ಏಷ್ಯಾಕಪ್‌ಗೂ ಮುನ್ನ ಫಾರ್ಮ್ ಕಂಡುಕೊಂಡ ರಿಂಕು ಸಿಂಗ್; ಯುಪಿ ಟಿ20 ಲೀಗ್‌ನಲ್ಲಿ ಸ್ಫೋಟಕ ಶತಕ
ಅಬ್ಬರದ ಬ್ಯಾಟಿಂಗ್ ನಡೆಸಿದ ನಾಯಕ ರಿಂಕು ಸಿಂಗ್ ಇನ್ನೊಂದು ಓವರ್ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು. 48 ಎಸೆತಗಳಲ್ಲಿ 108 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರ ಈ ಅಬ್ಬರದ ಬ್ಯಾಟಿಂಗ್ ವೇಳೆ 7 ಬೌಂಡರಿ ಮತ್ತು 8 ಸಿಕ್ಸರ್ ಸಿಡಿಯಿತು. 8 ಸಿಕ್ಸರ್‌ಗಳಲ್ಲಿ, 5 ಸಿಕ್ಸರ್‌ಗಳು ಅವರ ಕೊನೆಯ ಆರು ಎಸೆತಗಳಲ್ಲಿ ಬಂದವು.


ಲಕ್ನೋ: ಏಷ್ಯಾಕಪ್ ಟಿ20(Asia Cup 2025) ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆ ಭಾರತ ತಂಡದ ಸ್ಫೋಟಕ ಬ್ಯಾಟರ್ ರಿಂಕು ಸಿಂಗ್(Rinku Singh) ಅವರು ಯುಪಿ ಟಿ20 ಲೀಗ್‌ನಲ್ಲಿ(UP T20 League) ಅದ್ಭುತ ಬ್ಯಾಟಿಂಗ್ ಮೂಲಕ ಶತಕ ಬಾರಿಸಿ ಸಂಭ್ರಮಿಸಿದ್ದಾರೆ. ಏಷ್ಯಾಕಪ್‌ನಲ್ಲಿ ರಿಂಕು ಕೂಡ ಸ್ಥಾನ ಪಡೆದಿರುವ ಕಾರಣ ಅವರ ಈ ಪ್ರದರ್ಶನ ಪ್ಲೇಯಿಂಗ್ ಇಲೆವೆನ್ ರೇಸ್‌ನಲ್ಲಿ ಕಾಣಿಸಿಕೊಳ್ಳುವಂತೆ ಮಾಡಿದೆ.
ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 168 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟುವ ಸಮಯದಲ್ಲಿ ಮೀರತ್ ತೀವ್ರ ಸಂಕಷ್ಟದಲ್ಲಿ ಸಿಲುಕಿತು. 8 ನೇ ಓವರ್‌ನಲ್ಲಿ ಕೇವಲ 38 ರನ್‌ಗಳಿಗೆ 4 ವಿಕೆಟ್‌ಗಳು ಬಿದ್ದಿದ್ದರಿಂದ, ಮೀರತ್ ತಂಡ ಸೋಲಿನ ಭೀತಿಗೆ ಸಿಲುಕಿತು.
ಈ ವೇಳೆ ಅಬ್ಬರದ ಬ್ಯಾಟಿಂಗ್ ನಡೆಸಿದ ನಾಯಕ ರಿಂಕು ಸಿಂಗ್ ಇನ್ನೊಂದು ಓವರ್ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು. 48 ಎಸೆತಗಳಲ್ಲಿ 108 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರ ಈ ಅಬ್ಬರದ ಬ್ಯಾಟಿಂಗ್ ವೇಳೆ 7 ಬೌಂಡರಿ ಮತ್ತು 8 ಸಿಕ್ಸರ್ ಸಿಡಿಯಿತು. 8 ಸಿಕ್ಸರ್‌ಗಳಲ್ಲಿ, 5 ಸಿಕ್ಸರ್‌ಗಳು ಅವರ ಕೊನೆಯ ಆರು ಎಸೆತಗಳಲ್ಲಿ ಬಂದವು, ಅಲ್ಲಿ ಅವರು ಕ್ರಮವಾಗಿ 18 ಮತ್ತು 19 ನೇ ಓವರ್‌ನಲ್ಲಿ ಅಬ್ದುಲ್ ರೆಹಮಾನ್ ಮತ್ತು ವಾಸು ವ್ಯಾಟ್ಸ್ ಅವರನ್ನು ಬೆಂಡೆತ್ತಿದರು.
𝙍𝙄𝙉𝙆𝙐 𝙎𝙀𝙏𝙎 𝙀𝙆𝘼𝙉𝘼 𝙊𝙉 𝙁𝙄𝙍𝙀, 𝙐𝙋 𝙁𝙄𝙍𝙀 𝘽𝙍𝙄𝙂𝘼𝘿𝙀 𝘾𝘼𝙇𝙇𝙀𝘿 𝙄𝙉
— UP T20 League (@t20uttarpradesh) August 21, 2025
Watch live on @SonyLIV and @SonySportsNetwk. #UPT20League #ANAXUPT20League #KhiladiYahanBantaHai #MMvsGGL [ Rinku Singh ] pic.twitter.com/yvxZbpKNcI
ಇದು ರಿಂಕು ಸಿಂಗ್ ಅವರ ವೃತ್ತಿಜೀವನದ ಮೊದಲ ಟಿ20 ಶತಕವಾಗಿದೆ. ಇತ್ತೀಚಿನ ದಿನಗಳಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಏಷ್ಯಾಕಪ್‌ಗೆ ಕೆಲವೇ ಇನ ಬಾಕಿ ಇರುವಾಗ ಅವರ ಈ ಪ್ರದರ್ಶನ ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.
ಇದನ್ನೂ ಓದಿ Asia Cup 2025: ಭಾರತ-ಪಾಕಿಸ್ತಾನ ಪಂದ್ಯದ ಬಗ್ಗೆ ಸ್ಪಷ್ಟತೆ ಕೊಟ್ಟ ಕೇಂದ್ರ ಸರ್ಕಾರ!