ಲಖನೌ, ಎ.27: ಎಂಟು ಪಂದ್ಯಗಳಲ್ಲಿ ಕೇವಲ ಎರಡು ಗೆಲುವುಗಳನ್ನು ಕಂಡ ರಿಷಭ್ ಪಂತ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್, 10 ತಂಡಗಳ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) 2026 ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತಲುಪಿದೆ. ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್(LSG vs KKR) (ಕೆಕೆಆರ್) ವಿರುದ್ಧದ ಪಂದ್ಯದಲ್ಲಿ ಲಖನೌ ತಂಡ ಸೂಪರ್ ಓವರ್‌ನಲ್ಲಿ ಸೋಲು ಕಂಡಿತ್ತು. ಸೋಲಿನ ನಂತರ ಮಾತನಾಡಿದ ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್(Rishabh Pant), ತಮ್ಮ ತಂಡಕ್ಕೆ "ವಿರಾಮ ಬೇಕು" ಎಂದು ಹೇಳುವ ಮೂಲಕ ಒತ್ತಡವನ್ನು ಒಪ್ಪಿಕೊಂಡರು.
"ನೋಡಿ, ನಮಗೆ ಖಂಡಿತವಾಗಿಯೂ ವಿರಾಮ ಬೇಕು ಎಂದು ನಾನು ಭಾವಿಸುತ್ತೇನೆ. ನಾವು ರಿಫ್ರೆಶ್ ಆಗುತ್ತೇವೆ ಎಂದು ನಾನು ಭಾವಿಸುತ್ತೇನೆ. ಯಾವಾಗಲೂ ಒತ್ತಡ ಇರುತ್ತದೆ, ಮತ್ತು ಇದು ಯಾವಾಗಲೂ ಒತ್ತಡದ ಆಟವಾಗಿರುತ್ತದೆ, ಆದರೆ ಅದೇ ಸಮಯದಲ್ಲಿ, ನಾವು ಉತ್ತರಗಳನ್ನು ಹುಡುಕಬೇಕು. ಪ್ರತಿಯೊಬ್ಬರು ಜವಾಬ್ದಾರಿಯನ್ನು ತೆಗೆದುಕೊಳ್ಳಿ" ಎಂದು ಪಂತ್ ಪಂದ್ಯದ ನಂತರದ ಪ್ರಸ್ತುತಿ ಸಮಾರಂಭದಲ್ಲಿ ಹೇಳಿದರು.
ಸೂಪರ್ ಓವರ್‌ನಲ್ಲಿ ಸುನಿಲ್ ನರೈನ್ ಅವರನ್ನು ಎದುರಿಸಲು ಫಾರ್ಮ್‌ನಲ್ಲಿಲ್ಲದ ನಿಕೋಲಸ್ ಪೂರನ್ ಅವರನ್ನು ಕಳುಹಿಸುವ ಮೂಲಕ ಪಂತ್ ಅನಿರೀಕ್ಷಿತ ಕರೆ ನೀಡಿದರು. ಇದರ ಪರಿಣಾಮವಾಗಿ ತಂಡ ಸೋಲು ಕಂಡಿತು.
ಪೂರನ್ ಆಯ್ಕೆ ಬಗ್ಗೆ ಬಗ್ಗೆ ಸ್ಪಷ್ಟನೆ ನೀಡಿದ ಪಂತ್, "ನಾವು ಒಂದು ಗುಂಪಾಗಿ ಚರ್ಚೆ ನಡೆಸಿದೆವು, ಆಗ ಬಂದ ಹೆಸರು ಪೂರನ್. ಅವರು ಅತ್ಯುತ್ತಮ ಫಾರ್ಮ್ ಕಳೆದುಕೊಂಡಿದ್ದರೂ ಈ ರೀತಿಯ ಕಠಿಣ ಪರಿಸ್ಥಿತಿಯಲ್ಲಿ ಆಟಗಾರನನ್ನು ನಂಬಬೇಕು. ಅವರು ಮುಂದಿನ ಪಂದ್ಯಗಳಲ್ಲಿ ಫಾರ್ಮ್‌ಗೆ ಮರಳುವ ವಿಶ್ವಾಸ ನನಗಿದೆ" ಎಂದರು.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತಾ 7 ವಿಕೆಟ್‌ಗೆ 155 ರನ್ ಕಲೆಹಾಕಿತು. ರಿಂಕು ಸಿಂಗ್(ಔಟಾಗದೆ 83) ಕೊನೆ ಓವರ್‌ನಲ್ಲಿ ದಿಗ್ವೇಶ್‌ರ ಸತತ 4 ಎಸೆತಗಳಲ್ಲಿ ಸಿಕ್ಸರ್ ಬಾರಿಸಿ ತಂಡಕ್ಕೆ ಆಸರೆಯಾದರು. ಮೊಹ್ಸಿನ್ ಖಾನ್ 23 ರನ್ ನೀಡಿ 5 ವಿಕೆಟ್ ಕಿತ್ತರು.
DC vs RCB: ಇಂದಿನ ಆರ್‌ಸಿಬಿ vs ಡೆಲ್ಲಿ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಭೀತಿ ಇದೆಯೇ?
ಸಣ್ಣ ಮೊತ್ತವನ್ನು ಬೆನ್ನಟ್ಟಿದ ಲಖನೌ ಉತ್ತಮ ಆರಂಭ ಪಡೆದು ಗೆಲುವಿನತ್ತ ಮುನ್ನಡೆಯುತ್ತಿತ್ತು. ಆದರೆ ಆ ಬಳಿಕ ನಾಟಕೀಯ ಕುಸಿತ ಕಂಡು ಬ್ಯಾಟಿಂಗ್ ವೈಫಲ್ಯ ಅನುಭವಿಸಿ 8 ವಿಕೆಟ್‌ಗೆ 155 ರನ್ ಗಳಿಸಿ ಪಂದ್ಯ ಟೈ ಮಾಡಿಕೊಂಡಿತು. ರಿಷಭ್ 42, ಮಾರ್ಕ್‌ರಮ್ 31 ರನ್ ಗಳಿಸಿದರು. ಕೊನೆ ಎಸೆತಕ್ಕೆ 7 ರನ್ ಬೇಕಿದ್ದಾಗ ಶಮಿ ಸಿಕ್ಸರ್ ಸಿಡಿಸಿ ಪಂದ್ಯ ಟೈ ಮಾಡಿಕೊಂಡರು.
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಲಖನೌ 3 ಎಸೆತದಲ್ಲಿ ಕೇವಲ 1 ರನ್ ಗಳಿಸಿ 2 ವಿಕೆಟ್(ಆಲೌಟ್) ಕಳೆದುಕೊಂಡಿತು. 2 ರನ್ ಗುರಿ ಪಡೆದ ಕೆಕೆಆರ್‌ಗೆ ರಿಂಕು ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಗೆಲುವು ತಂದುಕೊಟ್ಟರು.