ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ದೋಹಾದಲ್ಲಿ ನಡೆಯಲಿರುವ 2026ರ 'ರೈಸಿಂಗ್ ಏಷ್ಯಾ ಕಪ್'ನ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡವನ್ನು ನೇಪಾಳ ಹಾಗೂ ಯುಎಇ (UAE) ಜೊತೆಗೆ ಒಂದೇ ಗುಂಪಿನಲ್ಲಿ ಇರಿಸಲಾಗಿದೆ. ಈ ಸಾಂಪ್ರದಾಯಿಕ ಎದುರಾಳಿಗಳು ನವೆಂಬರ್ 22ರಂದು 'ವೆಸ್ಟ್ ಎಂಡ್ ಪಾರ್ಕ್ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ'ನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.
'ರೈಸಿಂಗ್'ಟೂರ್ನಮೆಂಟ್‌ಗಾಗಿ ತಂಡಗಳು ಸಾಮಾನ್ಯವಾಗಿ ತಮ್ಮ 'ಎ' (A) ತಂಡಗಳನ್ನು ಕಳುಹಿಸುತ್ತವೆ. 2025ರ ಆವೃತ್ತಿಯಲ್ಲಿ ಜಿತೇಶ್ ಶರ್ಮಾ ತಂಡವನ್ನು ಮುನ್ನಡೆಸಿದರು. ಈ ತಂಡದಲ್ಲಿ ವೈಭವ್ ಸೂರ್ಯವಂಶಿ ಕೂಡ ಇದ್ದರು. ನವೆಂಬರ್ 29ರಂದು ನಡೆಯಲಿರುವ ಫೈನಲ್ ಪಂದ್ಯ ಸೇರಿದಂತೆ, ಟೂರ್ನಮೆಂಟ್‌ನ ಬಹುತೇಕ ಪಂದ್ಯಗಳು ವೈಸ್ ಮೈದಾನದಲ್ಲಿ ನಡೆಯಲಿವೆ.
ಈ ಪಂದ್ಯಾವಳಿಗಾಗಿ ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. 'ಎ' ಗುಂಪಿನಲ್ಲಿ ಶ್ರೀಲಂಕಾ 'ಎ', ಬಾಂಗ್ಲಾದೇಶ 'ಎ', ಅಫ್ಘಾನಿಸ್ತಾನ 'ಎ' ಮತ್ತು ಹಾಂಗ್ ಕಾಂಗ್, ಚೀನಾ ತಂಡಗಳಿವೆ; ಇನ್ನು 'ಬಿ' ಗುಂಪಿನಲ್ಲಿ ಭಾರತ 'ಎ', ಪಾಕಿಸ್ತಾನ 'ಎ', ನೇಪಾಳ ಮತ್ತು ಯುಎಇ (UAE) ತಂಡಗಳಿವೆ.
ಐಪಿಎಲ್ ಭವಿಷ್ಯದ ಬಗ್ಗೆ ಎಂಎಸ್ ಧೋನಿ ಸುಳಿವು, ಡಿಸೆಂಬರ್ ಒಳಗೆ ನಿರ್ಧಾರ ಸಾಧ್ಯತೆ
ಪ್ರತಿಯೊಂದು ತಂಡವು ತನ್ನ ಗುಂಪಿನಲ್ಲಿರುವ ಉಳಿದ ಮೂರು ತಂಡಗಳ ವಿರುದ್ಧ 'ಸಿಂಗಲ್ ರೌಂಡ್-ರಾಬಿನ್' ಮಾದರಿಯಲ್ಲಿ ಆಡಲಿದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿದ್ದು, ಈ ಪಂದ್ಯಗಳು ನವೆಂಬರ್ 26 ಮತ್ತು 27 ರಂದು ನಡೆಯಲಿವೆ. ಫೈನಲ್ ಪಂದ್ಯವು ನವೆಂಬರ್ 29 ರಂದು ನಡೆಯಲಿದೆ.
ಕಳೆದ ವರ್ಷ ದೋಹಾದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ ಎ ತಂಡವು ಯುಎಇ ತಂಡವನ್ನು ಮಣಿಸಿ ಅಭಿಯಾನ ಆರಂಭಿಸಿತ್ತು. ಆದರೆ ಪಾಕಿಸ್ತಾನ ಎ ವಿರುದ್ಧದ ತನ್ನ ಮುಂದಿನ ಪಂದ್ಯದಲ್ಲಿ 136 ರನ್‌ಗಳಿಗೆ ಆಲೌಟ್ ಆಗಿ ಎಂಟು ವಿಕೆಟ್‌ಗಳಿಂದ ಸೋತಿತ್ತು. ಪಾಕಿಸ್ತಾನ ಕೇವಲ 13.2 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಿತ್ತು.
ವೇಳಾಪಟ್ಟಿ
19 ನವೆಂಬರ್- ಬಾಂಗ್ಲಾದೇಶ vs ಹಾಂಗ್ ಕಾಂಗ್
19 ನವೆಂಬರ್- ಶ್ರೀಲಂಕಾ vs ಅಫ್ಘಾನಿಸ್ತಾನ
20 ನವೆಂಬರ್-ಪಾಕಿಸ್ತಾನ vs ಯುಎಇ
20 ನವೆಂಬರ್- ಭಾರತ vs ನೇಪಾಳ
21 ನವೆಂಬರ್- ಶ್ರೀಲಂಕಾ vs ಹಾಂಗ್ ಕಾಂಗ್
21 ನವೆಂಬರ್- ಬಾಂಗ್ಲಾದೇಶ vs ಅಫ್ಘಾನಿಸ್ತಾನ
22 ನವೆಂಬರ್- ಯುಎಇ vs ನೇಪಾಳ
22 ನವೆಂಬರ್- ಭಾರತ vs ಪಾಕಿಸ್ತಾನ
23 ನವೆಂಬರ್- ಅಫ್ಘಾನಿಸ್ತಾನ vs ಹಾಂಗ್ ಕಾಂಗ್
23 ನವೆಂಬರ್- ಶ್ರೀಲಂಕಾ vs ಬಾಂಗ್ಲಾದೇಶ
24 ನವೆಂಬರ್- ಭಾರತ vs ಯುಎಇ
24 ನವೆಂಬರ್- ಪಾಕಿಸ್ತಾನ vs ನೇಪಾಳ
26 ನವೆಂಬರ್- ಸೆಮಿಫೈನಲ್ 1 (A1 vs B2)
27 ನವೆಂಬರ್- ಸೆಮಿ-ಫೈನಲ್ 2 (B1 vs A2)
29 ನವೆಂಬರ್- ಫೈನಲ್