದರ್ಶನಲ್ಲಿ ಮಾತನಾಡಿದ ರಾಯುಡು, ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಚೆನ್ನೈ ತಂಡಗಳ ನಡುವಣ ಪಂದ್ಯವನ್ನು ಕೆಲವರು ಸಾಂಪ್ರದಾಯಿಕ ಬದ್ಧ ಎದುರಾಳಿಗಳ ಪಂದ್ಯ ಎಂದು ಹೇಳುತ್ತಾರೆ. ಆದರೆ ನನ್ನ ಪ್ರಕಾರ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಸಾಂಪ್ರದಾಯಿಕ ಎದುರಾಳಿಗಳೆಂದು ಬಿಂಬಿಸಬಹುದು. ಏಕೆಂದರೆ ಉಭಯ ತಂಡಗಳ ನಡುವೆ ಅಂತಹದೊಂದು ಪೈಪೋಟಿ ಇದೆ. ಆದರೆ ಸಿಎಸ್​ಕೆ ಮುಂದೆ ಆರ್​ಸಿಬಿ ಸಾಮಾನ್ಯ ತಂಡ. ಹೀಗಾಗಿ ಉಭಯ ತಂಡಗಳನ್ನು ಸಾಂಪ್ರದಾಯಿಕ ಎದುರಾಳಿಗಳೆಂದು ಬಿಂಬಿಸುವುದು ಸರಿಯಲ್ಲ' ಎಂದು ಹೇಳಿದ್ದಾರೆ.

ರಾಯುಡು ಹೇಳಿಗೆ ತಕ್ಕ ತಿರುಗೇಟು ಕೊಟ್ಟಿರುವ ಆರ್‌ಸಿಬಿ ಅಭಿಮಾನಿಗಳು, ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ತಂಡದ ಪ್ರದರ್ಶನ ಕಂಡಿದ್ದೇವೆ. ನೀವು ಹೇಳಿಕೆ ನೀಡುವಾಗ ಎಡವಿದಂತಿದೆ. ಆರ್​ಸಿಬಿ ಮುಂದೆ ಸಿಎಸ್​ಕೆ ಸಾಮಾನ್ಯ ತಂಡ ಎಂಬುದಾಗಿ ಹೇಳಬೇಕಿತ್ತು ಎಂದು ರಾಯುಡುಗೆ ತಿರುಗೇಟು ನೀಡಿದ್ದಾರೆ. ಆರ್‌ಸಿಬಿ ಮತ್ತು ಚೆನ್ನೈ ಇಂದು ಬೆಂಗಳೂರಿನಲ್ಲಿ ಮುಖಾಮುಖಿಯಾಗಲಿವೆ.

ಇದನ್ನೂ ಓದಿ IPL 2025: ಸಚಿನ್‌ ದಾಖಲೆ ಮುರಿದ ಸಾಯಿ ಸುದರ್ಶನ್‌

ಇತ್ತೀಚೆಗಷ್ಟೇ ರಾಯುಡು ಈ ಬಾರಿ ಆರ್‌ಸಿಬಿ ತಂಡವನ್ನು ಪ್ಲೇಆಫ್ ಹಂತಕ್ಕೇರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಆರ್‌ಸಿಬಿ ಪ್ಲೇ-ಆಫ್ ಹಂತ ದಾಟೀದರೆ ಅಭಿಮಾನಿಗಳ ಬಹು ವರ್ಷದ ಕಪ್‌ ಕನಸು ಈ ಬಾರಿ ನನಸಾಗುವ ಸಾಧ್ಯತೆ ಇದೆ ಎಂದು ಹೇಳಿದ್ದರು.