ಡ್ರೆಸ್ಸಿಂಗ್ ರೂಮ್‌ನಲ್ಲಿ ಗಂಭೀರ್-ರೋಹಿತ್ ನಡುವೆ ವಾಗ್ವಾದ; ಫೋಟೊ ವೈರಲ್
Rohit Sharma & Gautam Gambhir: ಡ್ರೆಸ್ಸಿಂಗ್ ರೂಮ್ ಸಂಭಾಷಣೆಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಮುಖ್ಯ ಕೋಚ್ ಗೌತಮ್ ಗಂಭೀರ್ ರೋಹಿತ್ ಶರ್ಮಾ ಅವರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಗಂಭೀರ್ ತಮ್ಮ ಸ್ಟೈಕ್ ಭಂಗಿಯನ್ನು ಕಾಯ್ದುಕೊಂಡು ಉತ್ಸಾಹಭರಿತರಾಗಿ ಕಾಣುತ್ತಿದ್ದರು.
-
ರಾಂಚಿ, ಡಿ.1: ಭಾನುವಾರ ನಡೆದ ಭಾರತ vs ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯದಲ್ಲಿ ಡ್ರೆಸ್ಸಿಂಗ್ ರೂಮ್‌ನಲ್ಲಿ ನಡೆದ ಸಂವಾದದ ವೇಳೆ ರೋಹಿತ್ ಶರ್ಮಾ ಮತ್ತು ಗೌತಮ್ ಗಂಭೀರ್(Rohit Sharma & Gautam Gambhir) ನಡುವೆ ವಾಗ್ವಾದ ನಡೆದಂತೆ ಕಂಡುಬಂದಿತು. ಇದಕ್ಕೆ ಸಂಬಂಧಿಸಿದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರು ಕಲವು ಕಮೆಂಟ್ ಮಾಡಲಾರಂಭಿಸಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಪ್ರಾಬಲ್ಯದಿಂದ ಮೆನ್ ಇನ್ ಬ್ಲೂ ತಂಡ ರೋಮಾಂಚಕ ಗೆಲುವು ಸಾಧಿಸಿತು. ಈ ಜೋಡಿ ಮತ್ತೊಂದು ಶತಕದ ಜೊತೆಯಾಟವನ್ನು ಸ್ಥಾಪಿಸಿತು ಮತ್ತು ಅವರ ಫಾರ್ಮ್ ಅಥವಾ ಆಟದ ಸಮಯದ ಬಗ್ಗೆ ಯಾವುದೇ ಆತಂಕಗಳನ್ನು ನಿವಾರಿಸಿತು.
ಡ್ರೆಸ್ಸಿಂಗ್ ರೂಮ್ ಸಂಭಾಷಣೆಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಮುಖ್ಯ ಕೋಚ್ ಗೌತಮ್ ಗಂಭೀರ್ ರೋಹಿತ್ ಶರ್ಮಾ ಅವರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಗಂಭೀರ್ ತಮ್ಮ ಸ್ಟೈಕ್ ಭಂಗಿಯನ್ನು ಕಾಯ್ದುಕೊಂಡು ಉತ್ಸಾಹಭರಿತರಾಗಿ ಕಾಣುತ್ತಿದ್ದರು. ಚರ್ಚೆ ಕೇವಲ ಡ್ರೆಸ್ಸಿಂಗ್ ಕೋಣೆಗೆ ಮಾತ್ರ ಸೀಮಿತವಾಗಿರಲಿಲ್ಲ. ಪಂದ್ಯದ ನಂತರ ತಂಡದ ಹೋಟೆಲ್ ಲಾಬಿಯಲ್ಲಿ ಗಂಭೀರ್ ಮತ್ತು ರೋಹಿತ್ ಮಾತುಕತೆಯಲ್ಲಿ ಕಾಣಿಸಿಕೊಂಡರು. ಸಂಭಾಷಣೆಯ ಸ್ವರೂಪ ಸ್ವಾಭಾವಿಕವಾಗಿ ಖಾಸಗಿಯಾಗಿದೆ ಆದರೆ ಗಂಭೀರ್ ಅವರ ಮುಖಭಾವ ಮತ್ತು ರೋಹಿತ್ ಅವರ ಪ್ರತಿಕ್ರಿಯೆಯನ್ನು ನೋಡಿದರೆ ಭಾರತೀಯ ಡ್ರೆಸ್ಸಿಂಗ್ ಕೋಣೆಯಲ್ಲಿ ಎಲ್ಲವೂ ಚೆನ್ನಾಗಿಲ್ಲ ಎಂದು ತೋರುತ್ತದೆ.
Everything alright with Indian dressing room? #RohitSharna #INDvSA #Gambhir pic.twitter.com/rsdiHRUr3m
— Sunny Daud (@sunny_daud24036) November 30, 2025
ಪಂದ್ಯದಲ್ಲಿ ರೋಹಿತ್ 51 ಎಸೆತಗಳಿಂದ 5 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 57 ರನ್ ಬಾರಿಸಿದರು. ಇದೇ ವೇಳೆ 3 ಸಿಕ್ಸರ್ ಸಿಡಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡರು. ರೋಹಿತ್ ಶರ್ಮ ಸದ್ಯ 352* ಸಿಕ್ಸರ್ ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ. ಶಾಹೀದ್ ಅಫ್ರೀದಿ 351 ಸಿಕ್ಸರ್‌ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ IND vs SA: ಬೃಹತ್ ಮೊತ್ತದ ಮೇಲಾಟದಲ್ಲಿ ಹೋರಾಡಿ ಸೋತ ಹರಿಣ ಪಡೆ
ಏಕದಿನದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು
352* - ರೋಹಿತ್ ಶರ್ಮಾ
351 - ಶಾಹಿದ್ ಅಫ್ರಿದಿ
331 - ಕ್ರಿಸ್ ಗೇಲ್
270 - ಸನತ್ ಜಯಸೂರ್ಯ
229 - ಎಂಎಸ್ ಧೋನಿ
ಒಟ್ಟಾರೆಯಾಗಿ 503 ಪಂದ್ಯಗಳ 536 ಇನಿಂಗ್ಸ್‌ಗಳಲ್ಲಿ ಕಣಕ್ಕಿಳಿದಿರುವ ರೋಹಿತ್ ಖಾತೆಯಲ್ಲಿ ಒಟ್ಟಾರೆಯಾಗಿ 645 ಸಿಕ್ಸರ್‌ಗಳಿವೆ. ಇನ್ನು 5 ಸಿಕ್ಸರ್ ಸಿಡಿಸಿದರೆ 650ರ ಗಡಿ ದಾಟಿದ ಏಕೈಕ ಬ್ಯಾಟರ್ ಎಂಬ ಶ್ರೇಯ ಅವರದ್ದಾಗಲಿದೆ. ತವರಿನಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ 5,000 ರನ್ ಗಳಿಸಿದ ಸಾಧನೆ ಮಾಡಲು ರೋಹಿತ್‌ಗೆ ಇನ್ನು 76 ರನ್ ಬೇಕಿದೆ. ಇನ್ನುಳಿದ ಎರಡು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದರೆ ಈ ದಾಲೆಯನ್ನು ಬರೆಯಬಹುದು.