ನವದೆಹಲಿ, ಜ.25: 2026ನೇ ಸಾಲಿನ ಪದ್ಮ ಪ್ರಶಸ್ತಿ(Padma Awards 2026) ಪ್ರಕಟವಾಗಿದ್ದು ಒಂಬತ್ತು ಕ್ರೀಡಾಪಟುಗಳಲ್ಲಿ ಭಾರತದ ಮಾಜಿ ನಾಯಕಿ ರೋಹಿತ್ ಶರ್ಮಾ ಮತ್ತು ಪ್ರಸ್ತುತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಸೇರಿದ್ದಾರೆ ಎಂದು ಗೃಹ ಸಚಿವಾಲಯದ ಪತ್ರಿಕಾ ಪ್ರಕಟಣೆ ಭಾನುವಾರ, ಜನವರಿ 25 ರಂದು ದೃಢಪಡಿಸಿದೆ. ರೋಹಿತ್ ಮತ್ತು ಹರ್ಮನ್‌ಪ್ರೀತ್ ಇಬ್ಬರೂ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕ್ರೀಡೆಗೆ ನೀಡಿದ ಅಪ್ರತಿಮ ಕೊಡುಗೆಗಾಗಿ ಭಾರತದ ಮಾಜಿ ಟೆನಿಸ್ ಆಟಗಾರ ವಿಜಯ್ ಅಮೃತರಾಜ್ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪದ್ಮಭೂಷಣ ಪ್ರಶಸ್ತಿಯನ್ನು ಪಡೆಯುತ್ತಿರುವ ಏಕೈಕ ಕ್ರೀಡಾಪಟು ಅವರು. ಮಾಜಿ ಟೆನಿಸ್ ತಾರೆಗೆ ಈ ಹಿಂದೆ 1983 ರಲ್ಲಿ ಪದ್ಮಶ್ರೀ ಮತ್ತು 1974 ರಲ್ಲಿ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು, ಇದು ಭಾರತೀಯ ಕ್ರೀಡೆಗೆ ಅವರ ಶಾಶ್ವತ ಕೊಡುಗೆಯನ್ನು ಎತ್ತಿ ತೋರಿಸುತ್ತದೆ.
ಮಾಜಿ ಭಾರತೀಯ ಕ್ರಿಕೆಟಿಗ ವಿನಯ್ ಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗುವುದು. ಈ ಮೂವರಲ್ಲದೆ, ಬಲದೇವ್ ಸಿಂಗ್, ಭಗವಾನ್‌ದಾಸ್ ರಾಯ್ಕ್ವಾರ್, ಕೆ ಪಜನಿವೇಲ್, ಸವಿತಾ ಪುನಿಯಾ ಮತ್ತು ವ್ಲಾಡಿಮಿರ್ ಮೆಸ್ಟ್ವಿರಿಶ್ವಿಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆಯಲಿದ್ದಾರೆ.
ಸಿಎಸ್‌ಕೆಗೆ ಭಾರಿ ಹೊಡೆತ; 14 ಕೋಟಿ ಆಟಗಾರನಿಗೆ ಗಾಯ, ಐಪಿಎಲ್‌ಗೆ ಅನುಮಾನ
ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮ ಅವರು ಗೌರವಕ್ಕೆ ಪಾತ್ರರಾಗಿದ್ದಾರೆ. ರೋಹಿತ್ ನಾಯಕತ್ವದಲ್ಲಿ 2024ರಲ್ಲಿ ಭಾರತ ತಂಡ ಟಿ20 ವಿಶ್ವಕಪ್ ಗೆದ್ದಿತ್ತು. 38 ವರ್ಷ ವಯಸ್ಸಿನ ರೋಹಿತ್ ಇತ್ತೀಚೆಗೆ ಟೆಸ್ಟ್ ಮತ್ತು T20I ಕ್ರಿಕೆಟ್‌ನಿಂದ ನಿವೃತ್ತರಾದರು. ಸದ್ಯ ಏಕದಿನ ಸ್ವರೂಪದಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುವುದನ್ನು ಮುಂದುವರೆಸಿದ್ದಾರೆ.
ನಾಗರಿಕ ಪ್ರಶಸ್ತಿಗಳನ್ನು ಪಡೆಯಲಿರುವ ಕ್ರೀಡಾಪಟುಗಳ ಪಟ್ಟಿ ಇಲ್ಲಿದೆ
ವಿಜಯ್ ಅಮೃತರಾಜ್
ಬಲದೇವ್ ಸಿಂಗ್
ಭಗವಾನದಾಸ್ ರೈಕ್ವಾರ್
ಹರ್ಮನ್‌ಪ್ರೀತ್ ಕೌರ್
ಕೆ ಪಜನಿವೇಲ್
ಪ್ರವೀಣ್ ಕುಮಾರ್
ರೋಹಿತ್ ಶರ್ಮಾ
ಸವಿತಾ ಪುನಿಯಾ
ವ್ಲಾಡಿಮರ್ ಮೆಸ್ಟ್ವಿರಿಶ್ವಿಲಿ