ರಾಯ್ಪುರ, ಡಿ.3: ಇಂದು(ಬುಧವಾರ) ದಕ್ಷಿಣ ಆಫ್ರಿಕಾ(IND vs SA 2nd ODI) ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ(Rohit Sharma,) ಮೈದಾನಕ್ಕಿಳಿಯುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದು ದೊಡ್ಡ ಮೈಲಿಗಲ್ಲನ್ನು ನಿರ್ಮಿಸಲಿದ್ದಾರೆ. 38 ವರ್ಷದ ರೋಹಿತ್ ಪಂದ್ಯದಲ್ಲಿ 56 ರನ್ ಬಾರಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ಸಾವಿರ ರನ್ ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ 14ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
ಅತ್ಯಧಿಕ ರನ್ ದಾಖಲೆ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಅವರು 664 ಪಂದ್ಯಗಳಿಂದ 34,357 ರನ್ ಬಾರಿಸಿದ್ದಾರೆ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. 554* ಪಂದ್ಯಗಳನ್ನಾಡಿ 27,808* ರನ್ ಗಳಿಸಿದ್ದಾರೆ.
ರೋಹಿತ್ ತವರಿನಲ್ಲಿ ತಮ್ಮ ಸಂಖ್ಯೆಗಳಿಗೆ ಸಂಬಂಧಿಸಿದಂತೆ ಮತ್ತೊಂದು ಮೈಲಿಗಲ್ಲು ತಲುಪುತ್ತಿದ್ದಾರೆ. ರೋಹಿತ್ ಪ್ರಸ್ತುತ ತವರಿನಲ್ಲಿ ಏಕದಿನ ಪಂದ್ಯಗಳಲ್ಲಿ 4,924 ರನ್ ಮತ್ತು ಭಾರತದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 8,991 ರನ್ ಗಳಿಸಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ಗೆ ಆಯಾ ಮೈಲಿಗಲ್ಲುಗಳನ್ನು ತಲುಪಲು 76 ಮತ್ತು 9 ರನ್‌ಗಳು ಬೇಕಾಗಿದೆ. ಬುಧವಾರ ರಾಯ್‌ಪುರದಲ್ಲಿ 14 ರನ್ ಗಳಿಸಿದರೆ ರೋಹಿತ್ ಅವರು ರಾಹುಲ್ ದ್ರಾವಿಡ್ (9,004) ಅವರನ್ನು ಹಿಂದಿಕ್ಕಬಹುದು.
ಇದನ್ನೂ ಓದಿ IND vs SA: ಈ ಇಬ್ಬರಿಂದ ಡ್ರೆಸ್ಸಿಂಗ್ ರೂಂ ವಾತಾವರಣ ಚೆನ್ನಾಗಿದೆ'-ಹರ್ಷಿತ್ ರಾಣಾ!
503 ಪಂದ್ಯಗಳ 536 ಇನಿಂಗ್ಸ್‌ಗಳಲ್ಲಿ ಕಣಕ್ಕಿಳಿದಿರುವ ರೋಹಿತ್ ಖಾತೆಯಲ್ಲಿ ಒಟ್ಟಾರೆಯಾಗಿ 645 ಸಿಕ್ಸರ್‌ಗಳಿವೆ. ಇನ್ನು 5 ಸಿಕ್ಸರ್ ಸಿಡಿಸಿದರೆ 650ರ ಗಡಿ ದಾಟಿದ ಏಕೈಕ ಬ್ಯಾಟರ್ ಎಂಬ ಶ್ರೇಯ ಅವರದ್ದಾಗಲಿದೆ. ತವರಿನಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ 5,000 ರನ್ ಗಳಿಸಿದ ಸಾಧನೆ ಮಾಡಲು ರೋಹಿತ್‌ಗೆ ಇನ್ನು 76 ರನ್ ಬೇಕಿದೆ. ಇನ್ನುಳಿದ ಎರಡು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದರೆ ಈ ದಾಲೆಯನ್ನು ಬರೆಯಬಹುದು.
20 ಸಾವಿರ ಅಂತರರಾಷ್ಟ್ರೀಯ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳು
ಸಚಿನ್ ತೆಂಡೂಲ್ಕರ್ - 664 ಪಂದ್ಯಗಳು - 34,357 ರನ್
ಕುಮಾರ್ ಸಂಗಕ್ಕಾರ - 594 ಪಂದ್ಯಗಳು - 28,016 ರನ್
ವಿರಾಟ್ ಕೊಹ್ಲಿ - 554* ಪಂದ್ಯಗಳು - 27,808* ರನ್
ರಿಕಿ ಪಾಂಟಿಂಗ್ - 560 ಪಂದ್ಯಗಳು - 27,483 ರನ್
ಮಹೇಲ ಜಯವರ್ಧನೆ - 652 ಪಂದ್ಯಗಳು - 25,957 ರನ್
ಜಾಕ್ವೆಸ್ ಕಾಲಿಸ್ - 519 ಪಂದ್ಯಗಳು - 25,534 ರನ್
ರಾಹುಲ್ ದ್ರಾವಿಡ್ - 509 ಪಂದ್ಯಗಳು - 24,208 ರನ್
ಬ್ರಿಯಾನ್ ಲಾರಾ - 430 ಪಂದ್ಯಗಳು - 22,358 ರನ್
ಜೋ ರೂಟ್ - 377 ಪಂದ್ಯಗಳು - 21,774 ರನ್
ಸನತ್ ಜಯಸೂರ್ಯ - 586 ಪಂದ್ಯಗಳು - 21,032 ರನ್
ಶಿವನಾರಾಯಣ್ ಚಂದ್ರಪಾಲ್ - 454 ಪಂದ್ಯಗಳು - 20,988 ರನ್
ಇಂಜಮಾಮ್-ಉಲ್-ಹಕ್ - 499 ಪಂದ್ಯಗಳು - 20,580 ರನ್
ಎಬಿ ಡಿವಿಲಿಯರ್ಸ್ - 420 ಪಂದ್ಯಗಳು - 20,014 ರನ್