ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಕ್ರಿಕೆಟ್ ಬಗ್ಗೆ ಮಾತ್ರ ಮಾತನಾಡಿ'; ವೀಕ್ಷಕ ವಿವರಣೆಕಾರರಿಗೆ ರಿಯಾನ್‌ ಪರಾಗ್‌ ಖಡಕ್‌ ಎಚ್ಚರಿಕೆ

Riyan Parag hits out at commentators: "ಆಟಗಾರರಾಗಿ, ನಾವು ಸಾಧ್ಯವಾದಾಗಲೆಲ್ಲಾ ನಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ. ಕಳಪೆ ಪ್ರದರ್ಶನದ ನಂತರ ಆಟಗಾರರಿಗೆ ಹೇಗೆ ಆಡಬೇಕೆಂದು ತಿಳಿದಿಲ್ಲ ಅಥವಾ ಮನಸ್ಥಿತಿ ಇಲ್ಲ ಎಂದು ಹೇಳುವುದು ಸುಲಭ, ಆದರೆ ಜನರು ಪ್ರತಿ ಪಂದ್ಯದ ಹಿಂದೆ ಮೂರರಿಂದ ನಾಲ್ಕು ದಿನಗಳ ತಯಾರಿಯನ್ನು ನೋಡುವುದಿಲ್ಲ" ಎಂದು ಪರಾಗ್‌ ಟೀಕೆ ಮಾಡಿದವರಿಗೆ ಉತ್ತರ ನೀಡಿದರು.

Riyan Parag

ಜೈಪುರ, ಮೇ 20: ರಾಜಸ್ಥಾನ್ ರಾಯಲ್ಸ್(Rajasthan Royals) ತಂಡದ ನಾಯಕ ರಿಯಾನ್ ಪರಾಗ್(Riyan Parag), ಆಟಗಾರರ ಮೇಲೆ ವೈಯಕ್ತಿಕ ದಾಳಿ ಮಾಡುವುದನ್ನು ತಪ್ಪಿಸುವಂತೆ ದೂರದರ್ಶನ ನಿರೂಪಕರು ಮತ್ತು ಕ್ರಿಕೆಟ್ ತಜ್ಞರಿಗೆ ಕರೆ ನೀಡಿದ್ದಾರೆ. ಟೀಕೆಗಳು ಮೈದಾನದ ಹೊರಗಿನ ವಿಷಯಗಳಿಗಿಂತ ಕ್ರಿಕೆಟ್ ಮೇಲೆ ಕೇಂದ್ರೀಕೃತವಾಗಿರಬೇಕು ಎಂದು ಹೇಳಿದ್ದಾರೆ.

ಮಂಗಳವಾರ ಜೈಪುರದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡವು ಏಳು ವಿಕೆಟ್‌ಗಳ ಜಯಗಳಿಸಿದ ನಂತರ ಮಾತನಾಡಿದ ಪರಾಗ್, ಆಟಗಾರರು ಎದುರಿಸುವ ಪರಿಶೀಲನೆಯ ಬಗ್ಗೆ, ವಿಶೇಷವಾಗಿ ಚರ್ಚೆಗಳು ಪ್ರದರ್ಶನಗಳಿಂದ ದೂರ ಸರಿದು ವೈಯಕ್ತಿಕ ಕ್ಷೇತ್ರಕ್ಕೆ ತಿರುಗಿದಾಗ ಅದು ನಿಜಕ್ಕೂ ನೋವುಂಟು ಮಾಡುತ್ತದೆ ಎಂದು ಹೇಳಿದರು. ಮಂಡಿರಜ್ಜು ಸಮಸ್ಯೆಯಿಂದಾಗಿ ರಿಯಾನ್‌ ಪರಾಗ್‌ ಲಖನೌ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು.

ಐಪಿಎಲ್‌ಗೆ ಸಂಬಂಧಿಸಿದಂತೆ, ಈ ವರ್ಷ ಹೊರಗೆ ಬಹಳಷ್ಟು ವಿಷಯಗಳು ನಡೆಯುತ್ತಿವೆ ಎಂದು ಪರಾಗ್ ಹೇಳಿದರು. "ಆಟಗಾರರಾಗಿ, ನಾವು ಸಾಧ್ಯವಾದಾಗಲೆಲ್ಲಾ ನಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ. ಕಳಪೆ ಪ್ರದರ್ಶನದ ನಂತರ ಆಟಗಾರರಿಗೆ ಹೇಗೆ ಆಡಬೇಕೆಂದು ತಿಳಿದಿಲ್ಲ ಅಥವಾ ಮನಸ್ಥಿತಿ ಇಲ್ಲ ಎಂದು ಹೇಳುವುದು ಸುಲಭ, ಆದರೆ ಜನರು ಪ್ರತಿ ಪಂದ್ಯದ ಹಿಂದೆ ಮೂರರಿಂದ ನಾಲ್ಕು ದಿನಗಳ ತಯಾರಿಯನ್ನು ನೋಡುವುದಿಲ್ಲ" ಎಂದು ಪರಾಗ್‌ ಟೀಕೆ ಮಾಡಿದವರಿಗೆ ಉತ್ತರ ನೀಡಿದರು.

'ಎ' ಸಂಭ್ರಮಾಚರಣೆಯ ಅರ್ಥವನ್ನು ಬಹಿರಂಗಪಡಿಸಿದ ವೈಭವ್ ಸೂರ್ಯವಂಶಿ

ಕ್ರಿಕೆಟ್‌ ಕಾಮೆಂಟರಿ ಮಾಡುವ ವ್ಯಾಖ್ಯಾನಕಾರರು ಆಟಗಾರರ ಬಗ್ಗೆ ಚರ್ಚಿಸುವ ವಿಧಾನದಲ್ಲಿ ಹೆಚ್ಚು ಜವಾಬ್ದಾರಿಯುತವಾಗಿರಬೇಕು ಎಂದು ಹೇಳಿದ ಪರಾಗ್‌, "ನಾವು ಕೂಡ ಮನುಷ್ಯರು ಮತ್ತು ನಾವು ಕೂಡ ತಪ್ಪುಗಳನ್ನು ಮಾಡುತ್ತೇವೆ. ಕ್ರಿಕೆಟ್ ದೇಶದ ಅತಿದೊಡ್ಡ ಕ್ರೀಡೆಯಾಗಿದೆ ಮತ್ತು ಅದನ್ನು ಗೌರವದಿಂದ ನಡೆಸಿಕೊಳ್ಳಬೇಕು. ನಾವು ಕ್ರಿಕೆಟ್ ಬಗ್ಗೆ ಮಾತ್ರ ಮಾತನಾಡಬೇಕು, ಬೇರೆ ಯಾವುದರ ಬಗ್ಗೆಯೂ ಅಲ್ಲ" ಎಂದು ಹೇಳಿದರು.

"ಕಳೆದ ನಾಲ್ಕು ವರ್ಷಗಳಿಂದ, ನಾನು ಏನೇ ಮಾಡಿದರೂ ಟೀಕೆಗಳು ಇರುತ್ತವೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಕಾಮೆಂಟ್ರಿ ಮಾಡುವ ಹೊರಗಿನವರು ಎಂಬ ಕಾರಣಕ್ಕೆ ಅದು ನನ್ನ ಆಟ, ನನ್ನ ಫಾರ್ಮ್ ಅಥವಾ ನನ್ನ ಮನಸ್ಥಿತಿಯ ಮೇಲೆ ಪರಿಣಾಮ ಬೀರಬಾರದು ಎಂದು ನಾನು ಅರಿತುಕೊಂಡಿದ್ದೇನೆ" ಎಂದರು.