ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಂದಿನ ಆರ್‌ಸಿಬಿ vs ಹೈದರಾಬಾದ್‌ ಪಂದ್ಯಕ್ಕೆ ಶೇ. 10 ರಷ್ಟು ಮಳೆ ಭೀತಿ

RCB vs SRH weather report: 5-ಓವರ್‌ಗಳ ಪಂದ್ಯವನ್ನು ನಡೆಸಲು ಎರಡೂ ತಂಡಗಳಿಗೆ ಕನಿಷ್ಠ 5 ಓವರ್‌ಗಳ ಅವಕಾಶವಿರಬೇಕು. ಮಳೆಯಿಂದಾಗಿ 5 ಓವರ್‌ಗಳ ಪಂದ್ಯವೂ ಸಾಧ್ಯವಾಗದಿದ್ದರೆ, ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ ಮತ್ತು ಉಭಯ ತಂಡಗಳಿಗೂ ಅಂಕಗಳನ್ನು ಹಂಚಿಕೊಳ್ಳಲಾಗುತ್ತದೆ.

Chinnaswamy Stadium weather

ಬೆಂಗಳೂರು, ಮಾ. 28: ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ 19ನೇಯ ಆವೃತ್ತಿಗೆ ಇಂದು(ಮಾ.28) ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ( M Chinnaswamy Stadium)ದಲ್ಲಿ ಅದ್ದೂರಿ ಚಾಲನೆ ಸಿಗಲಿದೆ. ಉದ್ಘಾಟನ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್(RCB vs SRH weather report) ಮುಖಾಮುಖಿಯಾಗಲಿವೆ. ರಾಜ್ಯದ ಹಲವೆಡೆ(Bengaluru weather) ಮಳೆಯಾಗುತ್ತಿರುವ ಕಾರಣ ಪಂದ್ಯಕ್ಕೆ ಮಳೆ ಅಡ್ಡಿಯಾಗಬಹುದಾ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ.

ಅಕ್ಯೂವೆದರ್ ಪ್ರಕಾರ, ಪಂದ್ಯದ ಸಮಯದಲ್ಲಿ ಮೋಡ ಕವಿದಿರುವ ಸಾಧ್ಯತೆ ಶೇ. 60 ರಷ್ಟು ಇದ್ದರೂ, ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ಸುತ್ತಮುತ್ತ ವಾತಾವರಣ ಆಹ್ಲಾದಕರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಮಳೆಯಾಗುವ ಸಾಧ್ಯತೆ ಶೇ. 10 ರಷ್ಟು ಇರಲಿದೆ ಎಂದು ತಿಳಿಸಿದೆ.

ಮಳೆ ಬಂದರೂ ಆತಂಕವಿಲ್ಲ

ಪಂದ್ಯ ನಡೆಯುವ ಸಮಯದಲ್ಲಿ ಎಷ್ಟೇ ಜೋರಾಗಿ ಮಳೆ ಬಂದರೂ 15 ರಿಂದ 20 ನಿಮಿಷದೊಳಗೆ ಮತ್ತೆ ಪಂದ್ಯ ಮುಂದುವರಿಯಲು ಅವಕಾಶ ಮಾಡಿಕೊಡುವ ಸೌಲಭ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದೆ. ದಶಕದ ಹಿಂದೆ ಇಲ್ಲಿ ಅಳವಡಿಸಲಾಗಿರುವ ಸಬ್‌ ಏರ್ ಸಿಸ್ಟಂ ತಂತ್ರಜ್ಞಾನದಿಂದ ಮಳೆ ನೀರನ್ನು ಶೀಘ್ರವಾಗಿ ಹೊರಹಾಕಬಹುದು. ಮೈದಾನವನ್ನು ಪಂದ್ಯಕ್ಕೆ ಅಣಿಗೊಳಿಸಬಹುದು. ಆದ್ದರಿಂದ ಮಳೆಯಿಂದಾಗಿ ಪಂದ್ಯ ರದ್ದಾಗುವುದು ತೀರಾ ವಿರಳ. ಆದರೆ ಸತತವಾಗಿ ಮಳೆ ಹನಿಯುತ್ತಲೇ ಇದ್ದರೆ ಪಂದ್ಯ ಮುಂದುವರಿಸುವುದು ತುಸು ಕಷ್ಟ.

ಐಪಿಎಲ್‌ ಮಳೆ ನಿಯಮ(ಲೀಗ್‌ ಪಂದ್ಯಗಳಿಗೆ)

ಹೆಚ್ಚುವರಿ ಸಮಯ: ಮಳೆಯಿಂದ ತಡವಾದರೆ ಪಂದ್ಯವನ್ನು ಪೂರ್ಣಗೊಳಿಸಲು 120 ನಿಮಿಷಗಳ (2 ಗಂಟೆ) ಹೆಚ್ಚುವರಿ ಸಮಯ ಲಭ್ಯವಿರುತ್ತದೆ.

ಪಂದ್ಯದ ಓವರ್‌ಗಳು: 5-ಓವರ್‌ಗಳ ಪಂದ್ಯವನ್ನು ನಡೆಸಲು ಎರಡೂ ತಂಡಗಳಿಗೆ ಕನಿಷ್ಠ 5 ಓವರ್‌ಗಳ ಅವಕಾಶವಿರಬೇಕು. ಮಳೆಯಿಂದಾಗಿ 5 ಓವರ್‌ಗಳ ಪಂದ್ಯವೂ ಸಾಧ್ಯವಾಗದಿದ್ದರೆ, ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ ಮತ್ತು ಉಭಯ ತಂಡಗಳಿಗೂ ಅಂಕಗಳನ್ನು ಹಂಚಿಕೊಳ್ಳಲಾಗುತ್ತದೆ.

ಉಭಯ ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜಾಕೋಬ್ ಬೆಥೆಲ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ಸಿಂಗ್ ದಯಾಳ್, ಭುವನೇಶ್ವರ್ ಕುಮಾರ್, ನುವಾನ್ ಸಿಂಗ್ ದಯಾಳ್, ರಶ್ಯಾ ವೆಂಕಟ್, ಅಬ್ದೀನ್ ಸಿಂಗ್ ಅಯ್ಯರ್, ಜಾಕೋಬ್ ಡಫ್ಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡಾನ್ ಕಾಕ್ಸ್, ವಿಕ್ಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕನಿಷ್ಕ್ ಚೌಹಾಣ್.

ಇಂದಿನ ಐಪಿಎಲ್‌ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದ ಪ್ರವೇಶ ಮತ್ತು ನಿರ್ಗಮನದ ಮಾಹಿತಿ ಇಲ್ಲಿದೆ

ಸನ್‌ರೈಸರ್ಸ್ ಹೈದರಾಬಾದ್: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಅನಿಕೇತ್ ವರ್ಮಾ, ಆರ್. ಸ್ಮರನ್, ಇಶಾನ್ ಕಿಶನ್(ನಾಯಕ), ಹೆನ್ರಿಚ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೆ, ಕಮಿಂದು ಮೆಂಡಿಸ್, ಹರ್ಷಲ್ ಪಟೇಲ್, ಬ್ರೈಡನ್ ಕಾರ್ಸೆ, ಜಯದೇವ್ ಉನದ್ಕತ್, ಶಿವಾಂಗ್ ಮಾಲಿಂಗ, ಎಶಾನ್ ಮಾಲಿಂಗ, ಎಶಾನ್ ಮಾಲಿಂಗ, ಸ. ಹುಸೇನ್, ಓಂಕಾರ್ ತರ್ಮಲೆ, ಅಮಿತ್ ಕುಮಾರ್, ಪ್ರಫುಲ್ ಹಿಂಗೆ, ಕ್ರೇನ್ಸ್ ಫುಲೆಟ್ರಾ, ಲಿಯಾಮ್ ಲಿವಿಂಗ್ಸ್ಟೋನ್, ಶಿವಂ ಮಾವಿ, ಜ್ಯಾಕ್ ಎಡ್ವರ್ಡ್ಸ್, ಪ್ಯಾಟ್ ಕಮ್ಮಿನ್ಸ್.