Gouher Sultana: ಭಾರತದ ಎಡಗೈ ಸ್ಪಿನ್ನರ್ ಗೌಹರ್ ಸುಲ್ತಾನ ಕ್ರಿಕೆಟ್ ನಿವೃತ್ತಿ
2008ರಲ್ಲಿ ಏಕದಿನ ಮತ್ತು ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಗೌಹರ್ ಸುಲ್ತಾನ ಭಾರತ ಪರ ಒಟ್ಟು 50 ಏಕದಿನ ಮತ್ತು 37 ಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 66, ಟಿ20ಯಲ್ಲಿ 29 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಏಕದಿನದಲ್ಲಿ 4 ರನ್‌ಗೆ 4 ವಿಕೆಟ್ ಕಿತ್ತದ್ದು ಅವರ ವೈಯಕ್ತಿಕ ಅತ್ಯತ್ತಮ ಬೌಲಿಂಗ್ ಸಾಧನೆಯಾಗಿದೆ.


ನವದೆಹಲಿ: ಭಾರತ ಮಹಿಳಾ ತಂಡದ ಎಡಗೈ ಸ್ಪಿನ್ನರ್ ಗೌಹರ್ ಸುಲ್ತಾನ(Gouher Sultana) ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ವೈಟ್-ಬಾಲ್ ಮಾದರಿಗಳಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದ ಸುಲ್ತಾನ ತಮ್ಮ 17 ವರ್ಷಗಳ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದರು. ಮಿಥಾಲಿ ರಾಜ್ ನಾಯಕತ್ವದ ತಂಡದಲ್ಲಿ ಗೌಹರ್ ಸುಲ್ತಾನ ತಂಡದ ಪ್ರಮುಖ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದರು.
2008ರಲ್ಲಿ ಏಕದಿನ ಮತ್ತು ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಗೌಹರ್ ಸುಲ್ತಾನ ಭಾರತ ಪರ ಒಟ್ಟು 50 ಏಕದಿನ ಮತ್ತು 37 ಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 66, ಟಿ20ಯಲ್ಲಿ 29 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಏಕದಿನದಲ್ಲಿ 4 ರನ್‌ಗೆ 4 ವಿಕೆಟ್ ಕಿತ್ತದ್ದು ಅವರ ವೈಯಕ್ತಿಕ ಅತ್ಯತ್ತಮ ಬೌಲಿಂಗ್ ಸಾಧನೆಯಾಗಿದೆ. ಗೌಹರ್ ಕೊನೆಯ ಬಾರಿಗೆ ಭಾರತ ಪರ 2014 ರಲ್ಲಿ ಪಾಕಿಸ್ತಾನ ವಿರುದ್ಧ ಟಿ 20 ಐ ಆಡಿದ್ದರು. 50 ಓವರ್‌ಗಳ ಸ್ವರೂಪದಲ್ಲಿ, ಅವರು ಕೊನೆಯ ಬಾರಿಗೆ 2014 ರಲ್ಲಿ ಶ್ರೀಲಂಕಾ ವಿರುದ್ಧ ಆಡಿದ್ದರು. ಇದಾದ ಬಳಿಕ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.
37 ವರ್ಷದ ಗೌಹರ್ ಸುಲ್ತಾನ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ನಿವೃತ್ತಿಯ ಸುದ್ದಿಯನ್ನು ಪ್ರಕಟಿಸಿದರು. "ವರ್ಷಗಳ ಕಾಲ ಹೆಮ್ಮೆ, ಉತ್ಸಾಹ ಮತ್ತು ಉದ್ದೇಶದೊಂದಿಗೆ ಭಾರತೀಯ ಜೆರ್ಸಿಯನ್ನು ಧರಿಸಿದ ನಂತರ, ನನ್ನ ಕ್ರಿಕೆಟ್ ಪ್ರಯಾಣದ ಅತ್ಯಂತ ಭಾವನಾತ್ಮಕ ಟಿಪ್ಪಣಿಯನ್ನು ಬರೆಯುವ ಸಮಯ ಬಂದಿದೆ. ನೆನಪುಗಳಿಂದ ತುಂಬಿದ ಹೃದಯ ಮತ್ತು ಕೃತಜ್ಞತೆಯಿಂದ ತುಂಬಿದ ಕಣ್ಣುಗಳೊಂದಿಗೆ, ನಾನು ಎಲ್ಲಾ ರೀತಿಯ ಆಟಗಳಿಂದ ನಿವೃತ್ತಿ ಘೋಷಿಸುತ್ತೇನೆ" ಎಂದು ಅವರು ಬರೆದಿದ್ದಾರೆ.
"ವಿಶ್ವಕಪ್‌ಗಳು, ವಿದೇಶಿ ಪ್ರವಾಸಗಳು ಮತ್ತು ಕೌಶಲ್ಯ ಮತ್ತು ಉತ್ಸಾಹ ಎರಡನ್ನೂ ಪರೀಕ್ಷಿಸಿದ ಯುದ್ಧಗಳಲ್ಲಿ ಭಾರತವನ್ನು ಅತ್ಯುನ್ನತ ಮಟ್ಟದಲ್ಲಿ ಪ್ರತಿನಿಧಿಸಿದ್ದು ನನ್ನ ಜೀವನದ ಅತ್ಯಂತ ದೊಡ್ಡ ಗೌರವವಾಗಿದೆ" ಎಂದು ಅವರು ಹೇಳಿದರು.
"ಕ್ರಿಕೆಟ್ ಯಾವಾಗಲೂ ನನ್ನ ಮನೆಯಂತಿರುತ್ತದೆ. ಆಟಗಾರ್ತಿಯಾಗಿ ನನ್ನ ವೃತ್ತಿಜೀವನಕ್ಕೆ ತೆರೆ ಬಿದ್ದರೂ, ಆಟದ ಮೇಲಿನ ನನ್ನ ಪ್ರೀತಿ ಎಂದಿಗಿಂತಲೂ ಹೆಚ್ಚು ಪ್ರಕಾಶಮಾನವಾಗಿದೆ. ನನ್ನನ್ನು ನಾನಾಗಿ ಮಾಡಿದ ಆಟಕ್ಕೆ ಸ್ಫೂರ್ತಿ, ಮಾರ್ಗದರ್ಶನ ಮತ್ತು ಸೇವೆ ಸಲ್ಲಿಸಲು ಕ್ರೀಡೆಗೆ ಹೊಸ ರೀತಿಯಲ್ಲಿ ಕೊಡುಗೆ ನೀಡಲು ನಾನು ಎದುರು ನೋಡುತ್ತಿದ್ದೇನೆ. ಇದು ವಿದಾಯವಲ್ಲ. ಇದು ಕೇವಲ ಒಂದು ಸುವರ್ಣ ಅಧ್ಯಾಯದ ಅಂತ್ಯ," ಎಂದು ಗೌಹರ್ ಹೇಳಿದರು.
ದೇಶೀಯ ಕ್ರಿಕೆಟ್‌ನಲ್ಲಿ ಅವರು ಹೈದರಾಬಾದ್, ಪುದುಚೇರಿ, ರೈಲ್ವೇಸ್ ಮತ್ತು ಬಂಗಾಳ ಪರ ಆಡಿದ್ದರು. ಮಹಿಳಾ ಪ್ರೀಮಿಯರ್ ಲೀಗ್ (WPL) ನ ಎರಡು ಋತುಗಳಲ್ಲಿ ಅವರು ಯುಪಿ ವಾರಿಯರ್ಜ್ ಪರ ಕೆಲವು ಪಂದ್ಯಗಳನ್ನು ಆಡಿದ್ದರು.
ಇದನ್ನೂ ಓದಿ BCCI Central Contract: ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಗೆ ಹೊಸತಾಗಿ ಮೂವರ ಸೇರ್ಪಡೆ