ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಸಾಮರ್ಥ್ಯ, ದೌರ್ಬಲ್ಯ ಹೇಗಿದೆ?

IPL 2026: ಶನಿವಾರ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಉದ್ಘಾಟನಾ ಪಂದ್ಯದೊಂದಿಗೆ 19ನೇ ಆವೃತ್ತಿಯಲ್ಲಿ ಅಭಿಯಾನ ಆರಂಭಿಸಲಿರುವ ಆರ್​ಸಿಬಿ, ಶುಭಾರಂಭ ಕಾಣುವ ತವಕದಲ್ಲಿದೆ. ಕಳೆದ ವರ್ಷದ ಮೇ 3ರ ನಂತರ ಆರ್​ಸಿಬಿ ತಂಡ ತನ್ನ ತವರಿನಲ್ಲಿ ಮೊದಲ ಪಂದ್ಯ ಆಡಲಿದೆ.

virat kohli and phil salt

ಬೆಂಗಳೂರು, ಮಾ.24: ಹಾಲಿ ಚಾಂಪಿಯನ್‌ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ತಂಡದ ಪಾಲಿಗೆ ಈ ಸಲದ ಐಪಿಎಲ್​ (IPL) ಟೂರ್ನಿ ಅತ್ಯಂತ ವಿಶೇಷವಾಗಿದೆ. ಈ ಬಾರಿಯೂ ಟ್ರೋಫಿ ಉಳಿಸಿಕೊಳ್ಳುವ ಹೊಸ ಸವಾಲಿನೊಂದಿಗೆ ತಂಡ ಕಣಕ್ಕಿಳಿಯಲಿದೆ. ಆರ್​ಸಿಬಿ ಕಳೆದ ಆವೃತ್ತಿಯ ಬಹುತೇಕ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದ್ದು, ಮಿನಿ ಹರಾಜಿನಲ್ಲಿ ಸೇರ್ಪಡೆಯಾಗಿರುವ ಕೆಲ ಆಟಗಾರರು ತಂಡಕ್ಕೆ ಇನ್ನಷ್ಟು ಬಲ ತುಂಬುವ ನಿರೀಕ್ಷೆ ಇದೆ. ತಂಡದ ಸಾಮರ್ಥ್ಯ ಮತ್ತು ದೌರ್ಬಲ್ಯ ಹೇಗಿದೆ ಎಂಬ ವರದಿ ಇಲ್ಲಿದೆ.

ಸಾಮರ್ಥ್ಯ

ಆರ್‌ಸಿಬಿಯ ದೊಡ್ಡ ಶಕ್ತಿ ಅವರ ಬ್ಯಾಟಿಂಗ್‌ನಲ್ಲಿದೆ. ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಅಗ್ರ ಕ್ರಮಾಂಕದಲ್ಲಿ ಇರುವುದರಿಂದ, ಫ್ರಾಂಚೈಸಿ ಐಪಿಎಲ್‌ನಲ್ಲಿ ಅತ್ಯಂತ ರೋಮಾಂಚಕಾರಿ ಆರಂಭಿಕ ಪಾಲುದಾರಿಕೆಗಳಲ್ಲಿ ಒಂದನ್ನು ಹೊಂದಿದೆ. ಹಿಂದಿನ ಋತುವಿನಲ್ಲಿ, ಸಾಲ್ಟ್ ಆರ್‌ಸಿಬಿಗೆ ಅನೇಕ ಸಂದರ್ಭಗಳಲ್ಲಿ ಸ್ಫೋಟಕ ಆರಂಭವನ್ನು ಒದಗಿಸಿದರು, ಬೃಹತ್ ಮೊತ್ತವನ್ನು ದಾಖಲಿಸಲು ಪರಿಪೂರ್ಣ ವೇದಿಕೆಯನ್ನು ನೀಡಿದರು. ವಿಶೇಷವಾಗಿ ವೆಂಕಟೇಶ್ ಅಯ್ಯರ್ ತಂಡ ಸೇರಿರುವುದು ಬ್ಯಾಟಿಂಗ್‌ಗೆ ಇನ್ನಷ್ಟು ಬಲ ಬಂದಂತಾಗಿದೆ. ಮಧ್ಯಮ ಕ್ರಮಾಂಕದಲ್ಲಿ ನಾಯಕ ರಜತ್ ಪಾಟಿದಾರ್, ಜಿತೇಶ್ ಶರ್ಮಾ, ಟಿಮ್‌ ಡೇವಿಡ್‌ ಮತ್ತು ಕೃನಾಲ್ ಪಾಂಡ್ಯ ಬಿರುಸಿನ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ.

ಇವರೊಂದಿಗೆ ಕಿವೀಸ್​ ವೇಗಿ ಜೇಕಬ್​ ಡಫಿ, ಇಂಗ್ಲೆಂಡ್​ನ ಸ್ಫೋಟಕ ಬ್ಯಾಟರ್​-ವಿಕೆಟ್​ ಕೀಪರ್​ ಜೋರ್ಡನ್​ ಕಾಕ್ಸ್​, 19 ವಯೋಮಿತಿ ವಿಶ್ವಕಪ್​ ವಿಜೇತ ಭಾರತ ತಂಡದ ಆಲ್ರೌಂಡರ್​ ವಿಹಾನ್​ ಮಲ್ಹೋತ್ರಾ, ಆಲ್ರೌಂಡರ್​ ಮಂಗೇಶ್​ ಯಾದವ್​ ಈ ಸಲದ ಪ್ರಮುಖ ಹೊಸ ಸೇರ್ಪಡೆಯಾಗಿದ್ದಾರೆ.

ದೌರ್ಬಲ್ಯ

ಆರ್‌ಸಿಬಿಯ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದ ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್‌ವುಡ್ ಗಾಯಗೊಂಡಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಚೇತರಿಕೆ ಕಾಣುತ್ತಿರುವ ಅವರು ಇನ್ನೂ ಆರ್‌ಸಿಬಿ ತಂಡ ಸೇರಿಲ್ಲ. ಅವರ ಫಿಟ್‌ನೆಸ್ ಬಗ್ಗೆ ಅನುಮಾನಗಳಿವೆ. ಇನ್ನೊಂದೆಡೆ ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ ವೇಗಿ ಯಶ್​ ದಯಾಳ್​ ಈ ಬಾರಿ ಆರ್​ಸಿಬಿ ಪರ ಕಣಕ್ಕಿಳಿಯುವುದು ಅನುಮಾನವೆನಿಸಿದೆ. ಅವರಿನ್ನೂ ತಂಡದ ಶಿಬಿರವನ್ನು ಕೂಡಿಕೊಂಡಿಲ್ಲ. ತಂಡದಲ್ಲಿರುವ ಹಿರಿಯ ಹಾಗೂ ಅನುಭವಿ ವೇಗಿ ಭುವನೇಶ್ವರ್‌ ಕುಮಾರ್‌ ತಂಡದ ಬೌಲಿಂಗ್‌ ವಿಭಾಗವನ್ನು ಮುನ್ನಡೆಸಬೇಕಿದೆ.

ಐಪಿಎಲ್ 2026 ರಲ್ಲಿ ಧೋನಿ ಸಿಎಸ್‌ಕೆ ನಾಯಕನಾಗಿರಬೇಕು: ಆಕಾಶ್ ಚೋಪ್ರಾ

ತಂಡ

ಪ್ಲೇಯಿಂಗ್​ 11: ವಿರಾಟ್​ ಕೊಹ್ಲಿ, ಫಿಲ್​ ಸಾಲ್ಟ್​, ದೇವದತ್​ ಪಡಿಕ್ಕಲ್​/ವೆಂಕಟೇಶ್​ ಅಯ್ಯರ್​/ಜೇಕಬ್​ ಬೆಥೆಲ್​, ರಜತ್​ ಪಾಟೀದಾರ್​ (ನಾಯಕ), ಟಿಮ್​ ಡೇವಿಡ್​/ರೊಮಾರಿಯೊ ಶೆರ್ಡ್​, ಜಿತೇಶ್​ ಶರ್ಮ (ವಿ.ಕೀ), ಕೃನಾಲ್​ ಪಾಂಡ್ಯ, ಭುವನೇಶ್ವರ್​, ರಸಿಕ್​ ಸಲಾಂ ದಾರ್​, ಜೋಶ್​ ಹ್ಯಾಸಲ್​ವುಡ್​/ಜೇಕಬ್​ ಡಫಿ, ಸುಯಶ್​ ಶರ್ಮ/ಸ್ವಪ್ನಿಲ್​ ಸಿಂಗ್​.

ಇಂಪ್ಯಾಕ್ಟ್​ ಪ್ಲೇಯರ್ಸ್​: ವೆಂಕಟೇಶ್​ ಅಯ್ಯರ್​, ಮಂಗೇಶ್​ ಯಾದವ್​.

ಮೀಸಲು: ವಿಹಾನ್​ ಮಲ್ಹೋತ್ರಾ, ನುವಾನ್​ ತುಷಾರ, ಜೋರ್ಡನ್​ ಕಾಕ್ಸ್​, ಕನಿಷ್ಕ್​ ಚೌಹಾಣ್​, ವಿಕಿ ಒಸ್ತ್​ವಾಲ್​, ಸತ್ವಿಕ್​ ದೇಸ್ವಾಲ್​, ಅಭಿನಂದನ್​ ಸಿಂಗ್​, ಯಶ್​ ದಯಾಳ್​.