ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆಶಸ್ ಟೆಸ್ಟ್‌ ಸೋತ ಇಂಗ್ಲೆಂಡ್‌ ತಂಡವನ್ನು ಟ್ರೋಲ್‌ ಮಾಡಿದ ರೋಹಿತ್‌

Rohit Sharma Trolls England: ಗುರುಗ್ರಾಮ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರೋಹಿತ್‌, ಅಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುವ ವೇಳೆ, ಆಸ್ಟ್ರೇಲಿಯಾದಲ್ಲಿ ಆಡುವುದು ಅತ್ಯಂತ ಕಷ್ಟ, ನೀವು ಅದರ ಬಗ್ಗೆ ಇಂಗ್ಲೆಂಡ್‌ ತಂಡದ ಬಳಿ ಕೇಳಬಹುದು" ಎಂದು ಹೇಳಿದರು.

Rohit Sharma

ಮುಂಬಯಿ, ಡಿ.22: ವಿಶ್ವದ ನಂ. 1 ಏಕದಿನ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ(Rohit Sharma) ಅವರು ಇಂಗ್ಲೆಂಡ್ ಪುರುಷರ ಕ್ರಿಕೆಟ್ ತಂಡವನ್ನು ಟ್ರೋಲ್‌(Rohit Sharma Trolls England) ಮಾಡಿದ್ದಾರೆ. 5 ಪಂದ್ಯಗಳ ಆಶಸ್ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್‌ ಮೂರು ಪಂದ್ಯಗಳಲ್ಲಿಯೂ ಹೀನಾಯ ಸೋಲು ಕಂಡಿರುವ ಬೆನ್ನಲ್ಲೇ, ಆಸ್ಟ್ರೇಲಿಯಾದಲ್ಲಿ ಆಡುವುದು ಅತ್ಯಂತ ಕಷ್ಟಕರವಾಗಿದೆ ಮತ್ತು ಇದರ ಬಗ್ಗೆ ಇಂಗ್ಲೆಂಡ್ ತಂಡವನ್ನು ಕೇಳಬಹುದು ಎಂದು ಹೇಳುವ ಮೂಲಕ ರೋಹಿತ್‌ ಇಂಗ್ಲೆಂಡ್‌ ತಂಡವನ್ನು ಟ್ರೋಲ್‌ ಮಾಡಿದ್ದಾರೆ.

ಗುರುಗ್ರಾಮ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರೋಹಿತ್‌, ಅಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುವ ವೇಳೆ, ಆಸ್ಟ್ರೇಲಿಯಾದಲ್ಲಿ ಆಡುವುದು ಅತ್ಯಂತ ಕಷ್ಟ, ನೀವು ಅದರ ಬಗ್ಗೆ ಇಂಗ್ಲೆಂಡ್‌ ತಂಡದ ಬಳಿ ಕೇಳಬಹುದು" ಎಂದು ಹೇಳಿದರು.

2024 ರ ಡಿಸೆಂಬರ್ 26 ರಿಂದ 30 ರವರೆಗೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತ ಪರ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ ರೋಹಿತ್, ಆಸ್ಟ್ರೇಲಿಯಾದಲ್ಲಿ 1000 ಏಕದಿನ ರನ್ ಗಳಿಸಿದ ಏಕೈಕ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ. ನವೆಂಬರ್ 2013 ರಲ್ಲಿ ಸಚಿನ್ ತೆಂಡೂಲ್ಕರ್ ಅವರ ವಿದಾಯ ಸರಣಿಯ ಸಮಯದಲ್ಲಿ ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಂತರ, ರೋಹಿತ್ ಆಸ್ಟ್ರೇಲಿಯಾದಲ್ಲಿ 10 ಪಂದ್ಯಗಳನ್ನು ಆಡಿದರು ಆದರೆ 19 ಇನ್ನಿಂಗ್ಸ್‌ಗಳಲ್ಲಿ ಕೇವಲ 439 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾದರು.



2023ರ ವಿಶ್ವಕಪ್ ಫೈನಲ್ ನಂತರ ಏನೂ ಉಳಿದಿಲ್ಲ ಎಂದು ನನಗೆ ಅನಿಸಿತು. ನಾನು ಸಂಪೂರ್ಣವಾಗಿ ನಿರಾಶನಾಗಿದ್ದೆ. ಆದರೆ ಕ್ರಿಕೆಟ್ ಅನ್ನು ಸುಲಭವಾಗಿ ಬಿಡಲು ಸಾಧ್ಯವಿಲ್ಲ ಎಂದು ಅರಿತುಕೊಳ್ಳಲು ನನಗೆ ಸಮಯ ಹಿಡಿಯಿತು. ನಿಧಾನವಾಗಿ ನಾನು ನನ್ನ ಶಕ್ತಿಯನ್ನು ಮರಳಿ ಪಡೆದು ಮೈದಾನದಲ್ಲಿ ಸಕ್ರಿಯನಾದೆ. ಅಂದು ಎಲ್ಲರೂ ನಿರಾಶರಾಗಿದ್ದರು. ಆಸೀಸ್ ವಿರುದ್ಧದ ಫೈನಲ್‌ನಲ್ಲಿ ಏನಾಯಿತು ಎಂಬುದನ್ನು ನಂಬಲು ನಮಗೆ ಸಾಧ್ಯವಾಗಲಿಲ್ಲ. 2022ರಲ್ಲಿ ನಾನು ನಾಯಕತ್ವ ವಹಿಸಿಕೊಂಡ ನಂತರ, ವಿಶ್ವಕಪ್ ಗೆಲ್ಲುವುದೇ ನನ್ನ ಏಕೈಕ ಗುರಿಯಾಗಿತ್ತು, ಅದು ಟಿ20 ವಿಶ್ವಕಪ್ ಆಗಿರಲಿ ಅಥವಾ 2023ರ ವಿಶ್ವಕಪ್ ಆಗಿರಲಿ. ಅದು ಆಗದಿದ್ದಾಗ, ನಾನು ಸಂಪೂರ್ಣವಾಗಿ ಕುಸಿದುಹೋದೆ. ನನ್ನನ್ನು ನಾನು ಸರಿಪಡಿಸಿಕೊಳ್ಳಲು ಎರಡು ತಿಂಗಳು ಬೇಕಾಯಿತು ಎಂದು ರೋಹಿತ್ ಹೇಳಿದರು.

ಇದನ್ನೂ ಓದು ರೋಹಿತ್‌-ಕೊಹ್ಲಿ ಇದ್ದಾಗಲೂ ಸರಣಿ ಸೋತಿದ್ದೇವೆ; ಗಂಭೀರ್‌ ಪರ ಬ್ಯಾಟ್‌ ಬೀಸಿದ ಗವಾಸ್ಕರ್‌!

ಸದ್ಯ ಏಕದಿನ ಕ್ರಿಕೆಟ್‌ ಮಾದರಿಯಲ್ಲಿ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಹಿಟ್‌ಮ್ಯಾನ್ ಇದೀಗ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೇಲೆ ಕಣ್ಣಿಟ್ಟಿದ್ದಾರೆ.