ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs RR: ಆರ್‌ಸಿಬಿ-ರಾಜಸ್ಥಾನ್‌ ಮರುಮುಖಾಮುಖಿ; ಪಿಚ್‌ ರಿಪೋರ್ಟ್‌, ಹವಾಮಾನ ವರದಿ ಹೀಗಿದೆ

ಬೆಂಗಳೂರಿನಲ್ಲಿ ನಡೆದ ಕಳೆದ ಆರ್‌ಸಿಬಿ ಮತ್ತು ಪಂಜಾಬ್‌ ಕಿಂಗ್ಸ್‌ ನಡುವಣ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಹೀಗಾಗಿ ಪಂದ್ಯವನ್ನು 14 ಓವರ್‌ಗೆ ಸೀಮಿತಗೊಳಿಸಿ ಆಡಲಾಗಿತ್ತು. ಆದರೆ ಗುರುವಾರ(ಎ.24) ನಡಯಲಿರುವ ಆರ್‌ಸಿಬಿ ಮತ್ತು ರಾಜಸ್ಥಾನ್‌ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ನಿರೀಕ್ಷೆಯಿಲ್ಲ.

ಬೆಂಗಳೂರು: ಮನೆಯಂಗಣದಲ್ಲಿ ಹ್ಯಾಟ್ರಿಕ್​ ಸೋಲು ಕಂಡಿರುವ ರಾಯಲ್​ ಚಾಲೆಂಜರ್ಸ್‌ ಬೆಂಗಳೂರು(RCB vs RR) ತಂಡ ಇದೀಗ ಮತ್ತೊಂದು ತವರಿನ ಪಂದ್ಯವನ್ನಾಡಲು ಸಜ್ಜಾಗಿದೆ. ಐಪಿಎಲ್(IPL 2025)​ 18ನೇ ಆವೃತ್ತಿಯಲ್ಲಿ ಗುರುವಾರ ರಾಜಸ್ಥಾನ್‌ ರಾಯಲ್ಸ್‌​ ಎದುರು ಮರುಮುಖಾಮುಖಿ ಆಗಲಿದೆ. ರಾಜಸ್ಥಾನ್‌ಗೆ ಇದು ಸೇಡಿನ ಪಂದ್ಯವಾಗಿದೆ. ಮೊದಲ ಮುಖಾಮುಖಿಯಲ್ಲಿ ತವರಿನಲ್ಲಿ ಅನುಭವಿಸಿರುವ ಸೋಲಿಗೆ ಸೇಡು ತೀರಿಸಿಕೊಳ್ಳುವುದು ರಿಯಾನ್‌ ಪರಾಗ್‌​ ಬಳಗದ ಹಂಬಲವಾಗಿದೆ. ಈ ಪಂದ್ಯದ ಪಿಚ್‌ ರಿಪೋರ್ಟ್‌(Pitch Report), ಹವಾಮಾನ ವರದಿ ಮತ್ತು ಸಂಭಾವ್ಯ ತಂಡಗಳ ಮಾಹಿತಿ ಹೀಗಿದೆ.

ಪಿಚ್‌ ರಿಪೋರ್ಟ್‌

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರಿಕೆಟ್‌ ಸ್ಟೇಡಿಯಂನ(M Chinnaswamy Stadium) ಪಿಚ್‌ ಸಂಪೂರ್ಣ ಬ್ಯಾಟಿಂಗ್‌ ಸ್ನೇಹಿಯಾಗಿದೆ. ಹೀಗಾಗಿ ಪಂದ್ಯದಲ್ಲಿ ರನ್‌ ಮಳೆ ನಿರೀಕ್ಷೆ ಮಾಡಲಾಗಿದೆ. ಈ ಮೈದಾನದಲ್ಲಿ ಚೇಸಿಂಗ್‌ ನಡೆಸಿದ ತಂಡಗಳೇ ಹೆಚ್ಚು ಗೆಲುವು ಸಾಧಿಸಿದೆ. ಹಾಲಿ ಆವೃತ್ತಿಯಲ್ಲಿ ಇಲ್ಲಿ ಆಡಿದ ಮೂರು ಪಂದ್ಯಗಳಲ್ಲಿಯೂ ಚೇಸಿಂಗ್‌ ನಡೆಸಿದ ತಂಡಗಳೆ ಗೆಲುವು ಸಾಧಿಸಿದೆ. ಹೀಗಾಗಿ ಟಾಸ್‌ ಕೂಡ ನಿರ್ಣಾಯಕ.

ಹವಾಮಾನ ವರದಿ

ಬೆಂಗಳೂರಿನಲ್ಲಿ ನಡೆದ ಕಳೆದ ಆರ್‌ಸಿಬಿ ಮತ್ತು ಪಂಜಾಬ್‌ ಕಿಂಗ್ಸ್‌ ನಡುವಣ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಹೀಗಾಗಿ ಪಂದ್ಯವನ್ನು 14 ಓವರ್‌ಗೆ ಸೀಮಿತಗೊಳಿಸಿ ಆಡಲಾಗಿತ್ತು. ಆದರೆ ಗುರುವಾರ(ಎ.24) ನಡಯಲಿರುವ ಆರ್‌ಸಿಬಿ ಮತ್ತು ರಾಜಸ್ಥಾನ್‌ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ನಿರೀಕ್ಷೆಯಿಲ್ಲ. ತಾಪಮಾನವು ಗರಿಷ್ಠ 36 ಡಿಗ್ರಿ ಯಿಂದ ಕನಿಷ್ಠ 22 ಡಿಗ್ರಿ ಇರಬಹುದೆಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.

ಮುಖಾಮುಖಿ

ರಾಜಸ್ಥಾನ್‌ ರಾಯಲ್ಸ್‌ ಮತ್ತು ಆರ್‌ಸಿಬಿ ಐಪಿಎಲ್‌ನಲ್ಲಿ ಇದುವರೆಗೆ 33 ಪಂದ್ಯಗಳನ್ನು ಆಡಿದ್ದು, ಈ ಪೈಕಿ ಆರ್‌ಸಿಬಿ 16 ಪಂದ್ಯ ಗೆದ್ದಿದೆ. ರಾಜಸ್ಥಾನ್‌ 14 ಪಂದ್ಯ ಜಯಿಸಿದೆ. ಮೂರು ಪಂದ್ಯ ಫಲಿತಾಂಶ ಕಂಡಿಲ್ಲ. ಈ ದಾಖಲೆ ನೋಡುವಾಗ ಆರ್‌ಸಿಬಿ ಬಲಿಷ್ಠ ಎನ್ನಲಡ್ಡಿಯಿಲ್ಲ.

ಇದನ್ನೂ ಓದಿ IPL 2025: ʻ2010ರ ರೀತಿ ಚೆನ್ನೈ ಸೂಪರ್‌ ಕಿಂಗ್ಸ್‌ ಕಮ್‌ಬ್ಯಾಕ್‌ ಮಾಡಲಿದೆʼ-ಕಾಶಿ ವಿಶ್ವನಾಥನ್‌!

ಸಂಭಾವ್ಯ ತಂಡಗಳು

ರಾಜಸ್ಥಾನ್‌ ರಾಯಲ್ಸ್‌: ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ನಿತೀಶ್ ರಾಣಾ, ರಿಯಾನ್ ಪರಾಗ್(ನಾಯಕ), ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ಯುಧ್ವಿರ್ ಸಿಂಗ್ ಚರಕ್, ಸಂದೀಪ್ ಶರ್ಮಾ.

ಆರ್‌ಸಿಬಿ: ಫಿಪ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.