ಕೊಲಂಬೊ, ಫೆ.15: ಇಂದು ಕೊಲಂಬೊದಲ್ಲಿ ನಡೆಯಲಿರುವ ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಿಸಲು ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮ(Rohit Sharma) ಅವರು ಶ್ರೀಲಂಕಾ ತಲುಪಿದ್ದಾರೆ. ಪತ್ನಿ ಜತೆ ಲಂಕಾ ವಿಮಾನ ನಿಲ್ದಾಣದಲ್ಲಿರುವ ವಿಡಿಯೊ ಸಾಮಾಜಿಕ ಜಾಲತಾಣದದಲ್ಲಿ ವೈರಲ್ ಆಗಿದೆ.
ರೋಹಿತ್ ಅವರ ನಾಯಕತ್ವದಲ್ಲಿ ಭಾರತ 2024ರ ಟಿ20 ವಿಶ್ವಕಪ್ ಜಯಿಸಿತ್ತು. ಈ ಸ್ಮರಣೀಯ ಗೆಲುವಿನ ಬಳಿಕ ರೋಹಿತ್ ಟಿ20 ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು. ಸದ್ಯ ಅವರು ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಭಾರತ ಪರ ಆಡುತ್ತಿದ್ದಾರೆ. ಇದೀಗ ತಮ್ಮ ತಂಡವನ್ನು ಬೆಂಬಲಿಸುವ ಸಲುವಾಗಿ ಅವರು ಶ್ರೀಲಂಕಾಗೆ ಬಂದಿದ್ದಾರೆ. ರೋಹಿತ್ ಶರ್ಮಾ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯ ರಾಯಭಾರಿಯೂ ಆಗಿದ್ದಾರೆ.
ಇತ್ತೀಚೆಗೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅಮೆರಿಕ ವಿರುದ್ಧ ಭಾರತದ ಉದ್ಘಾಟನಾ ಪಂದ್ಯದಲ್ಲಿ ಅವರು ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ ಹೊರನಡೆಯುತ್ತಿರುವುದು ಕಂಡುಬಂದಿತ್ತು.
ಎರಡೂ ತಂಡಗಳು ಅಜೇಯವಾಗಿ ಉಳಿದು ತಲಾ ನಾಲ್ಕು ಅಂಕಗಳೊಂದಿಗೆ ಸಮಬಲ ಸಾಧಿಸಿವೆ. ಭಾರತವು ಬಲವಾದ ರನ್‌ರೇಟ್ ದರದೊಂದಿಗೆ ಗ್ರೂಪ್ ಎ ನಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಪಾಕಿಸ್ತಾನ ಎರಡನೇ ಸ್ಥಾನದಲ್ಲಿದೆ. ಸೂಪರ್ ಎಂಟನೇ ಸ್ಥಾನ ಮತ್ತು ಅಗ್ರಸ್ಥಾನಕ್ಕೆ ಈ ಪಂದ್ಯ ಮಹತ್ವದ್ದಾಗಿದೆ.
ಭಾರತದ ಸಂಭಾವ್ಯ XI: ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (WK), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (C), ಹಾರ್ದಿಕ್ ಪಾಂಡ್ಯ , ಶಿವಂ ದುಬೆ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಅರ್ಷ್ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ