ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bronco test: ಬಿಸಿಸಿಐನ ಹೊಸ ಫಿಟ್ನೆಸ್‌ ಮಾನದಂಡ; ಏನಿದು ಬ್ರಾಂಕೊ ಟೆಸ್ಟ್‌?

ಬ್ರಾಂಕೊ ಟೆಸ್ಟ್‌ 20, 40, 60 ಮೀಟರ್‌ಗಳ ಹಲವು ಷಟಲ್‌ ರನ್‌(ಎರಡು ಅಥವಾ ಹೆಚ್ಚಿನ ಬಿಂದುಗಳ ನಡುವೆ ಹಿಂದಕ್ಕೆ ಮತ್ತು ಮುಂಕ್ಕೆ ಓಡುವುದು) ಒಳಗೊಂಡಿತ್ತದೆ. ಇದರಲ್ಲಿ1,200ಮೀ. ಓಟವನ್ನು ವಿಶ್ರಾಂತಿ ಇಲ್ಲದೆ 6 ನಿಮಿಷಗಳ ಒಳಗೆ ಪೂರೈಸಬೇಕಾಗುತ್ತೆ. ಒಂದು ರೀತಿಯಲ್ಲಿ ಸೇನಾ ಮತ್ತು ಪೊಲೀಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಓಡಿದಂತೆ.

ಟೀಮ್‌ ಇಂಡಿಯಾ ಕ್ರಿಕೆಟಿಗರ ಫಿಟ್ನೆಸ್‌ಗೆ ಇನ್ನು ಬ್ರಾಂಕೊ ಟೆಸ್ಟ್‌

Abhilash BC Abhilash BC Aug 22, 2025 9:41 AM

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಫಿಟ್‌ನೆಸ್ ಮಟ್ಟವನ್ನು ನಿರ್ಧರಿಸಲು‌ ಇದುವರೆಗೆ ಯೋ-ಯೋ ಟೆಸ್ಟ್ ಅನ್ನು ಬಳಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಯೋ-ಯೋ ಟೆಸ್ಟ್‌(Yo-Yo test) ಜತೆಗೆ ಉನ್ನತ ಮಟ್ಟದ ಫಿಟ್ನೆಸ್‌ಗಾಗಿ ಬ್ರಾಂಕೊ ಟೆಸ್ಟ್‌(Bronco test) ಅಳವಡಿಸಿಕೊಳ್ಳಲು ಬಿಸಿಸಿಐ(BCCI) ನಿರ್ಧರಿಸಿದೆ. ಭಾರತ ತಂಡದ ಸ್ಟ್ರೆಂತ್‌ ಮತ್ತು ಕಂಡೀಷನಿಂಗ್‌ ಕೋಚ್‌ ಆಂಡ್ರಿಯನ್‌ ಲೆ ರೌಕ್ಸ್‌ ಸಲಹೆಯ ಮೇರೆಗೆ ರಗ್ಬಿ ಮಾದರಿಯ ಬ್ರಾಂಕೊ ಟೆಸ್ಟ್‌ ಜಾರಿಗೆ ತರಲಾಗುತ್ತಿದೆ. ಏನಿದು ಬ್ರಾಂಕೊ ಟೆಸ್ಟ್‌?, ಯೋ-ಯೋ ಟೆಸ್ಟ್‌ಗಿಂತ ಇದು ಹೇಗೆ ವಿಭಿನ್ನ? ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಇಲ್ಲಿದೆ.

ಬ್ರಾಂಕೊ ಟೆಸ್ಟ್‌ ಹೇಗೆ ಮಾಡಲಾಗುತ್ತೆ?

ಬ್ರಾಂಕೊ ಟೆಸ್ಟ್‌ 20, 40, 60 ಮೀಟರ್‌ಗಳ ಹಲವು ಷಟಲ್‌ ರನ್‌(ಎರಡು ಅಥವಾ ಹೆಚ್ಚಿನ ಬಿಂದುಗಳ ನಡುವೆ ಹಿಂದಕ್ಕೆ ಮತ್ತು ಮುಂದಕ್ಕೆ ಓಡುವುದು) ಒಳಗೊಂಡಿತ್ತದೆ. ಇದರಲ್ಲಿ1,200ಮೀ. ಓಟವನ್ನು ವಿಶ್ರಾಂತಿ ಇಲ್ಲದೆ 6 ನಿಮಿಷಗಳ ಒಳಗೆ ಪೂರೈಸಬೇಕಾಗುತ್ತೆ. ಒಂದು ರೀತಿಯಲ್ಲಿ ಸೇನಾ ಮತ್ತು ಪೊಲೀಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಓಡಿದಂತೆ.

ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಹಲವಾರು ಭಾರತೀಯ ಆಟಗಾರರು ಈಗಾಗಲೇ ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಪರೀಕ್ಷೆಗೆ ಒಳಗಾಗಿದ್ದಾರೆ. ಪ್ರಸ್ತುತ ಇದನ್ನು ಫಿಟ್‌ನೆಸ್‌ನ ಪ್ರಮಾಣಿತ ಅಳತೆಯಾಗಿ ಪರೀಕ್ಷಿಸಲಾಗುತ್ತಿದೆ.

ಯೋ-ಯೋ ಪರೀಕ್ಷೆಯನ್ನು 2017ರಲ್ಲಿ ಪರಿಚಯಿಸಲಾಯಿತು. ಇದನ್ನು ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಮಾಜಿ ಫಿಟ್ನೆಸ್‌ ತರಬೇತುದಾರ ಶಂಕರ್ ಬಸು ಪರಿಚಯಿಸಿದ್ದರು. ಈ ಪರೀಕ್ಷೆಯು 20 ಮೀಟರ್ ಅಂತರದಲ್ಲಿ ಇರಿಸಲಾದ ಎರಡು ಕೋನ್‌ಗಳ ನಡುವೆ ಓಡುವುದನ್ನು ಒಳಗೊಂಡಿರುತ್ತದೆ. ಪ್ರತಿ ಹಂತದಲ್ಲಿ ವೇಗ ಹೆಚ್ಚಾಗುತ್ತದೆ. ಪ್ರತಿ 40 ಮೀಟರ್ ಓಟದ ನಂತರ ಆಟಗಾರರಿಗೆ 10 ಸೆಕೆಂಡುಗಳ ಚೇತರಿಕೆಯ ಅವಧಿಯನ್ನು ಅನುಮತಿಸಲಾಗುತ್ತದೆ. ಉತ್ತೀರ್ಣರಾಗಲು, ಕನಿಷ್ಠ 17.1 ಸ್ಕೋರ್ ಅಗತ್ಯವಿದೆ.

ಇದನ್ನೂ ಓದಿ IND vs PAK: ಬಿಸಿಸಿಐಗೆ ರಾಷ್ಟ್ರೀಯ ಹಿತಾಸಕ್ತಿಗಿಂತಲೂ ಪಾಕ್‌ ವಿರುದ್ಧದ ಪಂದ್ಯ ಮುಖ್ಯ; ಆದಿತ್ಯ ಠಾಕ್ರೆ